ಈ ದಿನಗಳಲ್ಲಿ ಅಪ್ಪಿ ತಪ್ಪಿಯೂ ಉಗುರುಗಳನ್ನು ಕತ್ತರಿಸಬೇಡಿ..! ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ..

Nail cutting astrology : ಹಿಂದೂ ಧರ್ಮಗ್ರಂಥಗಳ ಪ್ರಕಾರ, ಕೆಲವೊಂದಿಷ್ಟು ನಿರ್ಧಿಷ್ಟ ಕೆಲಸಗಳನ್ನು.. ನಿಗಧಿತ ದಿನ ಮತ್ತು ಸಮಯದಲ್ಲೇ ಮಾಡಬೇಕು ಅಂತ ಹೇಳಲಾಗುತ್ತದೆ. ಅಲ್ಲದೆ, ವಾರದ ಕೆಲವು ದಿನಗಳನ್ನು ಉಗುರು ಕತ್ತರಿಸಲು ನಿರ್ದಿಷ್ಟಪಡಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

1 /8

ಜೀವನದಲ್ಲಿ ಕೆಲವೊಂದಿಷ್ಟು ಕೆಲಸವನ್ನು ಯಾವಾಗ, ಹೇಗೆ ಮಾಡಬೇಕು ಅಂತ ಹಿರಿಯರು ಹೇಳುತ್ತಾರೆ. ಅಲ್ಲದೆ, ಹಿಂದೂ ಧರ್ಮದಲ್ಲಿ ಕೆಲವೊಂದಿಷ್ಟು ನಿಯಮಗಳಿವೆ. ಅದಕ್ಕಾಗಿಯೇ ಜ್ಯೋತಿಷ್ಯ, ಸಮಯ, ಇತ್ಯಾದಿಗಳನ್ನು ಪರಿಗಣಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಉಗುರು ಕತ್ತರಿಸಲು ಸಹ ಕೆಲವು ವಿಶೇಷ ನಿಯಮಗಳಿವೆ ಎಂದು ತಿಳಿದುಕೊಳ್ಳಬೇಕು..

2 /8

ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಉಗುರು ಕತ್ತರಿಸುವುದು ಬಹಳ ಒಳ್ಳೆಯ ಅಭ್ಯಾಸ. ಆದರೆ ಯಾವಾಗ ಬೇಕು ಆವಾಗ ಈ ಕೆಲಸವನ್ನು ಮಾಡುವಂತಿಲ್ಲ. ಹಿರಿಯರು ಸೂರ್ಯಾಸ್ತದ ನಂತರ, ವಿಶೇಷ ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಾರದು ಅಂತ ಸಲಹೆ ನೀಡುತ್ತಾರೆ.

3 /8

ಜ್ಯೋತಿಷ್ಯದ ಪ್ರಕಾರ, ಸೂರ್ಯಾಸ್ತದ ಸಮಯದಲ್ಲಿ ಅಥವಾ ರಾತ್ರಿಯಲ್ಲಿ ಉಗುರುಗಳನ್ನು ಕತ್ತರಿಸಬಾರದು. ಒಂದು ವೇಳೆ ಉಗುರು ಕಟ್‌ ಮಾಡಿದರೆ, ಲಕ್ಷ್ಮಿ ದೇವಿಯನ್ನು ಕೋಪಕ್ಕೆ ಕಾರಣವಾಗುತ್ತದೆ. ಅಲ್ಲದೆ, ಜೀವನದಲ್ಲಿ ಸಮಸ್ಯೆಗಳನ್ನು ಉಂಟಾಗುತ್ತವೆ ಎಂದು ಬಲವಾಗಿ ನಂಬಿಕೆ ಇದೆ.. ಹಾಗಿದ್ರೆ ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಾರದು..? ಬನ್ನಿ ತಿಳಿದುಕೊಳ್ಳೋಣ..

4 /8

ಮಂಗಳವಾರ : ಶಾಸ್ತ್ರದ ಪ್ರಕಾರ, ಮಂಗಳವಾರ ಉಗುರು ಕತ್ತರಿಸಬಾರದು. ಕಾರಣವೇನೆಂದರೆ ಈ ದಿನ ಉಗುರು ಕತ್ತರಿಸುವುದರಿಂದ ಸಾಲ ಹೆಚ್ಚಾಗುತ್ತದೆಯಂತೆ. ಅಲ್ಲದೆ, ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ನಂಬಲಾಗಿದೆ. ಹನುಮಂತನ ದಿನವೆಂದು ಪರಿಗಣಿಸಲಾದ ಮಂಗಳವಾರವು ಆಧ್ಯಾತ್ಮಿಕವಾಗಿ ಶುಭ ದಿನವಾಗಿದೆ. 

5 /8

ಮಂಗಳವಾರ : ಶಾಸ್ತ್ರದ ಪ್ರಕಾರ, ಮಂಗಳವಾರ ಉಗುರು ಕತ್ತರಿಸಬಾರದು. ಕಾರಣವೇನೆಂದರೆ ಈ ದಿನ ಉಗುರು ಕತ್ತರಿಸುವುದರಿಂದ ಸಾಲ ಹೆಚ್ಚಾಗುತ್ತದೆಯಂತೆ. ಅಲ್ಲದೆ, ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ನಂಬಲಾಗಿದೆ. ಹನುಮಂತನ ದಿನವೆಂದು ಪರಿಗಣಿಸಲಾದ ಮಂಗಳವಾರವು ಆಧ್ಯಾತ್ಮಿಕವಾಗಿ ಶುಭ ದಿನವಾಗಿದೆ. 

6 /8

ಶನಿವಾರ : ಶನಿವಾರವನ್ನು ಶನಿಯ ಪ್ರಭಾವದ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಶನಿಯು ದುರ್ಬಲವಾಗಿರುವ ಜನರು ಉಗುರುಗಳನ್ನು ಕತ್ತರಿಸುವುದರಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬಹುದು ಎಂದು ಹೇಳಲಾಗುತ್ತದೆ. ಇದು ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು.

7 /8

ಭಾನುವಾರ : ಭಾನುವಾರ ವಾರಾಂತ್ಯದ ದಿನ. ಆ ದಿನದಂದು ನಾವು ಅಂತಹ ಚಟುವಟಿಕೆಗಳನ್ನು ಮಾಡುತ್ತೇವೆ. ಆದರೆ ಈ ದಿನ ಉಗುರುಗಳನ್ನು ಕತ್ತರಿಸುವುದರಿಂದ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ ಎಂದು ಹೇಳಲಾಗುತ್ತದೆ. ಇದು ರಾಶಿಚಕ್ರ ಚಿಹ್ನೆಯ ಆತ್ಮ ವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಇದು ಯಶಸ್ಸನ್ನು ತಡೆಯುವುದಲ್ಲದೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.

8 /8

(ಸೂಚನೆ : ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಿಂದ ಸಂಗ್ರಹಿಸಲಾಗಿದೆ. ಈ ಸಂದೇಶದಲ್ಲಿ ಉಲ್ಲೇಖಿಸಲಾದ ಮಾಹಿತಿಯು ಆಧ್ಯಾತ್ಮಿಕ ನಂಬಿಕೆಗಳನ್ನು ಆಧರಿಸಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ವಿವರಣೆಯಿಲ್ಲ. ಇದನ್ನು Zee Kannada News ಖಚಿತಪಡಿಸುವುದಿಲ್ಲ.)