ತಿಂಗಳಾಂತ್ಯದಲ್ಲಿ ನಾಲ್ಕು ರಾಶಿಯವರಿಗೆ ಶುಕ್ರ ದೆಸೆ: ಶ್ರೀಮಂತರಾಗುವ ಭಾಗ್ಯ, ಕಂಡ ಕನಸೆಲ್ಲಾ ನನಸಾಗುವ ಪರ್ವಕಾಲ

Written ByYashaswini VUpdated byYashaswini V
Published: Jun 05, 2025, 07:18 AM IST|Updated: Jun 05, 2025, 07:18 AM IST

Shukra Nakshatra Change: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪತ್ತು, ಐಷಾರಾಮಿ ಜೀವನದ ಅಂಶನಾದ ಶುಕ್ರ ಈ ತಿಂಗಳಾಂತ್ಯದಲ್ಲಿ ನಕ್ಷತ್ರ ಪುಂಜವನ್ನು ಬದಲಾಯಿಸಲಿದ್ದಾನೆ. 
 

Shukra Transit1/6

ವೈದಿಕ ಜ್ಯೋತಿಷ್ಯದಲ್ಲಿ ಸಂಪತ್ತು, ವೈಭವ, ಪ್ರೀತಿ, ಆಕರ್ಷಣೆಯ ಸಂಕೇತ ಎನ್ನಲಾಗುವ ಐಷಾರಾಮಿ ಜೀವನಕಾರಕ ಶುಕ್ರ 2025ರ ಜೂನ್ 26ರಂದು ಭರಣಿ ನಕ್ಷತ್ರವನ್ನು ಬಿಟ್ಟು ಕೃತಿಕಾ ನಕ್ಷತ್ರಕ್ಕೆ ಕಾಲಿಡಲಿದ್ದಾನೆ. ಇದರಿಂದಾಗಿ ಕೆಲವು ರಾಶಿಯವರ ಅದೃಷ್ಟ ಬದಲಾಗಲಿದ್ದು ಅವರ ಬದುಕಿನಲ್ಲಿ ಶುಕ್ರ ದೆಸೆ, ಶುಕ್ರ ಮಹಾದಶ ಆರಂಭವಾಗಲಿವೆ. 

Shukra Mahadasha2/6

ಜೂನ್ ತಿಂಗಳಾಂತ್ಯದಲ್ಲಿ ಶುಕ್ರ ನಕ್ಷತ್ರ ಪರಿವರ್ತನೆಯೊಂದಿಗೆ ಕೆಲ ರಾಶಿಯವರ ಬದುಕಿನಲ್ಲಿ ಶುಕ್ರ ಮಹಾದಶ, ಶುಕ್ರ ಭುಕ್ತಿ ಆರಂಭವಾಗಲಿದ್ದು ಅವರು ಅಪಾರ ಸಂಪತ್ತಿನ ಒಡೆಯಲಾಗಲಿದ್ದಾರೆ. ಜೀವನದಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

Shukra Mahadasha Effect On Taurus3/6

ವೃಷಭ ರಾಶಿ:  ಶುಕ್ರ ಕೃತಿಕಾ ನಕ್ಷತ್ರಕ್ಕೆ ಕಾಲಿಡುತ್ತಿದ್ದಂತೆ ಈ ರಾಶಿಯವರಿಗೆ ಹಳೆಯ ಹೂಡಿಕೆಗಳಿಂದ ಭಾರೀ ಧನಲಾಭವಾಗಲಿದೆ. ಬೇರೆಡೆ ಸಿಲುಕಿದ್ದ ಹಣ ಕೈ ಸೇರಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಭರ್ಜರಿ ಆಫರ್ ಗಳು ಸಿಗಬಹುದು. ಸಂಗಾತಿಯೊಂದಿಗಿನ ಮನಸ್ತಾಪ ಸುಧಾರಿಸಲಿದೆ.

Shukra Mahadasha Effect On Leo4/6

ಸಿಂಹ ರಾಶಿ:  ಶುಕ್ರ ದೆಸೆಯಿಂದಾಗಿ ಈ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಭಾರೀ ಪ್ರಗತಿ ಕಂಡುಬರಲಿದೆ. ಉದ್ಯಮಿಗಳಿಗೆ ದೊಡ್ಡ ಆರ್ಡರ್ ಸಿಗಬಹುದು. ಕಲಾ ಕ್ಷೇತ್ರದಲ್ಲಿರುವವರಿಗೆ ಸುವರ್ಣ ಅವಕಾಶಗಳು ದೊರೆಯಬಹುದು. ಕೆಲಸದಲ್ಲಿ ಬಡ್ತಿ ಸಂಭವವಿದೆ. ನಿಮ್ಮ ಬಹುಕಾಲದ ಕನಸು ನನಸಾಗುವ ಪರ್ವಕಾಲ ಇದಾಗಲಿದೆ. 

Shukra Mahadasha Effect On Virgo5/6

ಕನ್ಯಾ ರಾಶಿ:  ಶುಕ್ರ ದೆಸೆಯಿಂದಾಗಿ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಕೈಗೂಡಲಿವೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಹಣದ ಹರಿವು ಹೆಚ್ಚಾಗಿ ಅಪಾರ ಸಂಪತ್ತಿನ ಒಡೆಯರಾಗುವಿರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮವಾದ ಫಲ ಪಡೆಯುವ ಸುವರ್ಣ ಸಮಯ. ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನಿರೀಕ್ಷಿಸಬಹುದು. 

Shukra Mahadasha Effect On Libra6/6

ತುಲಾ ರಾಶಿ:  ಕೃತಿಕಾ ನಕ್ಷತ್ರ ಪುಂಜದಲ್ಲಿ ಶುಕ್ರನ ಸಂಚಾರದಿಂದ ಈ ರಾಶಿಯವರಿಗೆ ಅದೃಷ್ಟ ಬೆನ್ನೇರಲಿದೆ. ವ್ಯವಹಾರದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ. ವಿದೇಶ ವ್ಯವಹಾರದಿಂದ ಭರ್ಜರಿ ಲಾಭವಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಲಿದ್ದು ಆಸ್ತಿ, ಮನೆ, ವಾಹನ ಖರೀದಿಗಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಯ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.