ಮಳೆಗಾಲದಲ್ಲಿ ಹಾವು ಕಚ್ಚಿದರೆ ಏನು ಮಾಡಬೇಕು..? ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ..

Written ByPuttaraj K Alur
Published: Jun 12, 2025, 08:19 AM IST|Updated: Jun 12, 2025, 08:19 AM IST

Snakes in Monsoon: ಮಳೆಗಾಲದಲ್ಲಿ ಹಾವುಗಳ ಅಪಾಯ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಅನೇಕ ಜನರು ಹಾವುಗಳಿಂದ ಕಚ್ಚಿಸಿಕೊಳ್ಳುತ್ತಾರೆ. ನೀವು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನ ಅನುಸರಿಸಿದರೆ, ಹಾವು ಕಡಿತವನ್ನ ತಪ್ಪಿಸಬಹುದು ಎಂದು ತಜ್ಞರು ಹೇಳುತ್ತಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...

1/5

ಹಾವಿನ ವಿಷವು ಮುಖ್ಯವಾಗಿ ನರಮಂಡಲ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಾವಿನ ವಿಷವು ರಕ್ತದೊಂದಿಗೆ ಬೆರೆತು ಹೆಪ್ಪುಗಟ್ಟುವಂತೆ ಮಾಡುತ್ತದೆ. ಇದರಿಂದ ರಕ್ತ ಸುಲಭವಾಗಿ ಹರಿಯುವುದಿಲ್ಲ. ನಂತರ ಮಾನವ ದೇಹದಲ್ಲಿ ರಕ್ತ ಪರಿಚಲನೆ ನಿಂತು, ಹೃದಯ ಬಡಿತ ನಿಂತು ವ್ಯಕ್ತಿ ಸಾಯುತ್ತಾನೆ. ಅದಕ್ಕಾಗಿಯೇ ಮಳೆಗಾಲದಲ್ಲಿ ನೀವು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿದರೆ, ಹಾವು ಕಡಿತದಿಂದ ಸುಲಭವಾಗಿ ಪಾರಾಗಬಹುದು.   

2/5

ವಿಷಕಾರಿಯಲ್ಲದ ಹಾವುಗಳು ಕಚ್ಚಿದಾಗ ಚರ್ಮದ ಮೇಲೆ ಅಲರ್ಜಿಯಂತೆಯೇ ಕೆಂಪು ದದ್ದುಗಳು ಕಾಣಿಸಿಕೊಳ್ಳುತ್ತವೆ. ಕೆಲವರು ಹಾವಿನ ಮೇಲೆ ದಾಳಿ ಮಾಡಿ ಸಾಯುತ್ತಾರೆ. ಇಂತಹ ಕೆಲಸಗಳನ್ನು ಎಂದಿಗೂ ಮಾಡಬಾರದು. ಹಾವು ಕಚ್ಚಿದಾಗ ಕೆಲವರು ತಮ್ಮ ಬಾಯಿಯಿಂದ ರಕ್ತವನ್ನು ಹೀರುತ್ತಾರೆ ಮತ್ತು ಅದನ್ನು ಉಗುಳುತ್ತಾರೆ. ಈ ಹುಚ್ಚುತನದ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಕೆಲವೊಮ್ಮೆ ಈ ವಿಷದಿಂದಲೇ ವ್ಯಕ್ತಿ ಜೀವ ಕಳೆದುಕೊಳ್ಳುವ ಅಪಾಯವಿರುತ್ತದೆ.

3/5

ಹಾವು ಕಚ್ಚಿದಾಗ ಸಾಧ್ಯವಾದರೆ ಹಾವು ಕಡಿತದ ಫೋಟೋ ಅಥವಾ ಅದು ಹೇಗೆ ಕಾಣುತ್ತದೆ ಎಂಬುದರ ಕುರಿತು ವೈದ್ಯರಿಗೆ ಮಾಹಿತಿ ತಿಳಿಸಬೇಕು. ಇದು ಹಾವಿನ ಕಡಿತಕ್ಕೆ ಸರಿಯಾದ ಚಿಕಿತ್ಸೆ ನೀಡಲು ಅವರಿಗೆ ಅವಕಾಶ ನೀಡುತ್ತದೆ. ಮತ್ತೊಂದೆಡೆ ವಿಷಪೂರಿತ ಹಾವು ಕಚ್ಚಿದರೆ, ತಕ್ಷಣವೇ ಚಿಕಿತ್ಸೆಯ ಅಗತ್ಯವಾಗಿರುತ್ತದೆ. 

4/5

ಹೊಲಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಹಾವುಗಳು ಅನೇಕ ಜನರನ್ನು ಕಚ್ಚುತ್ತವೆ. ಹಾವು ಕಚ್ಚಿದರೆ ತಕ್ಷಣ ಗಾಯಗೊಂಡ ಪ್ರದೇಶವನ್ನು ಸೋಪಿನಿಂದ ತೊಳೆಯಬೇಕು. ನಂತರ ಅದನ್ನು ಬಲವಾದ ದಾರ ಅಥವಾ ಹತ್ತಿ ಅಥವಾ ಬಟ್ಟೆಯಿಂದ ಬ್ಯಾಂಡೇಜ್ ಮಾಡಬೇಕು. ತಕ್ಷಣ ಅದರ ಮೇಲೆ ಹೆಚ್ಚು ಒತ್ತಡ ಹೇರದಂತೆ ನೋಡಿಕೊಳ್ಳಬೇಕು. ತಕ್ಷಣ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು.

5/5

ದಟ್ಟವಾದ ಮರಗಳು, ಸಂಗ್ರಹವಾದ ಕಸ-ಕಡ್ಡಿ ಇತ್ಯಾದಿ ಇರುವ ಪ್ರದೇಶಗಳಲ್ಲಿ ಹಾವುಗಳು ವಿಶೇಷವಾಗಿ ಕಂಡುಬರುತ್ತವೆ. ಹೀಗಾಗಿಯೇ ಮನೆಯ ಸುತ್ತಲಿನ ಪ್ರದೇಶವನ್ನು ಮರಗಳಿಂದ ಮತ್ತು ಕಸದಿಂದ ಮುಕ್ತವಾಗಿಡಲು ಕಾಳಜಿ ವಹಿಸಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ, ಕಳೆ ಮತ್ತು ಮರಗಳಿಂದ ಮುಕ್ತವಾಗಿಡಬೇಕು.