ಡ್ರ್ಯಾಗನ್‌ ಸುಂದರಿ ರುಕ್ಮಿಣಿ ವಂಸತ್‌ ಹುಡುಕಿಕೊಂಡ ಬಂದ ಬಿಗ್‌ ಪ್ರಾಜೆಕ್ಟ್.. Toxic ಬ್ಯೂಟಿ ಅಭಿನಯ ಮಾಡಲಿರೋ ಸಿನಿಮಾ? ‌

ಸ್ಯಾಂಡಲ್‌ವುಡ್‌ನ ರುಕ್ಮಿಣಿ ವಸಂತ್‌ (Rukmini Vasanth) ಅವರು ಸದ್ಯ ಅತ್ಯಂತ ಬೇಡಿಕೆಯ ನಟಿಯಾಗಿದ್ದು ಶೂಟಿಂಗ್‌ಗಳಲ್ಲಿ ಫುಲ್‌ ಬ್ಯುಸಿ ಆಗಿದ್ದಾರೆ. ಇದರ ಬೆನ್ನಲ್ಲೇ ಟಾಲಿವುಡ್‌ನ ಮತ್ತೊಂದು ಬಿಗ್‌ ಪ್ರಾಜೆಕ್ಟ್‌ ಮೂವಿಯಲ್ಲಿ ರುಕ್ಮಿಣಿ ವಸಂತ್‌ ಅಭಿನಯ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗಾದ್ರೆ ಆ ಹೀರೋ ಯಾರು, ಯಾವ ಸಿನಿಮಾ ಎನ್ನುವ ಮಾಹಿತಿ ಇಲ್ಲಿದೆ. 

Rukmini Vasanth Next Movie: ಸ್ಯಾಂಡಲ್‌ವುಡ್‌ನ ರುಕ್ಮಿಣಿ ವಸಂತ್‌ (Rukmini Vasanth) ಅವರು ಸದ್ಯ ಅತ್ಯಂತ ಬೇಡಿಕೆಯ ನಟಿಯಾಗಿದ್ದು ಶೂಟಿಂಗ್‌ಗಳಲ್ಲಿ ಫುಲ್‌ ಬ್ಯುಸಿ ಆಗಿದ್ದಾರೆ. ಇದರ ಬೆನ್ನಲ್ಲೇ ಟಾಲಿವುಡ್‌ನ ಮತ್ತೊಂದು ಬಿಗ್‌ ಪ್ರಾಜೆಕ್ಟ್‌ ಮೂವಿಯಲ್ಲಿ ರುಕ್ಮಿಣಿ ವಸಂತ್‌ ಅಭಿನಯ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಾಗಾದ್ರೆ ಆ ಹೀರೋ ಯಾರು, ಯಾವ ಸಿನಿಮಾ ಎನ್ನುವ ಮಾಹಿತಿ ಇಲ್ಲಿದೆ. 

1 /6

ಕಾಂತಾರ ಭಾಗ- 1 ಮೂವಿ ಮೂಲಕ ಪ್ಯಾನ್‌ ಇಂಡಿಯಾ ಮನ್ನಣೆ ಪಡೆದಿರೋ ರುಕ್ಮಿಣಿ ವಸಂತ್‌ ಅವರನ್ನು ಹುಡುಕಿಕೊಂಡು ಸಿನಿಮಾಗಳು ಬರುತ್ತಿವೆ. ಈಗಾಗಲೇ ದಕ್ಷಿಣ ಭಾರತದ ಸ್ಟಾರ್‌ ಹೀರೋಗಳ ಜೊತೆಗೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ.   

2 /6

ಪ್ರಶಾಂತ್‌ ನೀಲ್‌ ನಿರ್ದೇಶನದ, ಜೂನಿಯರ್‌ ಎನ್‌ಟಿಆರ್‌ ಮುಖ್ಯಭೂಮಿಕೆಯಲ್ಲಿ ಅಭಿನಯ ಮಾಡುತ್ತಿರುವ ಡ್ರ್ಯಾಗನ್‌ ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ ಅವರು ಕೆಲಸ ಮಾಡುತ್ತಿದ್ದಾರೆ. ಇದು ಕೂಡ ಪ್ಯಾನ್‌ ಇಂಡಿಯಾ ಮೂವಿಯಾಗಿದ್ದು ಪ್ರಶಾಂತ್‌ ನೀಲ್‌ ನಿರ್ದೇಶನದ ಮತ್ತೊಂದು ಬಿಗ್‌ ಹಿಟ್‌ ಪಕ್ಕಾ.   

3 /6

ಗೀತು ಮೋಹನ್‌ ದಾಸ್‌ ಡೈರೆಕ್ಷನ್‌ನಲ್ಲಿ ರಾಕಿಂಗ್‌ ಸ್ಟಾರ್ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ ಮೆಲಿಸ್ಸಾ ಎನ್ನುವ ಅಮೋಘವಾದ ಪಾತ್ರ ನಿರ್ವಹಿಸಿದ್ದಾರೆ. ಸದ್ಯ ಟಾಕ್ಸಿಕ್‌ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಜೂನ್‌ ತಿಂಗಳಿಗೆ ಮುಂದೂಡಿಕೆ ಮಾಡಲಾಗಿದೆ.   

4 /6

ಸ್ಯಾಂಡಲ್‌ವುಡ್‌, ಟಾಲಿವುಡ್‌ ಮಾತ್ರವಲ್ಲ ಕಾಲಿವುಡ್‌ನಲ್ಲೂ ರುಕ್ಮಿಣಿ ವಸಂತ್‌ ಅಭಿನಯ ಮಾಡುತ್ತಿದ್ದಾರೆ. ತಮಿಳು ನಟ ಶಿವಕಾರ್ತಿಕೇಯ ಅಭಿನಯದ ಮಧರಾಸಿ (Madharaasi) ಮೂವಿಯಲ್ಲಿ ಲೀಡ್‌ ರೋಲ್‌ನಲ್ಲಿ ಕನ್ನಡತಿ ರುಕ್ಮಿಣಿ ಹೆಜ್ಜೆ ಹಾಕುತ್ತಿದ್ದಾರೆ. ಇದು ಆಕ್ಷನ್‌, ಥ್ರಿಲ್ಲಿಂಗ್‌ ಸಿನಿಮಾವಾಗಿದೆ.       

5 /6

ಇವಷ್ಟೇ ಅಲ್ಲ, ಇನ್ನು ಕೆಲವು ಸಿನಿಮಾಗಳು ರುಕ್ಮಿಣಿ ವಸಂತ್‌ ಬಳಿ ಇವೆ. ಆದರೂ ಮತ್ತೊಂದು ಸಿನಿಮಾಕ್ಕಾಗಿ ರುಕ್ಮಿಣಿ ವಂಸತ್‌ ಹೆಸರು ಕೇಳಿ ಬರುತ್ತಿದೆ. ಟಾಲಿವುಡ್‌ನ ಸ್ಟಾರ್‌ ಶರ್ವಾನಂದ್‌ ಅವರ ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.            

6 /6

ತೆಲುಗಿನಲ್ಲಿ ನಾರಿ ನಾರಿ ನಾಡು ಮುರಾರಿ ಸಿನಿಮಾದ ಯಶಸ್ಸಿನ ಬಳಿಕ ಶರ್ವಾನಂದ್‌ ಅವರು ಮುಂದಿನ ಪ್ರಾಜೆಕ್ಟ್‌ ಅನ್ನು ನಿರ್ದೇಶಕ ಶ್ರೀನು ವೈಟ್ಲ ಅವರೊಂದಿಗೆ ಮಾಡಲಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗಲಿದೆಯಂತೆ.