ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹೊಸ ಗರ್ಲ್‌ ಫ್ರೆಂಡ್‌ ಗೌರಿ ಯಾರು?

ಬಾಲಿವುಡ್‌ ನಟ ಅಮೀರ್ ಖಾನ್ ಅವರ ಪ್ರಿ ಬರ್ತ್ ಡೇ ಪಾರ್ಟಿಯಲ್ಲಿ ಅವರ ಕುಟುಂಬಸ್ಥರು, ಹಿತೈಷಿಗಳು, ಬಾಲಿವುಡ್‌ ನಟರಾದ ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಹಾಜರಿದ್ದರು. ಈ ಪಾರ್ಟಿಗೆ ಗೌರಿ ಸಹ ಜೊತೆಯಾಗಿದ್ದರು. 

Aamir Khan New Girls Friend: ʼಮಿಸ್ಟರ್ ಪರ್ಫೆಕ್ಷನಿಸ್ಟ್ ಆಫ್ ಬಾಲಿವುಡ್ʼ ಎಂದೇ ಖ್ಯಾತಿಯಾಗಿರುವ ನಟ ಅಮೀರ್ ಖಾನ್‌ ಇದೇ ಮಾರ್ಚ್ 14ರಂದು ತಮ್ಮ 60 ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ಬಾಲಿವುಡ್‌ ಸೂಪರ್‌ಸ್ಟಾರ್‌ ಈ ಬಾರಿ ಸಖತ್‌ ಸುದ್ದಿಯಾಗಿದ್ದು ಇಳಿ ವಯಸ್ಸಲ್ಲಿಯೂ ತಮ್ಮ ಮೂರನೇ ಸಂಗಾತಿಯನ್ನು ಪರಿಚಯಿಸುವ ಮೂಲಕ. ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹೊಸ ಗರ್ಲ್‌ ಫ್ರೆಂಡ್‌ ಗೌರಿ ಯಾರು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /6

ಮಾಧ್ಯಮ ಮಿತ್ರರು, ಫೋಟೋಗ್ರಾಫರ್‌ಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿದ ಅಮೀರ್ ಖಾನ್ ಪ್ರಿ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಮಾಜಿ ಪತ್ನಿಯರಾದ ಕಿರಣ್ ರಾವ್, ರೀನಾ ದತ್ ಸಹ ಹಾಜರಿದ್ದರು. ಈ ವೇಳೆ ತಮಾಷೆಯಾಗಿ ಮಾತನಾಡುತ್ತಾ ಅಮೀರ್‌ ಖಾನ್‌ ತಮ್ಮ ಹೊಸ ಗೆಳತಿಯ ಹೆಸರನ್ನು ಬಹಿರಂಗಪಡಿಸಿದರು. ಈ ಮೂಲಕ ಕಳೆದ ಕೆಲ ದಿನಗಳಿಂದಲೂ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟರು.

2 /6

60ನೇ ವಯಸ್ಸಿನಲ್ಲಿ ಅಮೀ‌ರ್ ಖಾನ್ ಬಾಳಿನಲ್ಲಿ ಬಂದ ಸಂಗಾತಿಯ ಹೆಸರು ಗೌರಿ ಸ್ಪಾಟ್. ದೀರ್ಘ ಕಾಲದಿಂದ ಗೌರಿ ತಮಗೆ ಪರಿಚಯವಿದ್ದು, ಕಳೆದೊಂದು ವರ್ಷದಿಂದ ನಾವಿಬ್ಬರೂ ಲಿವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದೇವೆ ಅಂತಾ ಹೇಳಿಕೊಂಡಿದ್ದಾರೆ.

3 /6

ಗೌರಿ ಬೆಂಗಳೂರಿನವರು.. 25 ವರ್ಷಗಳಿಂದ ನನಗೆ ಪರಿಚಯ. ಕಳೆದ ಒಂದೂವರೆ ವರ್ಷಗಳಿಂದ ಸಂಪರ್ಕದಲ್ಲಿದ್ದು, ಜೊತೆಯಾಗಿದ್ದೇವೆ. ಆಕೆ ಮುಂಬೈಯಲ್ಲಿದ್ದಾಗ ನಾವು ಆಕಸ್ಮಿಕವಾಗಿ ಭೇಟಿಯಾಗಿ ಪರಿಚಯವಾಗಿ ಹತ್ತಿರವಾದ್ದೇವೆ. ನಂತರ ಎಲ್ಲವೂ ಸಹಜವಾಗಿ ಸಾಗಿತು ಅಂತಾ ಅಮೀರ್ ಖಾನ್ ಹೇಳಿಕೊಂಡಿದ್ದಾರೆ.

4 /6

ಅಮೀರ್ ಖಾನ್ ಅವರ ಪ್ರಿ ಬರ್ತ್ ಡೇ ಪಾರ್ಟಿಯಲ್ಲಿ ಅವರ ಕುಟುಂಬಸ್ಥರು, ಹಿತೈಷಿಗಳು, ಬಾಲಿವುಡ್‌ ನಟರಾದ ಸಲ್ಮಾನ್ ಖಾನ್ ಮತ್ತು ಶಾರೂಖ್ ಖಾನ್ ಹಾಜರಿದ್ದರು. ಈ ಪಾರ್ಟಿಗೆ ಗೌರಿ ಸಹ ಜೊತೆಯಾಗಿದ್ದರು. 

5 /6

ಬೆಂಗಳೂರು ಮೂಲದ ಗೌರಿಯವರ ತಾಯಿ ರಿಟಾ ಸ್ಪಾಟ್, ತಾಯಿ ಪಂಜಾಬಿ-ಐರಿಷ್ ಮೂಲದವರಾದರೆ, ತಂದೆ ತಮಿಳು-ಬ್ರಿಟಿಷ್ ಮೂಲದವರು. ಅವರು ಬೆಂಗಳೂರಿನಲ್ಲಿ ಸಲೋನ್‌ ನಡೆಸುತ್ತಿದ್ದರು. ಗೌರಿ ತಮ್ಮ ಜೀವನದ ಅನೇಕ ವರ್ಷಗಳನ್ನು ಬೆಂಗಳೂರಿನಲ್ಲಿಯೇ ಕಳೆದಿದ್ದಾರೆ.

6 /6

ಬ್ಲೂ ಮೌಂಟೇನ್ ಶಾಲೆಯಲ್ಲಿ ಓದಿದ್ದ ಗೌರಿ ಫ್ಯಾಶನ್ ಕೋರ್ಸ್ ಮಾಡಿದ್ದಾರೆ. 2004ರಲ್ಲಿ ಲಂಡನ್ ಸ್ಕೂಲ್ ಆಫ್ ಆರ್ಟ್ಸ್‌ನಿಂದ ಎಫ್‌ಡಿಎ ಸ್ಟೈಲಿಂಗ್ ಅಂಡ್ ಫೋಟೋಗ್ರಾಫಿ ಕೋರ್ಸ್‌ ಮಾಡಿದ್ದಾರೆ. ಪ್ರಸ್ತುತ ಮುಂಬೈಯಲ್ಲಿ ಬಿಬ್ಲಂಟ್ ಸಲೋನ್ ನಡೆಸುತ್ತಿದ್ದಾರೆ. ಅಮೀರ್ ಖಾನ್ ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ಕೂಡ ತೊಡಗಿಸಿಕೊಂಡಿದ್ದಾರಂತೆ.