ನೀಲಿ ಸೀರೆ, ಅಪರೂಪದ ಸೌಂದರ್ಯ, ರಾತ್ರೋರಾತ್ರಿ ವೈರಲ್‌ ಆದ ಈ ಸುಂದರಿ ಯಾರ್‌ ಗೊತ್ತೆ? ಕನ್ನಡದ ಸಿನಿಮಾದಲ್ಲಿಯೂ ನಟಿಸಿದ್ದಾರೆ

Who is Girija Oak : ನೀಲಿ ಸೀರೆ, ತೋಳಿಲ್ಲದ ಬಿಳಿ ಕುಪ್ಪಸ.. ತುಂಬಾ ಸರಳವಾಗಿ ಕಾಣುವ ಈ ಸುಂದರಿ ಒಂದೇ ಒಂದು ಸಂದರ್ಶನದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದಾರೆ.  ಅಚ್ಚರಿ ಏನಂದ್ರೆ ನೀವು ನೋಡಿದಂತೆ ಇಕೆ ಸಾಮಾನ್ಯಳಲ್ಲ.. ಹಾಗಿದ್ರೆ ಯಾರಿಕೆ..? ಬನ್ನಿ ನೋಡೋಣ..

1 /8

ನೀಲಿ ಸೀರೆಯ ಈ ಚೆಲುವೆ ಇದ್ದಕ್ಕಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದಾಳೆ.  ಹಿಂದಿ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಭಾಗವಹಿಸಿದ್ದ ಈ ಸುಂದರಿ ಒಂದೇ ಒಂದು ಮಾತಿನಿಂದ ಸಂಚಲನ ಸೃಷ್ಟಿಸಿದ್ದಾಳೆ..

2 /8

X, Insta ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕ ಜನರ ಹೃದಯ ಕದ್ದಿದ್ದಾಳೆ. ನೋಡೋಕೆ ತುಂಬಾ ಸರಳವಾಗಿ ಕಾಣುವ ಈ ಮಹಿಳೆ ಯಾರು ಅಂತ ಎಷ್ಟೋ ಜನರಿಗೆ ಗೊತ್ತಿಲ್ಲ. ಹಾಗಾಗಿ ಈಕೆಯ ಬಗ್ಗೆ ಅಂತರ್ಜಾಲದಲ್ಲಿ ಹುಡುಕಾರ ಜೋರಾಗಿದೆ..

3 /8

ಅವರ ಹೆಸರು ಗಿರಿಜಾ ಓಕ್. ಅವರು ಡಿಸೆಂಬರ್ 27, 1987 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು. ಮರಾಠಿ ನಟ ಗಿರೀಶ್ ಓಕ್ ಅವರ ಪುತ್ರಿ.

4 /8

ಗಿರಿಜಾ ಅವರು ಮುಂಬೈನ ಠಾಕೂರ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಿಂದ ಜೈವಿಕ ತಂತ್ರಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ವ್ಯವಹಾರ ನಿರ್ವಹಣೆಯನ್ನೂ ಅಧ್ಯಯನ ಮಾಡಿದ್ದಾರೆ.

5 /8

2004 ರಲ್ಲಿ ನಟಿಯಾಗಿ ಮರಾಠಿ ಚಿತ್ರರಂಗ ಪ್ರವೇಶಿಸಿದರು. ಮರಾಠಿ ಮಾತ್ರವಲ್ಲದೆ ಹಿಂದಿ ಮತ್ತು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2009 ರಲ್ಲಿ ತೆರೆಕಂಡ ಹೌಸ್‌ಫುಲ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.

6 /8

ಅಲ್ಲದೆ, ಆಮಿರ್ ಖಾನ್ ನಟನೆಯ "ತಾರೆ ಜಮೀನ್ ಪರ್", ಶಾರುಖ್ ಖಾನ್ "ಜವಾನ್" ಸೇರಿದಂತೆ ಹಲವಾರು ಹಿಟ್‌ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2011 ರಲ್ಲಿ ತೆರೆಕಂಡ ಚಲನಚಿತ್ರ ಶೋರ್ ಇನ್ ದಿ ಸಿಟಿಯಲ್ಲಿಯೂ ಕಾಣಿಸಿಕೊಂಡಿದ್ದಾರೆ.

7 /8

ಇತ್ತೀಚೆಗೆ ಗಿರಿಜಾ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದ ಫೋಟೋಗಳು ಕಳೆದ ಕೆಲವು ದಿನಗಳಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. 

8 /8

38ನೇ ವಯಸ್ಸಿನಲ್ಲೂ ತಮ್ಮ ಮಾತಿನ ಶೈಲಿ ಮತ್ತು ಸೌಂದರ್ಯದ ಮೂಲಕ ನೆಟ್ಟಿಗರ ಹೃದಯವನ್ನು ಕದ್ದಿರುವ ಗಿರಿಜಾ ಪ್ರಸ್ತುತ ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ನಲ್ಲಿದ್ದಾರೆ..