ಗಂಡನಿಗೆ ಶ್ರೀಮಂತಿಕೆ... ಅತ್ತೆಗೆ ಅಂತಸ್ತು ತಂದುಕೊಡುತ್ತಾರೆ ಈ ರಾಶಿಯಲ್ಲಿ ಜನಿಸಿದ ಹೆಣ್ಣುಮಕ್ಕಳು! ಇವರು ಹುಟ್ಟಿದ ಮತ್ತು ಮೆಟ್ಟಿದ ಎರಡೂ ಮನೆಗೆ ಸಾಕ್ಷಾತ್‌ ಲಕ್ಷ್ಮೀ ಸ್ವರೂಪ

Sat, 21 Dec 2024-3:26 pm,

ವ್ಯಕ್ತಿಯ ರಾಶಿ ಚಿಹ್ನೆಯನ್ನು ನೋಡುವ ಮೂಲಕ ಪ್ರತಿಯೊಂದನ್ನು ತಿಳಿಯಬಹುದು. ಇದರಲ್ಲಿ ಮುಖ್ಯವಾಗಿ ಗುಣವೂ ಸೇರಿದೆ. ಯಾವುದೇ ಪುರುಷನು ತಾನು ವಿವಾಹವಾಗುವ ಹುಡುಗಿ ಸುಂದರವಾಗಿರಬೇಕೆಂದು ಆಶಿಸುತ್ತಾನೆ. ಅದಕ್ಕೂ ಮಿಕ್ಕಿ ಉತ್ತಮ ಗುಣನಡತೆ ಹೊಂದಿದವಳಾಗಿರಬೇಕೆಂದು ಇಚ್ಛಿಸುತ್ತಾನೆ.

ಹೀಗಿರುವಾಗ ಒಂದಷ್ಟು ರಾಶಿಗಳ ಹೆಣ್ಣುಮಕ್ಕಳು ಗಂಡನ ಪಾಲಿಗೆ ಅದೃಷ್ಟದೇವತೆಗಳಾಗಿರುತ್ತಾರೆ. ಅಂತಹ ರಾಶಿಯ ಹೆಣ್ಣು ಮಕ್ಕಳು ಗಂಡನಿಗೆ ಉತ್ತಮ ಜೀವನ ಸಂಗಾತಿಯಾಗುವುದು ಮಾತ್ರವಲ್ಲದೆ, ಮನೆಯಲ್ಲಿ ಅವರ ಉಪಸ್ಥಿತಿಯು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಮನೆಗೆ ಕಾಲಿಡುತ್ತಿದ್ದಂತೆ ಗಂಡನಿಗೆ ಶ್ರೀಮಂತಿಕೆಯನ್ನೇ ತರುತ್ತಾರೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

 

ವೃಷಭ ರಾಶಿ: ಈ ರಾಶಿಯ ಹುಡುಗಿಯರು ತುಂಬಾ ಜವಾಬ್ದಾರಿಯುತರು. ಹಣಕಾಸಿನ ವಿಷಯಗಳ ಬಗ್ಗೆ ಬಹಳ ಜ್ಞಾನವನ್ನು ಹೊಂದಿರುತ್ತಾರೆ. ಹಣವನ್ನು ನಿಭಾಯಿಸುವ ಕಲೆಯಲ್ಲಿ ಬಹಳ ಪ್ರವೀಣರು. ಇವರಿದ್ದ ಮನೆ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರುತ್ತದೆ.

ಕಟಕ ರಾಶಿ: ಈ ರಾಶಿಯ ಹುಡುಗಿಯರನ್ನು ತುಂಬಾ ಕಾಳಜಿಯುಳ್ಳವರು ಎಂದು ಪರಿಗಣಿಸಲಾಗುತ್ತದೆ. ತನ್ನ ಗಂಡನನ್ನು ಸರ್ವಸ್ವವೆಂದೇ ಪ್ರೀತಿಸುತ್ತಾರೆ ಇವರು. ಇನ್ನು ಸಂಗಾತಿ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ಚೆನ್ನಾಗಿ ತಿಳಿದಿರುತ್ತಾರೆ. ಈ ರಾಶಿಯ ಹೆಣ್ಣಿನಿಂದಾಗಿ ಗಂಡ ಅಪಾರ ಸಂಪತ್ತಿನ ಒಡೆಯನಾಗುತ್ತಾನೆ.

 

ಸಿಂಹ ರಾಶಿ: ಈ ರಾಶಿಯ ಹುಡುಗಿಯರು ಹೆಚ್ಚಿನ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ತನ್ನ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವರಾಗಿರುತ್ತಾರೆ. ಈ ಅಭ್ಯಾಸದಿಂದಾಗಿ ಅತ್ತೆಯ ಮನೆಯಲ್ಲಿ ಎಲ್ಲರಿಗೂ ಪ್ರಿಯವಾಗುತ್ತಾರೆ. ಅವರಿಗೆ ನಾಯಕತ್ವದ ಸಾಮರ್ಥ್ಯವಿದ್ದು, ತನ್ನ ಗಂಡನ ಪ್ರತಿಯೊಂದು ಆಸೆಯನ್ನು ಪೂರೈಸಲು ಸಹಾಯ ಮಾಡುತ್ತಾಳೆ.

 

ಕುಂಭ ರಾಶಿ: ಈ ರಾಶಿಯ ಹುಡುಗಿಯರು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಇತರರಿಗಿಂತ ಭಿನ್ನವಾಗಿ ಏನನ್ನಾದರೂ ಮಾಡಬೇಕೆಂಬ ಬಯಕೆ ಅವರ ಹೃದಯದಲ್ಲಿ ಯಾವಾಗಲೂ ಇರುತ್ತದೆ. ಅದರಲ್ಲಿ ಯಶಸ್ಸನ್ನೂ ಸಾಧಿಸುತ್ತಾರೆ. ಇನ್ನು ಇವರಿಗೆ ಇತರರಿಗೆ ಸಹಾಯ ಮಾಡಬೇಕೆಂಬ ಹಂಬಲವಿರುತ್ತದೆ. ತನ್ನ ಸಂಗಾತಿಯನ್ನು ತುಂಬಾ ಪ್ರೀತಿಸುವ ಈ ರಾಶಿಯ ಯುವತಿಯರು, ಪ್ರತಿ ಸಮಯದಲ್ಲೂ ಬೆಂಬಲವಾಗಿರುತ್ತಾರೆ.

 

ಮೀನ ರಾಶಿ: ಈ ರಾಶಿಯ ಹುಡುಗಿಯರು ರೋಮ್ಯಾಂಟಿಕ್ ಆಗಿರುತ್ತಾರೆ. ಜೊತೆಗೆ ಕೊಂಚ ಎಮೋಷನಲ್‌ ವ್ಯಕ್ತಿತ್ವದವರು. ತನ್ನ ಕನಸಿನಂತೆ ಚೆನ್ನಾಗಿ ಬದುಕುವವರಾಗಿರುತ್ತಾರೆ. ಈ ರಾಶಿಯ ಹುಡುಗಿ ಯಾವಾಗಲೂ ತನ್ನ ಸಂಗಾತಿಯನ್ನು ಬೆಂಬಲಿಸುತ್ತಾಳೆ. ಹಣದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಅವರ ಆಲೋಚನೆಗಳು ಅನನ್ಯವಾಗಿರುತ್ತವೆ.

 

ಸೂಚನೆ: ಈ ಸುದ್ದಿಯಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯದ ನಿಯಮಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link