ಬಿಸಿಲಿನ ತಾಪಮಾನಕ್ಕೆ ಈ ಬಣ್ಣದ ಬಟ್ಟೆಗಳನ್ನ ಧರಿಸಿ; ದೇಹಕ್ಕೆ ತಂಪಿನ ಜೊತೆಗೆ ನಿಮ್ಮ ಸೌಂದರ್ಯವೂ ದುಪ್ಪಟ್ಟಾಗುತ್ತೆ!!

Summer Dresses for Men & Women: ಬೇಸಿಗೆಯಲ್ಲಿ ನೀವು ಯಾವ ರೀತಿಯ ಬಟ್ಟೆಗಳನ್ನ ಧರಿಸಬೇಕು..? ಯಾವ ಬಣ್ಣದ ಬಟ್ಟೆ ಧರಿಸಿದರೆ ಸೂಕ್ತ? ಈ ಪ್ರಶ್ನೆಗೆ ಇಂದು ನಾವು ನಿಮಗೆ ಉತ್ತರ ನೀಡಲಿದ್ದೇವೆ. ಬೇಸಿಗೆಯಲ್ಲಿ ನೀವು ಧರಿಸುವ ಬಟ್ಟೆಗಳು ನಿಮ್ಮ ಅಂದಕ್ಕೆ ಮೆರಗು ನೀಡುವುದರ ಜೊತೆಗೆ ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

Summer Dresses: ಬೇಸಿಗೆಕಾಲ ಶುರುವಾಗಿದೆ... ಸೂರ್ಯನ ಶಾಕದಿಂದ ನಿಮಿಷಕ್ಕೊಮ್ಮೆ ಏರುವ ತಾಪಮಾನದಿಂದ ಜನರು ಬಸವಳಿದಿದ್ದಾರೆ. ಬಿಸಿಲಿನ ತಾಪಮಾನಕ್ಕೆ ಹೊರಗೆಲ್ಲೂ ಹೋಗದೆ ಮನೆಯಲ್ಲೇ ಕೂರುವವರು ಒಂದು ಕಡೆಯಾದರೆ, ಸಮ್ಮರ್‌ ಟ್ರಿಪ್‌, ಅಡ್ವೆಂಚರ್ಸ್ ಅಂತಾ ಸುತ್ತಾಡುವವರು ಇನ್ನೊಂದು ಕಡೆ. ಎಷ್ಟೇ ಬಿಸಿಲಿದ್ದರೂ ಸಹ ಕೆಲವರಿಗೆ ಎಂಜಾಯ್‌ ಮಾಡಬೇಕೆಂಬ ಮನಸ್ಥಿತಿ ಇರುತ್ತದೆ. ಹೀಗಾಗಿ ಅವರು ಬಿಲಿಸಿನ ತಾಪಮಾಣಕ್ಕೆ ತಕ್ಕಂತೆ ಬಟ್ಟೆಗಳನ್ನ ಧರಿಸಿ ಹೊರಗಡೆ ಹೋಗುತ್ತಾರೆ. ಈ ಕಲರ್‌ ಕಲರ್‌ ಬಟ್ಟೆಗಳು ದೇಹಕ್ಕೆ ತಂಪು ನೀಡುವುದರ ಜೊತೆಗೆ ನಿಮ್ಮ ಸೌಂದರ್ಯವನ್ನೂ ದುಪ್ಪಟ್ಟುಗೊಳಿಸುತ್ತವೆ. ಈ ಬಿರುಬಿಸಿಲಿನಲ್ಲಿ ನೀವು ಯಾವ ರೀತಿಯ ಬಟ್ಟೆಗಳನ್ನ ಧರಸಿದರೆ ಚೆನ್ನಾಗಿರುತ್ತದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /7

ಒಂದು ವೇಳೆ ನೀವು ನೀಲಿ ಬಣ್ಣವನ್ನು ಇಷ್ಟಪಡುತ್ತೀರಿ ಎಂದಾದರೆ ಬೇಸಿಗೆಗೆ ಇದೊಂದು ಬೆಸ್ಟ್‌ ಚಾಯ್ಸ್‌. ಯಾವುದೇ ಸ್ಕಿನ್‌ ಟೋನ್‌ಗಳಿಗೆ ಹೊಂದಿಕೊಳ್ಳುವ ಈ ಬಣ್ಣವು ನಿಮ್ಮ ಬೇಸಿಗೆಯ ವಾರ್ಡ್ರೋಬ್ ಲಿಸ್ಟ್‌ನಲ್ಲಿ ಇರಲೇಬೇಕು.

2 /7

ಬಿಳಿ ಬಣ್ಣದ ಬಟ್ಟೆಗಳು ಸಹ ಅತ್ಯಂತ ಒಳ್ಳೆಯ ಆಯ್ಕೆಯಾಗಿದೆ. ಶಾಂತತೆಯ ಪ್ರತಿರೂಪವಾದ ಈ ಬಣ್ಣದ ಡ್ರೆಸ್ ಧರಿಸಿದಾಗ ಉತ್ತಮವಾಗಿ ಕಾಣುವುದಲ್ಲದೆ ಬಿಸಿಲಿನ ಸುಡುವ ಶಾಖದಲ್ಲೂ ನೀವು ಬೆವರು ಮುಕ್ತವಾಗಿರುತ್ತೀರಿ.

3 /7

ನೀವೆನಾದರೂ ಬೇಸಿಗೆಗೆ ಬೀಚ್‌ ಮತ್ತು ಕಡಲ ತೀರಗಳಿಗೆ ಹೋಗುವ ಪ್ಲ್ಯಾನ್‌ ಮಾಡಿಕೊಂಡಿದ್ದರೆ ನಿಂಬೆ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಸೂಕ್ತ. ಈ ತಂಪು ನೀಡುವ ಬಣ್ಣವು ಆರಾಮದಾಯಕ ಮತ್ತು ಎಲ್ಲಾ ರೀತಿಯ ಚರ್ಮಕ್ಕೂ ಚೆನ್ನಾಗಿ ಹೊಂದಿಕೊಳ್ಳುತ್ತದೆ.

4 /7

ಬೇಸಿಗೆಯಲ್ಲಿ ಪುದೀನ ಹಸಿರು (ಮಿಂಟ್‌ ಕಲರ್)‌ ಬಣ್ಣದ ಬಟ್ಟೆಗಳು ಧರಿಸುವುದು ಉತ್ತಮ. ಏಕೆಂದರೆ ಬೇಸಿಗೆಯ ಬಿಸಿಲಿನ ಜಳಕ್ಕೆ ಈ ಬಣ್ಣದ ಬಟ್ಟೆಗಳು ನಿಮಗೆ ಹೆಚ್ಚು ತಂಪುದಾಯಕ ಅನುಭವ ನೀಡುತ್ತವೆ. 

5 /7

ಬಿರು ಬೇಸಿಗೆಯಲ್ಲಿ ನೆರಳೆ ಬಣ್ಣ ಅಥವಾ ಲ್ಯಾವೆಂಡರ್‌ ಕಲರ್‌ನ ಡ್ರೆಸ್‌ಗಳು ನಿಮಗೆ ಸೂಕ್ತವಾಗಿರುತ್ತವೆ. ಇವುಗಳನ್ನ ಧರಿಸುವುದು ನಿಮಗೆ ಆರಾಮದಾಯಕ ಮತ್ತು ಸೌಂದರ್ಯಕ್ಕೂ ಇವು ಉತ್ತಮ ಆಯ್ಕೆಯಾಗಿವೆ. 

6 /7

ಬೂದು ಬಣ್ಣ (ಪೀಚ್‌ ಕಲರ್)‌ದ ಬಟ್ಟೆಗಳನ್ನ ಬೇಸಿಗೆಯಲ್ಲಿ ಧರಿಸುವುದು ಸೂಕ್ತ. ಏಕೆಂದರೆ ಇವು ನಿಮ್ಮ ದೇಹಕ್ಕೆ ಹೊಂದಿಕೊಳ್ಳುತ್ತವೆ ಮತ್ತು ತಂಪು ಅನುಭವ ನೀಡುತ್ತವೆ. 

7 /7

ನಿಮ್ಮ ಬೇಸಿಗೆಯನ್ನು ಮತ್ತಷ್ಟು ಕಲರ್‌ಫುಲ್‌ ಮತ್ತು ಫ್ಯಾಷನೇಬಲ್‌ ಮಾಡಲು ಹವಳದ (Red Color) ಕಲರ್‌ ಡ್ರೆಸ್‌ಗಳು ಉತ್ತಮ ಆಯ್ಕೆ. ಇವು ಸಹ ಧರಿಸಲು ಆರಾಮದಾಯಕವಾಗಿರುತ್ತವೆ.