ಕಡಿಮೆ ಖರ್ಚು ಅಂತ ಈ ರೀತಿ ವಾಟರ್‌ ಹೀಟರ್‌ ಬಳುಸುವ ಮುನ್ನ ಹುಷಾರ್‌! ಜೀವಕ್ಕೆ ಅಪಾಯ!

Water heater precautions : ಚಳಿಗಾಲ ಬಂದಂತೆ ಮನೆಯಲ್ಲಿ ವಾಟರ್ ಹೀಟರ್‌ಗಳ ಬಳಕೆ ಹೆಚ್ಚಾಗುತ್ತದೆ. ಈ ರೀತಿಯ ವಾಟರ್‌ ಹೀಟರ್‌ ಅಗ್ಗ ಮತ್ತು ತ್ವರಿತವಾಗಿ ನೀರನ್ನು ಬಿಸಿಮಾಡಲು ತುಂಬಾ ಅನುಕೂಲಕರವಾಗಿದೆ. ಆದರೂ, ಅವುಗಳನ್ನು ಬಳಸುವಾಗ ಸಣ್ಣ ತಪ್ಪು ಮಾಡಿದರೂ ಸಹ ಜೀವಕ್ಕೆ ಮಾರಕವಾಗಬಹುದು. ಹೇಗೆ ಅಂತೀರಾ..? ಮುಂದೆ ಓದಿ..

1 /6

ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಮಾಡಲು ಅನೇಕ ಜನರು ವಾಟರ್ ಹೀಟರ್ ರಾಡ್‌ಗಳನ್ನು ಬಳಸುತ್ತಾರೆ. ಈ ಹೀಟರ್ ಬಳಸುವಾಗ ನಾವು ಮಾಡುವ ಸಣ್ಣ ತಪ್ಪುಗಳು ಜೀವಕ್ಕೆ ಅಪಾಯಕಾರಿ. ಅಲ್ಯೂಮಿನಿಯಂ ಬಕೆಟ್ ಬಳಸುವುದು ಉತ್ತಮವೇ? ಕಬ್ಬಿಣದ ಬಕೆಟ್ ಅನ್ನು ಏಕೆ ಬಳಸಬಾರದು? ಸ್ವೀಚ್‌ ಆಫ್ ಮಾಡದೆ ನೀರನ್ನು ಮುಟ್ಟುವುದು ಎಷ್ಟು ಅಪಾಯಕಾರಿ?.. ಈ ತಪ್ಪುಗಳನ್ನು ಮಾಡುವ ಮುನ್ನ ಪ್ರಮುಖ ಸುರಕ್ಷತಾ ಸಲಹೆಗಳನ್ನು ಪರಿಶೀಲಿಸಿ.

2 /6

ಖರೀದಿಸುವಾಗ ಮುನ್ನೆಚ್ಚರಿಕೆ : ಈ ರೀತಿ ವಾಟರ್‌ ಹೀಟರ್ ಖರೀದಿಸುವಾಗ, ಐಎಸ್ಐ ಗುರುತು ಹೊಂದಿರುವ ಬ್ರಾಂಡೆಡ್ ಕಂಪನಿಗಳನ್ನು ಆಯ್ಕೆ ಮಾಡಲು ಮರೆಯದಿರಿ. ಹೀಟರ್ ಕಾಯಿಲ್ ಮೇಲಿನ ಸಿಲಿಕಾ ಲೇಪನವು ಎರಡು ವರ್ಷಗಳ ನಂತರ ಹಾಳಾಗುತ್ತದೆ. ಆದ್ದರಿಂದ, ಉತ್ತಮ ಗುಣಮಟ್ಟದವುಗಳನ್ನು ಮಾತ್ರ ಖರೀದಿಸಬೇಕು.

3 /6

ಬಕೆಟ್‌ಗಳ ಆಯ್ಕೆ ಮತ್ತು ಬಳಕೆ : ನೀವು ಪ್ಲಾಸ್ಟಿಕ್ ಬಕೆಟ್‌ನಲ್ಲಿ ಹೀಟರ್ ಬಳಸುತ್ತಿದ್ದರೆ, ಬಕೆಟ್ ಅನ್ನು ನೇರವಾಗಿ ರಾಡ್ ಹುಕ್ ಮೇಲೆ ಇಡಬೇಡಿ. ಶಾಖವು ಪ್ಲಾಸ್ಟಿಕ್ ಅನ್ನು ಕರಗಿಸಬಹುದು, ಇದು ಅಪಾಯಕಾರಿ. ನೀವು ಪ್ಲಾಸ್ಟಿಕ್ ಬಕೆಟ್ ಬಳಸುತ್ತಿದ್ದರೆ, ತೆಳುವಾದ ಮರದ ತುಂಡಿನ ಸಹಾಯದಿಂದ ಹೀಟರ್ ಅನ್ನು ಇಡುವುದು ಉತ್ತಮ. ಅಲ್ಲದೆ, ಅಲ್ಯೂಮಿನಿಯಂ ಬಕೆಟ್ ಅನ್ನು ಬಳಸಬಹುದು. ಕಬ್ಬಿಣದ ಬಕೆಟ್ ಬಳಕೆಯನ್ನು ಸಂಪೂರ್ಣವಾಗಿ ತಪ್ಪಿಸಬೇಕು, ಏಕೆಂದರೆ ಇದು ವಿದ್ಯುತ್ ಆಘಾತದ ಅಪಾಯವನ್ನು ಹೆಚ್ಚಿಸುತ್ತದೆ.

4 /6

ಪ್ರಮುಖ ಬಳಕೆಯ ನಿಯಮಗಳು : ವಾಟರ್‌ ಹೀಟರ್‌ ಸುರುಳಿಯನ್ನು ಸಂಪೂರ್ಣವಾಗಿ ಮುಳುಗಿಸಬೇಕು. ನೀರನ್ನು ಕಾಯಿಸುವ ವಾಹಕ ನೀರಿನಲ್ಲಿ ಸರಿಯಾಗಿ ಮುಳುಗಿದೆಯೇ ಅಂತ ನೋಡಿಕೊಳ್ಳಿ. ಒದ್ದೆಯಾದ ಕೈಗಳಿಂದ ವಾಟರ್ ಹೀಟರ್ ಅಥವಾ ಸ್ವಿಚ್ ಅನ್ನು ಮುಟ್ಟಬೇಡಿ. ಇದು ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು. ಪ್ಲಗ್ ಆಪ್‌ ಮಾಡಿದ ನಂತರವೇ ನೀರನ್ನು ಮುಟ್ಟಿ. ನೀರು ಕುದಿಯಲು ಹೀಟರ್ ಅನ್ನು ಹೆಚ್ಚು ಹೊತ್ತು ಆನ್‌ನಲ್ಲಿ ಇಡಬೇಡಿ.

5 /6

2-ಇನ್-1 ಹೀಟರ್‌ಗಳಿಂದ ದೂರವಿರಿ: ಸ್ನಾನಗೃಹಗಳಲ್ಲಿ ನೇರವಾಗಿ ಬಳಸುವ 2-ಇನ್-1 ವಾಟರ್ ಹೀಟರ್‌ಗಳು ತುಂಬಾ ಅಪಾಯಕಾರಿ. ನೀವು ಸ್ವಿಚ್ ಆಫ್ ಮಾಡಲು ಮರೆತರೂ ಸಹ, ಸ್ನಾನಗೃಹದಲ್ಲಿನ ಆರ್ದ್ರತೆಯಿಂದಾಗಿ ವಿದ್ಯುತ್ ಆಘಾತದ ಅಪಾಯ ಹೆಚ್ಚು.

6 /6

ಗಮನಿಸಿ: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ನಿಮ್ಮ ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಈ ವಿಧಾನವನ್ನು ಅನುಸರಿಸುವ ಮೊದಲು ದಯವಿಟ್ಟು ನಿಮ್ಮ ಮನೆಯಲ್ಲಿರುವ ವಿದ್ಯುತ್ ವ್ಯವಸ್ಥೆ ಮತ್ತು ನಿಮ್ಮ ವೈಯಕ್ತಿಕ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸಿ.