RCB owner: ಕೊನೆಗೂ 18 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ ಆರ್‌ಸಿಬಿ. ಈ ಸಂಭ್ರಮದಲ್ಲಿರುವ ಅಭಿಮಾನಿಗಳು ಸಂತೋಷದ ಕಣ್ಣೀರು ಸುರಿಸುತ್ತಿದ್ದಾರೆ.
1/7ಕೊನೆಗೂ 18 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ ಆರ್‌ಸಿಬಿ. ಈ ಸಂಭ್ರಮದಲ್ಲಿರುವ ಅಭಿಮಾನಿಗಳು ಸಂತೋಷದ ಕಣ್ಣೀರು ಸುರಿಸುತ್ತಿದ್ದಾರೆ.
2/7ಅಂದಾಗೆ ಅತಿ ಹೆಚ್ಚು ಅಭಿಮಾನಿ ಬಳಗವನ್ನೇ ಹೊಂದಿರುವ ಆರ್‌ಸಿಬಿಯ ವಾರ್ಷಿಕ ಆದಾಯ, ಆಸ್ತಿ ಮೌಲ್ಯ ಮತ್ತು ಓನರ್ ಯಾರು ಎಂಬ ಬಗ್ಗೆ ಈ ವರದಿಯಲ್ಲಿ ತಿಳಿಯೋಣ.
3/7ಆರ್‌ಸಿಬಿ... ಇದು ಅದೆಷ್ಟೋ ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ತಂಡ. ಒಂದೊಮ್ಮೆ ವಿಜಯ್ ಮಲ್ಯ ಈ ತಂಡದ ಓನರ್ ಆಗಿದ್ದರು. ಆದರೆ ಭಾರತ ಬಿಟ್ಟು ಪಲಾಯನ ಮಾಡಿದ ನಂತರ ಈ ಫ್ರಾಂಚೈಸಿಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ನೋಡಿಕೊಳ್ಳುತ್ತಿದೆ.
4/7ಈ ಫ್ರಾಂಚೈಸಿಗೆ ಇಲ್ಲಿಯವರೆಗಿನ ಒಂದೇ ಒಂದು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂಬ ಹಣೆಪಟ್ಟಿಯೊಂದಿತ್ತು. ಆದರೆ ಇಂದು ಆ ಅಪಮಾನ ಕೊನೆಯಾಗಿದೆ.
5/7ಆರ್‌ಸಿಬಿಯ ಮಾಲೀಕ ಸಂಸ್ಥೆ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ವಿಶ್ವದ ಪ್ರಮುಖ ಮದ್ಯ ಉತ್ಪಾದನಾ ಕಂಪನಿಯಾದ ಡಿಯಾಜಿಯೊ ಪಿಎಲ್‌ಸಿಯ ಅಂಗಸಂಸ್ಥೆಯಾಗಿದೆ.
6/7ಈ ಕಂಪನಿಯ ಒಟ್ಟು ಆಸ್ತಿ 2024ರಲ್ಲಿ ಸುಮಾರು $100 ಬಿಲಿಯನ್ ಇತ್ತು. ಇದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿಯೇ ಇದ್ದು, ಈ ಫ್ರಾಂಚೈಸ್ ಬೆಲೆ 2024ರ ವೇಳೆಗೆ ರೂ 1.025 ಬಿಲಿಯನ್ ಆಗಿದೆ.
7/72008 ರಲ್ಲಿ ಶುರುವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ವಿಜಯ್ ಮಲ್ಯ $111.6 ಮಿಲಿಯನ್‌ಗೆ ಖರೀದಿಸಿದ್ದರು. ಆ ಸಮಯದಲ್ಲಿ ಇದು ಎರಡನೇ ಅತ್ಯಂತ ದುಬಾರಿ IPL ತಂಡವಾಗಿತ್ತು. ಆದರೆ 2016 ರಲ್ಲಿ ವಿಜಯ್ ಮಲ್ಯ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶ ಬಿಟ್ಟು ಓಡಿಹೋಗುವಂತಾಯಿತು. ಅಷ್ಟೇ ಅಲ್ಲದೆ, ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ RCB ಯ ಸಂಪೂರ್ಣ ಮಾಲೀಕತ್ವವನ್ನು ಪಡೆದುಕೊಂಡಿತು. ಈಗ ಆರ್‌ಸಿಬಿ ಡಯಾಜಿಯೊ PLC ಅಡಿಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಒಡೆತನದಲ್ಲಿದೆ.