ಒಂದು ರೂಪಾಯಿ ಖರ್ಚಿಲ್ಲದೇ ಮುಖದ ಕಾಂತಿ ಹೆಚ್ಚಿಸಬೇಕೇ? ಹಾಗಿದ್ದಲ್ಲಿ ದಾಳಿಂಬೆ ಹಣ್ಣಿನ ಸಿಪ್ಪೆಯಿಂದ ಈ ರೀತಿ ಮಾಡಿ..

Published: Aug 08, 2025, 06:08 PM IST|Updated: Aug 08, 2025, 06:08 PM IST

ಬೇಸಿಗೆ ಕಾಲದಲ್ಲಿ ಅಷ್ಟೇ ಸೂರ್ಯನ ಬಿಸಿಲಿಗೆ ಮುಖ ಕಪ್ಪಾಗುತ್ತದೆ ಎಂದು ನೀವು ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು..  ಮಳೆಗಾಲ ಮತ್ತು ಚಳಿಗಾಲದಲ್ಲಿಯೂ ಕೂಡ ಮುಖ ಟ್ಯಾನ್‌ ಆಗುತ್ತೆ. ಇನ್ನು ಯಾವುದೇ ವಾತಾವರಣದಲ್ಲಾದರೂ ಮುಖ ಕಪ್ಪಾಗುವುದನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು ಈ ಒಂದು ಸುಲಭ ಟ್ರಿಕ್ಸ್‌ ಬಳಸಿ.

ಸೂಚನೆ: ಈ ಮಾಹಿತಿಯನ್ನು ಸಾಮಾನ್ಯ ಜ್ನಾನಕ್ಕಾಗಿ ಮಾತ್ರ ನೀಡಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ.ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.

1/6

ಬಲವಾದ ಸೂರ್ಯನ ಬೆಳಕು ಮತ್ತು ಮಾಲಿನ್ಯದ ಹೆಚ್ಚಿನ ಪರಿಣಾಮದಿಂದ ನಮ್ಮ ಮುಖದ ಚರ್ಮ ಕಪ್ಪಾಗುತ್ತದೆ. ಇನ್ನು ಟ್ಯಾನಿಂಗ್ ಮಾತ್ರವಲ್ಲ ಮುಖದ ಇನ್ನಿತರ ಸಮಸ್ಯೆಗಳಾದ ಸುಕ್ಕುಗಳು ಮತ್ತು ಡ್ರೈಸ್ಕಿನ್‌ ಕೂಡ ಕಾಣಿಸಿಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಉತ್ಪನ್ನಗಳು ಈ ಸಮಸ್ಯೆಯಿಂದ ಪರಿಹಾರವನ್ನು ಒದಗಿಸುತ್ತವೆ ಎಂದು ಹೇಳಿಕೊಳ್ಳುತ್ತವೆ. ಆದರೆ ಅವುಗಳಲ್ಲಿರುವ ರಾಸಾಯನಿಕಗಳು ಕೆಲವೊಮ್ಮೆ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. 

2/6

ಆದ್ದರಿಂದ ಈ ಸಮಸ್ಯೆಯನ್ನು ಪರಿಹರಿಸಲು ಮನೆಯಲ್ಲಿ ಲಭ್ಯವಿರುವ ನೈಸರ್ಗಿಕ ವಸ್ತುಗಳೊಂದಿಗೆ ಚರ್ಮದ ಆರೈಕೆ ಮಾಡುವುದು ಸುರಕ್ಷಿತ. ಅಷ್ಟೇ ಅಲ್ಲ ಇದರಿಂದ ಸುಂದರವಾಗಿ ಕಾಣುವುದಲ್ಲದೇ, ಆರೋಗ್ಯಕರ ತ್ವಚೆಯನ್ನು ಸಹ ಪಡೆಯಬಹುದು.

3/6

ಇನ್ನು ಕೆಲವು ವಿಶೇಷ ಹಣ್ಣಿನ ಸಿಪ್ಪೆಗಳು ಅನೇಕ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಹಾಳಾದ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇಂತಹ ಆರೋಗ್ಯಕರ ಹಣ್ಣುಗಳಲ್ಲಿ  ದಾಳಿಂಬೆ ಹಣ್ಣು ಕೂಡ ಒಂದು. ಸಾಮಾನ್ಯವಾಗಿ ದಾಳಿಂಬೆ ತಿಂದ ನಂತರ, ಅದರ ಸಿಪ್ಪೆಗಳನ್ನು ಹೆಚ್ಚಾಗಿ ಎಸೆಯಲಾಗುತ್ತದೆ. ಆದರೆ ಅದು ತಪ್ಪು ಏಕೆಂದರೆ ಈ ಹಣ್ಣಿನ ಸಿಪ್ಪೆಯಲ್ಲಿ ಔಷಧೀಯ ಗುಣವಿದೆ. 

4/6

ದಾಳಿಂಬೆ ಸಿಪ್ಪೆಯ ಫೇಸ್‌ಪ್ಯಾಕ್‌ ತಯಾರಿಸಲು ಮೊದಲು ಈ ಹಣ್ಣಿನ ಸಿಪ್ಪೆಗಳನ್ನು ಚೆನ್ನಾಗಿ ತೊಳೆದು ಒಣಗಿಸಿ. ಅವು ಸಂಪೂರ್ಣವಾಗಿ 2-3 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿದ ನಂತರ, ಮಿಕ್ಸರ್‌ನಲ್ಲಿ ನುಣ್ಣಗೆ ಪುಡಿ ಮಾಡಿ. ಈಗ ಈ ಪುಡಿಯಲ್ಲಿ ರೋಸ್ ವಾಟರ್ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಗುರವಾದ ಕೈಗಳಿಂದ ಹಚ್ಚಿ. 15-20 ನಿಮಿಷಗಳ ನಂತರ ಸರಳ ನೀರಿನಿಂದ  ಮುಖವನ್ನು ತೊಳೆಯಿರಿ. ಈ ರೀತಿ ಮಾಡುವುದರಿಂದ ಕಡಿಮೆ ಸಮುದಲ್ಲಿ ಕಪ್ಪಾದ ನಿಮ್ಮ ಮುಖವನ್ನು ನೈಸರ್ಗಿಕವಾಗಿ ಬೆಳ್ಳಗಾಗಿಸಬಹುದು.

5/6

ದಾಳಿಂಬೆ ಸಿಪ್ಪೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್‌ಗಳು ಚರ್ಮವನ್ನು ಸೂರ್ಯನ ಹಾನಿಯಿಂದ ರಕ್ಷಿಸುತ್ತವೆ. ಇದು ಸುಕ್ಕುಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ಕಾಲಜನ್ ರಚನೆಯನ್ನು ಉತ್ತೇಜಿಸುತ್ತದೆ.

6/6

ರೋಸ್ ವಾಟರ್ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಪೌಡರ್‌ನ ನೈಸರ್ಗಿಕ ಗುಣಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮದ ಸೋಂಕುಗಳು ಮತ್ತು ಮೊಡವೆಗಳನ್ನು ತಡೆಯಲು ಸಹಾಯ ಮಾಡುತ್ತದೆ.