ಕೆಲವೇ ಗಂಟೆಗಳಲ್ಲಿ ಈ ರಾಶಿಯವರಿಗೆ ಶುಕ್ರದೆಸೆ ಆರಂಭ: ಭೌತಿಕ ಸುಖ ಸಮೃದ್ದಿ, ಕನಸಿನ ಮನೆ ಖರೀದಿ ಯೋಗ

Written ByYashaswini VUpdated byYashaswini V
Published: Jun 10, 2025, 07:17 AM IST|Updated: Jun 10, 2025, 08:09 AM IST

Venus Transit 2025: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇನ್ನೂ 72 ಗಂಟೆಗಳಲ್ಲಿ ಶುಕ್ರ ನಕ್ಷತ್ರ ಪರಿವರ್ತನೆ ಹೊಂದಲಿದ್ದು ತನ್ನದೇ ಅಧಿಪತ್ಯದ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. 

Shukra Nakshatra Transit1/6

ಪ್ರೀತಿ, ಧನ, ವೈಭವ, ಭೌತಿಕ ಸುಖ, ಸಂಪತ್ತಿನ ಗ್ರಹವಾದ ಶುಕ್ರ ಇನ್ನೂ 72ಗಂಟೆಗಳಲ್ಲಿ ಜೂನ್ 13ರಂದು ಶುಕ್ರನು ಭರಣಿ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ ಶುಕ್ರ ಭುಕ್ತಿ, ಶುಕ್ರ ದೆಸೆ ಆರಂಭವಾಗಲಿದೆ. 

Shukradese Effect On Taurus2/6

ವೃಷಭ ರಾಶಿ:  ಶುಕ್ರ ದೆಸೆಯಿಂದ ಈ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮಿಂದ ದೂರಾಗಿದ್ದ ಪ್ರೀತಿಪಾತ್ರರೊಂದಿಗೆ ಬಂಧ ಬಲಗೊಳ್ಳಲಿದೆ. ಹಿಂದೆ ಮಾಡಿದ ಹೂಡಿಕೆಗಳಿಂದ ಭರ್ಜರಿ ಲಾಭವಾಗಲಿದೆ. ಜೀವನದಲ್ಲಿ ಸುಖ ಶಾಂತಿ ಹೆಚ್ಚಾಗಲಿದೆ. 

Shukradese Effect On Leo 3/6

ಸಿಂಹ ರಾಶಿ:  ಶುಕ್ರ ನಕ್ಷತ್ರ ಸಂಚಾರದಿಂದ ಈ ರಾಶಿಯವರು ವೃತ್ತಿ ಬದುಕಿನಲ್ಲಿ ದೊಡ್ಡ ಎತ್ತರಕ್ಕೆ ಏರುವಿರಿ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ವ್ಯಾಪಾರ ವ್ಯವಹಾರದಲ್ಲಿ ಬಂಪರ್ ಆದಾಯವನ್ನು ಗಳಿಸುವಿರಿ. ಸಂಬಂಧಗಳಲ್ಲಿ ಮಧುರತೆ ಹೆಚ್ಚಾಗಲಿದೆ. 

Shukradese Effect On Libra4/6

ತುಲಾ ರಾಶಿ:  ಶುಕ್ರ ಸಂಚಾರದಿಂದ ಈ ರಾಶಿಯವರ ಬದುಕಿನಲ್ಲಿ ಧನಾತ್ಮಕತೆ ಹೆಚ್ಚಾಗಲಿದೆ. ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಕೇಳುವಿರಿ. ಆಸ್ತಿ, ವಾಹನ ಖರೀದಿಸಬೇಕೆಂಬ ನಿಮ್ಮ ಬಹುದಿನಗಳ ಕನಸು ನನಸಾಗಲಿದೆ. ಹೊಸ ಯೋಜನೆಗಳಿಂದ ಅಪಾರ ಸಂಪತ್ತು ಕೈಗೂಡುವುದು.   

Shukradese Effect On Capricorn5/6

ಮಕರ ರಾಶಿ:  ಶುಕ್ರ ಸಂಚಾರದಿಂದ ಈ ರಾಶಿಯವರ ಬದುಕಿನಲ್ಲಿ ಸಂಪತ್ತು ವೃದ್ದಿಯಾಗಲಿದೆ. ಕೆಲಸದಲ್ಲಿರುವವರಿಗೆ ಬಡ್ತಿ ಸಂಭವವಿದೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ಸ್ವಂತ ಮನೆ ಖರೀದಿಸುವ ನಿಮ್ಮ ಕನಸು ಸಾಕಾರಗೊಳ್ಳುವ ಸಾಧ್ಯತೆ ಇದೆ.   

Shukradese Effect On Pisces6/6

ಮೀನ ರಾಶಿ:  ಶುಕ್ರ ಸಂಚಾರದಿಂದ ಈ ರಾಶಿಯವರ ಲಕ್ ಬದಲಾಗಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಅಪಾರ ಸಂಪತ್ತು ಕೈ ಸೇರಲಿದೆ. ವ್ಯವಹಾರದಲ್ಲಿ ಮೊದಲಿಗಿಂತ ಹೆಚ್ಚಿನ ಲಾಭವಾಗಲಿದೆ. ವ್ಯಾಪಾರ ವಿಸ್ತರಣೆಗೆ ಸುವರ್ಣ ಸಮಯ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.