ದೇಹದ ಈ ಭಾಗದಲ್ಲಿ ನೋವು ಕಾಣಿಸಿಕೊಂಡರೆ ನಿಮ್ಮ ಕಿಡ್ನಿ ವೈಫಲ್ಯವಾಗುತ್ತಿದೆ ಎಂದರ್ಥ!

Written ByRanjitha R KUpdated byRanjitha R K
Published: Jun 05, 2025, 02:28 PM IST|Updated: Jun 05, 2025, 02:28 PM IST

ಕಿಡ್ನಿ ಆರೋಗ್ಯ ಕೆಡುತ್ತಿದೆ ಎಂದಾಗ ಮೊದಲು ದೇಹದ ಈ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. 
 

Symptoms of Kidney Failure1/6

ಬೆನ್ನು ನೋವು : ಮೂತ್ರಪಿಂಡ ಹಾನಿಗೊಳಗಾದಾಗ, ಬೆನ್ನಿನಲ್ಲಿ ತುಂಬಾ ನೋವು ಇರುತ್ತದೆ. ಬೆನ್ನು ನೋವಿನಿಂದಾಗಿ, ಎದ್ದೇಳಲು ಅಥವಾ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಬೆನ್ನು ನೋವು ಇದ್ದರೆ, ನೀವೇ ಔಷಧಿ ತೆಗೆದುಕೊಳ್ಳಬೇಡಿ. ಇದು ಮೂತ್ರಪಿಂಡದ ಹಾನಿಯ ದೊಡ್ಡ ಸಂಕೇತ.

Symptoms of Kidney Failure2/6

ಪಕ್ಕೆಲುಬುಗಳಲ್ಲಿ ನೋವು : ಮೂತ್ರಪಿಂಡವು ಹಾನಿಗೊಳಗಾದಾಗ, ಪಕ್ಕೆಲುಬುಗಳಲ್ಲಿ ನೋವು ಉಂಟಾಗಬಹುದು. ಮೂತ್ರಪಿಂಡವು ದೇಹದ ಹಿಂಭಾಗದಲ್ಲಿರುತ್ತದೆ. ಆದ್ದರಿಂದ ಕಿಡ್ನಿ ಫೇಲ್ಯೂರ್ ಆದಾಗ ಪಕ್ಕೆಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.   

Symptoms of Kidney Failure3/6

ಹೊಟ್ಟೆ ನೋವು : ಮೂತ್ರಪಿಂಡದ ಹಾನಿಯ ಆರಂಭಿಕ ಹಂತಗಳಲ್ಲಿ, ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು.ಮೂತ್ರಪಿಂಡವು ಹಾನಿಗೊಳಗಾದಾಗ, ಅದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಹೊಟ್ಟೆ ಸೆಳೆತ ಮತ್ತು ನೋವಿನ ಸಮಸ್ಯೆ ಉಂಟಾಗಬಹುದು.

Symptoms of Kidney Failure4/6

ಪಾದಗಳು ಮತ್ತು ಕಣಕಾಲುಗಳಲ್ಲಿ ನೋವು :ಪಾದಗಳು ಮತ್ತು ಕಣಕಾಲುಗಳಲ್ಲಿ ಕಾಣಿಸಿಕೊಳ್ಳುವ ನೋವು ಕೂಡಾ ಮೂತ್ರಪಿಂಡದ ಹಾನಿಯ ಸಂಕೇತವಾಗಿರಬಹುದು. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹವಾಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ಪಾದಗಳು ಮತ್ತು ಕಣಕಾಲುಗಳು ಊದಿಕೊಳ್ಳುತ್ತವೆ. 

Symptoms of Kidney Failure5/6

ಎದೆ ನೋವು ಅಥವಾ ಭಾರ : ಮೂತ್ರಪಿಂಡ ಹಾನಿಗೊಳಗಾದಾಗ ಎದೆ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರಪಿಂಡ ಹಾನಿಗೊಳಗಾದಾಗ, ಹೃದಯವನ್ನು ಆವರಿಸಿರುವ ಪದರವು ಉಬ್ಬಿಕೊಳ್ಳುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಪೆರಿಕಾರ್ಡಿಯಂ ಎಂದು ಕರೆಯಲಾಗುತ್ತದೆ.ಈ ಪೆರಿಕಾರ್ಡಿಯಂ ಉಬ್ಬಿಕೊಳ್ಳುತ್ತದೆ, ಇದು ಎದೆ ನೋವನ್ನು ಉಂಟುಮಾಡಬಹುದು.    

Symptoms of Kidney Failure6/6

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.