ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಆತ್ಮಕ್ಕೆ ಏನಾಗುತ್ತದೆ? ಗರುಡ ಪುರಾಣ ಹೇಳುವುದೇನು?.

Garuda Purana on Death: ಸಾಮಾನ್ಯ ಸಾವಿನ ನಂತರ ಅಂದರೆ ನ್ಯಾಚುರಲ್‌ ಆಗಿ ಸಾವನ್ನಪ್ಪುವ ವ್ಯಕ್ತಿಯ ಆತ್ಮವು 3-40 ದಿನಗಳವರೆಗೆ ಅಲೆದಾಡುತ್ತದೆ. ಆದರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಆತ್ಮವು ಬಹಳ ಸಮಯದವರೆಗೆ ಬಳಲಬೇಕಾಗುತ್ತದದಂತೆ.

Garuda Purana: ಮಾನವ ಜೀವನವು ಅನೇಕ ಜನ್ಮಗಳಲ್ಲಿ ಪುಣ್ಯ ಕರ್ಮಗಳನ್ನು ಮಾಡಿದ ನಂತರ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಇದನ್ನು ದೇವರ ಪ್ರಸಾದ ಅಥವಾ ಆಶೀರ್ವಾದ ಎಂದು ಕರೆಯಲಾಗುತ್ತದೆ. 'ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ' ಎಂಬ ಈ ಪದಗಳು ಮನುಷ್ಯ ಬದುಕಿನ ಸಾರ್ಥಕ್ಯಕ್ಕೆ ಕನ್ನಡಿ ಹಿಡಿಯುವಂತಿದೆ. ದೇವರು ದಯಪಾಲಿಸಿದ ಈ ಮಾನವ ದೇಹವನ್ನು ಯಾರಾದರೂ ಅಕಾಲಿಕವಾಗಿ ನಾಶಪಡಿಸಿಕೊಂಡರೆ ಅಂದರೆ ಆತ್ಮಹತ್ಯೆಯಂತಹ ದುಡುಕು ನಿರ್ಧಾರದಿಂದ ಸಾವನ್ನಪ್ಪಿದರೆ ಅದನ್ನು ಧರ್ಮಗ್ರಂಥಗಳಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಗರುಡ ಪುರಾಣದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /5

ಆತ್ಮಹತ್ಯೆ ಮಾಡಿಕೊಂಡ ನಂತರ ಮನುಷ್ಯನ ಆತ್ಮಕ್ಕೆ ಏನಾಗುತ್ತದೆ ಎಂಬುದರ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಆತ್ಮವು 7 ನರಕಗಳ ಪೈಕಿ ಒಂದನ್ನು ತಲುಪುತ್ತದಂತೆ.

2 /5

ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯ ಆತ್ಮವು 60,000 ವರ್ಷಗಳ ಕಾಲ ನರಕದಲ್ಲಿ ಉಳಿಯುತ್ತದಂತೆ. ಈ ವೇಳೆ ಅದು ಅನೇಕ ರೀತಿಯ ಹಿಂಸೆಗಳನ್ನು ಸಹಿಸಿಕೊಳ್ಳಬೇಕಾಗುತ್ತದಂತೆ.

3 /5

ಸಾಮಾನ್ಯ ಸಾವಿನ ನಂತರ ಅಂದರೆ ನ್ಯಾಚುರಲ್‌ ಆಗಿ ಸಾವನ್ನಪ್ಪುವ ವ್ಯಕ್ತಿಯ ಆತ್ಮವು 3-40 ದಿನಗಳವರೆಗೆ ಅಲೆದಾಡುತ್ತದೆ. ಆದರೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಆತ್ಮವು ಬಹಳ ಸಮಯದವರೆಗೆ ಬಳಲಬೇಕಾಗುತ್ತದಂತೆ.

4 /5

ದೇವರು ಕೊಟ್ಟ ಈ ದೇಹವನ್ನು ನಾಶಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಮೇಲೆ ದೇವರು ಕೂಡ ಕೋಪಗೊಳ್ಳುತ್ತಾನಂತೆ. ಆದ್ದರಿಂದ ಯಾವುದೇ ರೀತಿಯ ಸಂದರ್ಭ ಮತ್ತು ಸಂಕಷ್ಟ ಬಂದರೂ ಸಹ ವ್ಯಕ್ತಿಯು ಆತ್ಮಹತ್ಯೆಯಂತಹ ಆಲೋಚನೆಯನ್ನು ತನ್ನ ಮನಸ್ಸಿನಲ್ಲಿ ತರಬಾರದು ಎಂದು ಹೇಳಲಾಗಿದೆ. 

5 /5

ಜೀವನದಲ್ಲಿ ದುಃಖ ಇರಬಹುದು. ಆದರೆ ದೇಹದ ಚಕ್ರ ಪೂರ್ಣಗೊಂಡಾಗ ಮಾತ್ರ ಆತ್ಮವು ದೇಹವನ್ನು ಬಿಡುವುದು ಸರಿ. ಹೀಗಾಗಿ ಯಾರೇ ಆಗಲಿ ಎಷ್ಟೇ ಕಷ್ಟ ಬಂದರೂ ಸಹ ದಿಟ್ಟವಾಗಿ ಎದುರಿಸಿ ಬದುಕಿ ಬಾಳಬೇಕು. ಯಾರಿಗೂ ಸಹ ತೊಂದರೆ ನೀಡದೆ ಮನುಷ್ಯ ಜನ್ಮವನ್ನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಧರ್ಮಗ್ರಂಥದಲ್ಲಿ ಹೇಳಲಾಗಿದೆ.  (ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)