Alcohol and Peanuts : ಸಾಮಾನ್ಯವಾಗಿ ಮದ್ಯ ಪ್ರಿಯರು ಎಣ್ಣೆ ಜೊತೆಗೆ ಉಪ್ಪಿನಕಾಯಿ ಅಥವಾ ಯಾವುದೇ ಕರಿದ ತಿಂಡಿಗಳನ್ನು ತಿನ್ನೋದು ಸಾಮಾನ್ಯ. ಅಂದಹಾಗೆ ಬಾರ್‌ಗಳಲ್ಲಿ ಮದ್ಯದ ಜೊತೆಗೆ ಮಸಾಲೆ ಶೇಂಗಾವನ್ನು ತಿನ್ನಲು ನೀಡುತ್ತಾರೆ.. ಕೆಲವರು ಇದನ್ನು ರುಚಿಗೆ ಕೊಡ್ತಾರೆ ಅಂತ ತಿಳಿದುಕೊಂಡಿದ್ದಾರೆ.. ಆದರೆ ಇದರ ಹಿಂದಿನ ಉದ್ದೇಶವೇ ಬೇರೆ ಇದೆ..
ಬಾರ್‌ಗಳಿಗೆ ಹೋದಾಗ ನೀವು ಮದ್ಯವನ್ನು ಆರ್ಡರ್ ಮಾಡುತ್ತೀರ. ಆಗ ಸರ್ವರ್ ಅಲ್ಕೋಹಾಲ್ ಜೊತೆ ಮಸಾಲೆ ಶೇಂಗಾ ತಂದು ನಿಮ್ಮ ಟೆಬಲ್ ಮೇಲೆ ಇಡುತ್ತಾನೆ. ಈ ಸಂಗತಿಯನ್ನು ನೀವು ಗಮನಿಸಿರಬಹುದು. ಈ ರೀತಿ ಎಣ್ಣೆ ಜೊತೆ ಬಾರ್‌ನವರು ಮಸಾಲೆ ಶೆಂಗಾ ಏಕೆ ಕೊಡ್ತಾರೆ ಗೊತ್ತೆ.. ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ.
ಡ್ರಿಂಕ್ಸ್ ಜೊತೆ ಶೇಂಗಾ (ಕಡಲೇಕಾಯಿ) ನೀಡುವುದು ರುಚಿಗೆ ಅಲ್ಲ, ಬದಲಾಗಿ ಇದರ ಹಿಂದೆ ಒಂದು ನಿಗೂಢ ಉದ್ದೇಶ ಇದೆ. ಮಸಾಲೆ ಶೇಂಗಾ ಮತ್ತು ಅಲ್ಕೋಹಾಲ್ ಬೆಸ್ಟ್ ಕಾಂಬಿನೇಶನ್.. ಮದ್ಯ ಸೇವನೆ ಮಾಡುತ್ತ ಉಪ್ಪು ಹಚ್ಚಿರುವ ಶೇಂಗಾ ತಿಂದರೆ ಸ್ವರ್ಗ ಧರೆಗಿಳಿದು ಬಂದಂತೆ ಭಾಸವಾಗುತ್ತದೆ ಅಲ್ವಾ..
ಆದರೆ ಸತ್ಯವೇನು ಅಂದ್ರೆ.. ಶೇಂಗಾ ಮತ್ತು ಮದ್ಯ ಸೇವನೆ ಹೆಚ್ಚು ಬಾಯಾರಿಕೆಗೆ ಕಾರಣವಾಗುತ್ತದೆ. ಕಡಲೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಉಪ್ಪು ಇರುವುದರಿಂದ ಬಹುಬೇಗನೇ ನಮ್ಮ ದೇಹ ನಿರ್ಜಲೀಕರಣಗೊಳ್ಳುತ್ತವೆ. ಹೀಗಾಗಿ ಹೆಚ್ಚೆಚ್ಚು ಬಾಯಾರಿಕೆ ಉಂಟಾಗುತ್ತದೆ..
ಹೆಚ್ಚು ಬಾಯಾರಿಕೆ ಆಗುತ್ತಿದ್ದಂತೆ ಗ್ರಾಹಕರು ಮತ್ತಷ್ಟು ಅಲ್ಕೋಹಾಲ್ ಆರ್ಡರ್ ಮಾಡಿ ಸೇವನೆ ಮಾಡಲು ಶುರುಮಾಡುತ್ತಾರೆ. ಹೀಗಾಗಿ ಎಣ್ಣೆ ಹೆಚ್ಚು ಮಾರಾಟವಾಗಲಿ ಅಂತ ಬಾರ್‌ಗಳಲ್ಲಿ ಅಲ್ಕೋಹಾಲ್ ಜೊತೆ ಮಸಾಲೆ ಕಡಲೆಕಾಯಿಯನ್ನು ತಿನ್ನು ನೀಡುತ್ತಾರೆ..
ಮಸಾಲೆ ಶೇಂಗಾ ರಕ್ತದಲ್ಲಿನ ಅಲ್ಕೋಹಾಲ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತವೆ. ಇದರಿಂದ ನೀವು ಹೆಚ್ಚು ಕುಡಿದರೂ ಬಹುಬೇಗನೆ ಎಣ್ಣೆ 'ಕಿಕ್' ಕೊಡಲ್ಲ.. ಆದರೆ ನೆನಪಿಟ್ಟುಕೊಳ್ಳಿ ಕುಡಿಯುವಾಗ ಏನನ್ನಾದರೂ ತಿನ್ನುತ್ತಲೇ ಇರುವುದು ಉತ್ತಮ.. ಕರೀದ ತಿಂಡಿಗಳನ್ನು ಬಿಟ್ಟು ಆರೋಗ್ಯಕರ ಆಹಾರ ಸೇವಿಸಿ.. ಮಿತವಾಗಿ ಮಧ್ಯ ಸೇವಿಸಿ..