ವ್ಯತೀಪಾತ ಯೋಗ: ಈ ರಾಶಿಯವರಿಗೆ ಗುರು ದೆಸೆಯಿಂದ ಮುಟ್ಟಿದ್ದೆಲ್ಲಾ ಚಿನ್ನವಾಗುವ ಪರ್ವಕಾಲ

Written ByYashaswini V
Published: Sep 05, 2025, 07:39 AM IST|Updated: Sep 05, 2025, 07:39 AM IST

Guru Chandra Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಚಕ್ರ ಅಥವಾ ನಕ್ಷತ್ರದಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಒಟ್ಟಿಗೆ ಸೇರಿದಾದ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. ಇವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತವೆ. ಇದೀಗ ಶ್ರೀಘ್ರದಲ್ಲೇ ಒಂದೇ ರಾಶಿಯಲ್ಲಿ ಗುರು ಮತ್ತು ಚಂದ್ರನ ಯುತಿ ಏರ್ಪಡಲಿದ್ದು ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ವ್ಯತೀಪಾತ ಯೋಗ ರೂಪುಗೊಳ್ಳಲಿದೆ. 

Guru Bhukti1/6

ಗುರು ಬಲ

ವೈದಿಕ ಜ್ಯೋತಿಷ್ಯದಲ್ಲಿ ದೇವಗುರು ಬೃಹಸ್ಪತಿಯನ್ನು ಅತ್ಯಂತ ಮಂಗಳಕರ ಗ್ರಹ ಎಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಬಲಶಾಲಿಯಾಗಿದ್ದಾಗ ಗುರು ಆಶೀರ್ವಾದ ಇದ್ದಾಗ ಅಂತಹ ವ್ಯಕ್ತಿ ಜೀವನದಲ್ಲಿ ಎಂತಹ ಕಷ್ಟವನ್ನೇ ಆದರೂ ನಿರಾಯಾಸವಾಗಿ ನಿಭಾಯಿಸುತ್ತಾನೆ. ಅಲ್ಲದೆ, ಅವರ ಜೀವನದಲ್ಲಿ ಸುಖ-ಸಂತೋಷಕ್ಕೆ ಕೊರತೆಯೇ ಇರುವುದಿಲ್ಲ ಎನ್ನಲಾಗುತ್ತದೆ. 

Guru Chandra Yuti2/6

ಗುರು ಚಂದ್ರ ಸಂಯೋಗ

ಪ್ರಸ್ತುತ, ಗುರು ಮಿಥುನ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. 15 ಸೆಪ್ಟೆಂಬರ್ 2025ರಂದು ಮನಸ್ಸಿನ ಅಂಶವಾದ ಚಂದ್ರನೂ ಸಹ ಮಿಥುನ ರಾಶಿಗೆ ಪದಾರ್ಪಣೆ ಮಾಡುವುದರಿಂದ ಮಿಥುನ ರಾಶಿಯಲ್ಲಿ ಗುರು-ಚಂದ್ರರ ಯುತಿ ಏರ್ಪಡಲಿದೆ. ಇದರಿಂದ ವ್ಯತೀಪಾತ ಯೋಗವೂ ನಿರ್ಮಾಣವಾಗಲಿದೆ. 

Vyatipata Yoga Effect3/6

ವ್ಯತೀಪಾತ ಯೋಗ ಪ್ರಭಾವ

ಗುರು ಚಂದ್ರರ ಯುತಿಯಿಂದ ರೂಪುಗೊಳ್ಳಲಿರುವ ವ್ಯತೀಪಾತ ಯೋಗ ಕೆಲವು ರಾಶಿಯವರ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದು, ಜೀವನದಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

Guru Chandra Yuti Effect4/6

ಮಿಥುನ ರಾಶಿ

ವ್ಯತೀಪಾತ ಯೋಗದ ಪ್ರಭಾವದಿಂದ ಈ ರಾಶಿಯವರ ಬದುಕಿನಲ್ಲಿ ಸುವರ್ಣ ಸಮಯ ಆರಂಭವಾಗಲಿದೆ. ಹಣಕಾಸಿನ ಸಮಸ್ಯೆಗಳು ಬಗೆಹರೆಯಲಿದ್ದು ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ಹೂಡಿಕೆಗಳಿಂದ ಭರ್ಜರಿ ಲಾಭವನ್ನು ಗಳಿಸುವಿರಿ. ದಂಪತಿಗಳಿಗೆ ಕೌಟುಂಬಿಕ ಸುಖ ಹೆಚ್ಚಾಗುತ್ತದೆ.

Guru Chandra Yuti Effect5/6

ಕನ್ಯಾ ರಾಶಿ

ವ್ಯತೀಪಾತ ಯೋಗ, ಗುರು ಬಲದ ಪ್ರಭಾವದಿಂದ ಈ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಸೇರಿದು ಸಕಲವೂ ಕೈಗೂಡುವ ಪರ್ವಕಾಲ ಇದಾಗಿದೆ. ಉದ್ಯೋಗದಲ್ಲಿ ಬಡ್ತಿ, ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ಆರ್ಥಿಕ ದೃಷ್ಟಿಯಿಂದಲೂ ಇದು ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. 

Guru Chandra Yuti Effect6/6

ಧನು ರಾಶಿ

ವ್ಯತೀಪಾತ ಯೋಗವು ಈ ರಾಶಿಯವರಿಗೆ ಹಠಾತ್ ಧನಲಾಭವನ್ನು ಕಲ್ಪಿಸಲಿದೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.ವ್ಯವಹಾರದಲ್ಲಿ ನಿಮ್ಮ ಎದುರಾಳಿಗಳ ಎದುರು ಜಯ ಸಾಧಿಸುವಿರಿ. ಪ್ರಗತಿಯ ಹೊಸ ಹೊಸ ಅವಕಾಶಗಳು ಕೈ ಸೇರಲಿವೆ. ಒಟ್ಟಾರೆ ಇದು ಮುಟ್ಟಿದ್ದೆಲ್ಲಾ ಬಂಗಾರವಾಗುವ ಸುವರ್ಣ ಸಮಯ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.