ಸಂಪತ್ತಿನ ಅಧಿಪತಿಯ ಸಂಚಾರ: ಈ ರಾಶಿಯವರಿಗೆ ಪ್ರತಿ ಹೆಜ್ಜೆಗೂ ಯಶಸ್ಸು, ಅಪಾರ ಹಣ, ಸ್ವಂತ ಮನೆ ಖರೀದಿ ಯೋಗ

Written ByYashaswini VUpdated byYashaswini V
Published: Jun 30, 2025, 06:57 AM IST|Updated: Jun 30, 2025, 06:57 AM IST

Shukra Gochar: ಜ್ಯೋತಿಷ್ಯದಲ್ಲಿ ನವಗ್ರಹಗಳಲ್ಲಿ ಶುಕ್ರನನ್ನು ಸಂಪತ್ತು, ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. 

Shukra Gochar Phala1/6

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜೂನ್ 29, 2025ರಂದು ಶುಕ್ರ ಮೇಷ ರಾಶಿಯನ್ನು ತೊರೆದು ವೃಷಭ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. 

Shukra Gochar Phala2/6

ಪ್ರೀತಿ, ಐಷಾರಾಮಿ, ಸುಖ-ಸಂತೋಷದ ಅಂಶ ಎಂದು ಪರಿಗಣಿಸಲಾಗುವ ಶುಕ್ರ ಸಂಪತ್ತಿನ ಅಧಿಪತಿಯೂ ಆಗಿದ್ದು, ಶುಕ್ರ ಸಂಚಾರ ಬದಲಾವಣೆಯ ಶುಭ ಅಶುಭ ಪರಿಣಾಮಗಳು ಎಲ್ಲಾ 12ರಾಶಿಯವರ ಮೇಲೂ ಕಂಡು ಬರುತ್ತದೆ. 

Shukra Gochar Phala3/6

ವೃಷಭ ರಾಶಿಗೆ ಶುಕ್ರನ ಪ್ರವೇಶದೊಂದಿಗೆ ಮೂರು ರಾಶಿಯವರ ಬದುಕಿನಲ್ಲಿ ಶುಕ್ರ ಭುಕ್ತಿಯಿಂದ ಒಳ್ಳೆಯ ಸಮಯ ಆರಂಭವಾಗಲಿದೆ. ಅವರು ಪ್ರತಿ ಹೆಜ್ಜೆಗೂ ಯಶಸ್ಸು, ಅಪಾರ ಹಣ, ಕೀರ್ತಿಯನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ. 

Shukra Gochar Phala4/6

ಮೇಷ ರಾಶಿಯನ್ನು ತೊರೆದು ವೃಷಭ ರಾಶಿಗೆ ಪ್ರವೇಶಿಸಿರುವ ಶುಕ್ರ ಈ ರಾಶಿಯವರ ಕಾರ್ಯಕ್ಷಮತೆ, ಕಾರ್ಯವೈಖರಿಯನು ಸುಧಾರಿಸಲಿದ್ದಾನೆ. ವೃತ್ತಿಪರರಿಗೆ ಪ್ರಮೋಷನ್, ಭರ್ಜರಿ ಹಣಕಾಸಿನ ಪ್ರಯೋಜನವನ್ನು ನೀಡುವುದರ ಜೊತೆಗೆ ಮನೆ ಖರೀದಿ ಯೋಗವನ್ನೂ ನೀಡಲಿದ್ದಾನೆ. 

Shukra Gochar Phala5/6

ಶುಕ್ರ ಸಂಚಾರ ಈ ರಾಶಿಯವರ ಬದುಕಿನಲ್ಲಿ ಶುಭ ಸಮಯವನ್ನು ತರಲಿದೆ. ಅವಿವಾಹಿತರಿಗೆ ವಿವಾಹ ಯೋಗ, ನಿರುದ್ಯೋಗಿಗಳಿಗೆ ಉದ್ಯೋಗವನ್ನೂ ಕರುಣಿಸಲಿದ್ದಾನೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ. ಆದಾಗ್ಯೂ, ಅತಿಯಾದ ಖರ್ಚುಗಳಿಗೆ ಕಡಿವಾಣ ಹಾಕದಿದ್ದರೆ ಬಜೆಟ್ ಹಾಳಾಗಬಹುದು. 

Shukra Gochar Phala6/6

ಶುಕ್ರ ಸಂಚಾರದಿಂದ ಈ ರಾಶಿಯವರ ಬದುಕಿನಲ್ಲಿ ಶುಕ್ರ ಭುಕ್ತಿ ಆರಂಭವಾಗಲಿದೆ. ಇದರಿಂದ ನಿಮ್ಮ ಬದುಕಿನಲ್ಲಿ ನಾನಾ ಆಯಾಮಗಳಲ್ಲಿ ಎದುರಾಗಿದ್ದ ಸಮಸ್ಯೆಗಳಿಗೆ ಒಂದೊಂದಾಗಿ ಪರಿಹಾರ ದೊರೆಯಲಿದೆ. ಕೆಲಸದಲ್ಲಿ ಬಡ್ತಿ, ಹೊಸ ಆದಾಯ ಮೂಲಗಳ ಜೊತೆಗೆ ವೈವಾಹಿಕ ಬದುಕು ಸುಮಧುರವಾರುತ್ತದೆ. ಒಟ್ಟಾರೆ ಇದು ನಿಮಗೆ ಸುವರ್ಣ ಸಮಯ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.