ಶನಿ ಅಸ್ತದಿಂದ ಫೆಬ್ರವರಿಯಲ್ಲಿ ಈ ರಾಶಿಗಳ ಸಂಪತ್ತು ಹೆಚ್ಚಳ; ಅದೃಷ್ಟದ ಬೆಂಬಲದಿಂದ ಐಷಾರಾಮಿ ಜೀವನ!!

Written ByPuttaraj K Alur
Published: Feb 07, 2025, 10:18 PM IST|Updated: Feb 07, 2025, 10:18 PM IST

Shani Gochar 2025: ಫೆಬ್ರವರಿ 28ರ ಶುಕ್ರವಾರ ಸಂಜೆ 7.01ಕ್ಕೆ ಶನಿ ಗ್ರಹ ಕುಂಭ ರಾಶಿಯಲ್ಲಿ ಸ್ಥಾನ ಪಡೆಯಲಿದೆ. ಶನಿಯು ಅಸ್ತಮ ಸ್ಥಿತಿಯಲ್ಲಿ ಸುಮಾರು 37 ದಿನಗಳ ಕಾಲ ಇರಲಿದೆ. ನಂತರ ಏಪ್ರಿಲ್ 6ರಂದು ಉದಯಿಸುತ್ತಾನೆ.

Shani Gochar 2025: ವೈದಿಕ ಜ್ಯೋತಿಷ್ಯದಲ್ಲಿ ಶನಿಯು ಒಂದು ಶಕ್ತಿಶಾಲಿ ಗ್ರಹವಾಗಿದೆ. ಇದು ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಶುಭ ಫಲವನ್ನು ನೀಡುತ್ತದೆ. ಒಂಬತ್ತು ಗ್ರಹಗಳಲ್ಲಿ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದ್ದು, ಮಾರ್ಚ್ 29ರಂದು ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲಿದ್ದಾನೆ. ಇದು ಒಂದು ರಾಶಿಯಲ್ಲಿ ಸುಮಾರು ಎರಡೂವರೆ ವರ್ಷಗಳ ಕಾಲ ಇರುತ್ತದೆ. ಮತ್ತೆ ಅದೇ ರಾಶಿಗೆ ಬರಲು ಸುಮಾರು 30 ವರ್ಷಗಳು ಬೇಕಾಗುತ್ತವೆ. ಈ ಅವಧಿಯಲ್ಲಿ ಶನಿಯು ಅಸ್ತಮ ಸ್ಥಿತಿಯಲ್ಲಿರುತ್ತಾನೆ. ಇದು 12 ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Shani Gochar 2025 1/5

ಶನಿಗ್ರಹ ಯಾವಾಗ ಅಸ್ತಮಿಸುವುದು? 

ಫೆಬ್ರವರಿ 28ರ ಶುಕ್ರವಾರ ಸಂಜೆ 7.01ಕ್ಕೆ ಶನಿ ಗ್ರಹ ಕುಂಭ ರಾಶಿಯಲ್ಲಿ ಸ್ಥಾನ ಪಡೆಯಲಿದೆ. ಶನಿಯು ಅಸ್ತಮ ಸ್ಥಿತಿಯಲ್ಲಿ ಸುಮಾರು 37 ದಿನಗಳ ಕಾಲ ಇರಲಿದೆ. ನಂತರ ಏಪ್ರಿಲ್ 6ರಂದು ಉದಯಿಸುತ್ತಾನೆ. ಹಾಗಾದ್ರೆ ಶನಿಯ ಅಸ್ತಮ ಸ್ಥಿತಿಯು ಯಾವ ರಾಶಿಯವರ ಮೇಲೆ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ತಿಳಿಯಿರಿ... 

Shani Gochar 2025 2/5

ವೃಷಭ ರಾಶಿ

ವೃಷಭ ರಾಶಿಯ ಜನರಿಗೆ ಶನಿಯ ಅಸ್ತಮವು ಶುಭ ಪರಿಣಾಮಗಳನ್ನು ತರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಅಧಿಕಾರಿಗಳಿಂದ ನಿಮಗೆ ಬೆಂಬಲ ಸಿಗುವುದು. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಸಕಾರಾತ್ಮಕ ಆಲೋಚನೆಗಳಿಂದ ಮನಸ್ಸು ಸಂತೋಷವಾಗಿರುವುದು. ನೀವು ಕೆಲಸದಲ್ಲಿ ಯಶಸ್ಸನ್ನು ಸಾಧಿಸುವಿರಿ. ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ.

Shani Gochar 2025 3/5

ಧನು ರಾಶಿ

ಧನು ರಾಶಿಯ ಜನರಿಗೆ ಶನಿಯ ಅಸ್ತಮ ಸ್ಥಿತಿಯು ತುಂಬಾ ಪ್ರಯೋಜನಕಾರಿಯಾಗಲಿದೆ. ಕೆಲಸದ ಸ್ಥಳದಲ್ಲಿ ಅಪಾರ ಪ್ರಗತಿ ಹೆಚ್ಚಾಗಲಿದೆ. ಅಪಾರ ಆರ್ಥಿಕ ಲಾಭದ ಸಾಧ್ಯತೆ ಇರಲಿದೆ. ಸಹೋದರ-ಸಹೋದರಿಯರ ನಡುವಿನ ಸಂಬಂಧಗಳು ಸುಧಾರಿಸಲಿವೆ. ನೀವು ದೀರ್ಘ ಪ್ರಯಾಣಕ್ಕೆ ಹೋಗಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತಲೂ ಉತ್ತಮವಾಗಿರಲಿದೆ. ವ್ಯಾಪಾರಿಗಳು ವ್ಯವಹಾರದಲ್ಲಿ ಲಾಭ ಪಡೆಯಬಹುದು. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಯಶಸ್ಸನ್ನು ಸಾಧಿಸಲು ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವೆ. ನಿಮ್ಮ ಪ್ರೇಮ ಜೀವನವು ಮೊದಲಿಗಿಂತಲೂ ಉತ್ತಮವಾಗಿರುತ್ತದೆ.

Shani Gochar 2025 4/5

ಕುಂಭ ರಾಶಿ

ಕುಂಭ ರಾಶಿಯ ಜನರಿಗೆ ಶನಿಯ ಅಸ್ತಮವು ತುಂಬಾ ಒಳ್ಳೆಯದಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಉದ್ಯೋಗದಲ್ಲಿರುವವರಿಗೆ ಈ ಸಮಯವು ಉತ್ತಮವಾಗಿರುತ್ತದೆ. ಆದಾಯ ಅಥವಾ ಬಡ್ತಿಯಲ್ಲಿ ಹೆಚ್ಚಳ ಸಾಧ್ಯತೆಯಿದೆ. ಹಣ ಹೆಚ್ಚಿಸಲು ಹೊಸ ಹೊಸ ಅವಕಾಶಗಳು ಸಹ ಸಿಗುತ್ತವೆ. ಸಂಬಂಧಗಳು ಮೊದಲಿಗಿಂತಲೂ ಉತ್ತಮವಾಗಿರುತ್ತವೆ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗಲಿದೆ.

Shani Gochar 2025 5/5

ಶನಿ ಗೋಚರ

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)