Jyoti Malhotra : ಹರಿಯಾಣದ ಹಿಸಾರ್‌ನ ಪ್ರಸಿದ್ಧ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸಿದ ಆರೋಪ ಹೊರಿಸಲಾಗಿದೆ. ಆಕೆ ಪ್ರಸ್ತುತ ಬಂಧನದಲ್ಲಿದ್ದಾಳೆ. 20 ಸಾವಿರ ಸಂಬಳ ಪಡೆಯುತ್ತಿದ್ದ ಚೆಲುವೆ ಏಕಾಎಕಿ ಲಕ್ಷ ಲಕ್ಷ ಹಣ ಗಳಿಸಲು ಶುರು ಮಾಡಿದ್ದು ಹೇಗೆ..? ಬನ್ನಿ ನೋಡೋಣ..
ಹರಿಯಾಣದ ಹಿಸಾರ್‌ನ ಪ್ರಸಿದ್ಧ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪ ಹೊತ್ತು ಪ್ರಸ್ತುತ ಜೈಲುವಾಸ ಅನುಭವಿಸುತ್ತಿದ್ದಾಳೆ.
ಟ್ರಾವೆಲ್ ವಿತ್ ಗೋ ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ, ಈ ಸುಂದರಿ, 3.78 ಲಕ್ಷ ಚಂದಾದಾರರನ್ನು ಹೊಂದಿದ್ದಾಳೆ. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1.33 ಲಕ್ಷ ಮತ್ತು ಫೇಸ್‌ಬುಕ್‌ನಲ್ಲಿ 3.21 ಲಕ್ಷ ಫಾಲೋವರ್‌ಗಳಿದ್ದಾರೆ.
ಜ್ಯೋತಿ ಮಲ್ಹೋತ್ರಾ ಮೇಲೆ ಬೇಹುಗಾರಿಕೆ ಆರೋಪ ಕೇಳಿ ಬಂದಿದೆ.. ಪ್ರಸ್ತುತ ಈಕೆ ಪೊಲೀಸ್ ಕಸ್ಟಡಿಯಲ್ಲಿದ್ದಾಳೆ. ಜ್ಯೋತಿಯ ತಂದೆಯ ಪ್ರಕಾರ, ಜ್ಯೋತಿ ಒಮ್ಮೆ ದೆಹಲಿಯಲ್ಲಿ ಕೇವಲ 20,000 ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದರು. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅವರು ಹಿಸಾರ್‌ಗೆ ಮರಳಿದ್ದರಂತೆ..
ಈ ಮಧ್ಯೆ, ಕೇವಲ 20 ಸಾವಿರ ರೂಪಾಯಿ ಸಂಪಾದಿಸುವ ಜ್ಯೋತಿ ನಂತರ ಪಾಕಿಸ್ತಾನದ ಗೂಢಚಾರಿಣಿಯಾದದ್ದು ಹೇಗೆ ಎಂದು ಕೇಳಲಾಗುತ್ತಿದೆ. ಪಾಕಿಸ್ತಾನದ ಬಗ್ಗೆ ಸಕಾರಾತ್ಮಕ ಚಿತ್ರಣವನ್ನು ಮೂಡಿಸಲು ಮತ್ತು ಪಾಕಿಸ್ತಾನದ ನೀತಿಗಳನ್ನು ಉತ್ತೇಜಿಸಲು ವಿದೇಶಿ ಏಜೆಂಟರು ಅವರನ್ನು ಆಯ್ಕೆ ಮಾಡಿದ್ದರು ಎಂದು ತಿಳಿದು ಬಂದಿದೆ..
ಪಾಕಿಸ್ತಾನದಲ್ಲಿದ್ದಾಗ ಆಕೆಯ ವ್ಯವಹಾರಗಳು ಪ್ರಶ್ನಾರ್ಹವಾಗಿದ್ದವು. ದೇಶಕ್ಕೆ ಅಪಾಯಕಾರಿಯಾದ ಕೆಲವು ಜನರೊಂದಿಗೆ ಆಕೆ ಸಂಪರ್ಕದಲ್ಲಿದ್ದಳು ಎಂದು ವರದಿಯಾಗಿದೆ.
ಪ್ರಸ್ತುತ, ಜ್ಯೋತಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಮತ್ತು ಸೂಕ್ಷ್ಮ ಮಾಹಿತಿಯನ್ನು ಒದಗಿಸಿದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಆಕೆ ಯಾರೊಂದಿಗೆ ಸಂಪರ್ಕದಲ್ಲಿದ್ದಳು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಜ್ಯೋತಿ ಇಲ್ಲಿಯವರೆಗೆ ಶತ್ರು ರಾಷ್ಟ್ರಕ್ಕೆ ಯಾವ ಮಾಹಿತಿಯನ್ನು ಒದಗಿಸಿದ್ದಾಳೆ, ಜೊತೆಗೆ ಅದರಿಂದ ಅವಳು ಪಡೆದ ಹಣ ಎಷ್ಟು..? ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.