women should not wash their head on this day: ದೇಹವನ್ನು ಸ್ವಚ್ಛವಾಗಿಡಲು, ನಿರ್ದಿಷ್ಟ ಸಮಯದಲ್ಲಿ ಕೂದಲನ್ನು ತೊಳೆಯುವುದು ಅವಶ್ಯಕ. ಹಿಂದೂ ಧರ್ಮದಲ್ಲಿ ಕೂದಲಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಮತ್ತು ನಿಬಂಧನೆಗಳಿವೆ. ವಿಶೇಷವಾಗಿ ಮಹಿಳೆಯರು ಯಾವಾಗ ಕೂದಲು ತೊಳೆಯಬೇಕು?, ಯಾವಾಗ ತೊಳೆಯಬಾರದು? ಎಂಬುದನ್ನೆಲ್ಲಾ ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ.
1/8ದೇಹವನ್ನು ಸ್ವಚ್ಛವಾಗಿಡಲು, ನಿರ್ದಿಷ್ಟ ಸಮಯದಲ್ಲಿ ಕೂದಲನ್ನು ತೊಳೆಯುವುದು ಅವಶ್ಯಕ. ಹಿಂದೂ ಧರ್ಮದಲ್ಲಿ ಕೂದಲಿಗೆ ಸಂಬಂಧಿಸಿದಂತೆ ಹಲವು ನಿಯಮಗಳು ಮತ್ತು ನಿಬಂಧನೆಗಳಿವೆ. ವಿಶೇಷವಾಗಿ ಮಹಿಳೆಯರು ಯಾವಾಗ ಕೂದಲು ತೊಳೆಯಬೇಕು?, ಯಾವಾಗ ತೊಳೆಯಬಾರದು? ಎಂಬುದನ್ನೆಲ್ಲಾ ಧರ್ಮಗ್ರಂಥಗಳಲ್ಲಿ ವಿವರಿಸಲಾಗಿದೆ.
2/8ಮಹಿಳೆಯರು ಯಾವ ದಿನಗಳಲ್ಲಿ ಕೂದಲು ತೊಳೆಯಬಾರದು ಎಂಬುದನ್ನು ಈ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ. ವಿಶೇಷವಾಗಿ ಮಹಿಳೆ ವಿವಾಹಿತಳಾಗಿದ್ದರೆ ಕೆಲವೊಂದು ದಿನ ಕೂದಲು ತೊಳೆದರೆ ಅದು ಅಪಾಯಕ್ಕೆ ಕಾರಣವಾಗಬಹುದು.
3/8ಪಂಡಿತ್ ಮನೀಶ್ ಶರ್ಮಾ ಅವರ ಪ್ರಕಾರ, "ಕೂದಲು ಬುಧ ಗ್ರಹಕ್ಕೆ ಸಂಬಂಧಿಸಿದೆ. ಬುಧವು ಆರೋಗ್ಯಕ್ಕೂ ಸಂಬಂಧಿಸಿದೆ. ಆದ್ದರಿಂದ, ಯಾವುದೇ ವಿವಾಹಿತ ಮಹಿಳೆ ಬುಧವಾರ ತನ್ನ ಕೂದಲನ್ನು ತೊಳೆಯಬಾರದು. ಬುಧವಾರ ಕೂದಲು ತೊಳೆದರೆ, ಕೂದಲು ಒಡೆಯುವಿಕೆ ಅಥವಾ ಉದುರುವಿಕೆಯಿಂದಾಗಿ ಬುಧ ಗ್ರಹದ ಬಲವು ದುರ್ಬಲಗೊಳ್ಳುತ್ತದೆ".
4/8ಬುಧ ಗ್ರಹವು ಕಿರಿಯ ಸಹೋದರ ಸಹೋದರಿಯರೊಂದಿಗೆ ಸಂಬಂಧ ಹೊಂದಿರುವುದು ಕಂಡುಬರುತ್ತದೆ. ಪ್ರತಿಯೊಬ್ಬರಿಗೂ ಸಹೋದರ ಸಹೋದರಿಯರ ಮೇಲೆ ಪ್ರೀತಿ ಇದ್ದೇ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬುಧವಾರ ತಲೆ ಸ್ನಾನ ಮಾಡಿದರೆ, ಸಹೋದರ ಸಹೋದರಿಯರಿಗೆ ಅಪಾಯವಾಗುತ್ತದೆ. ಇದರಿಂದಾಗಿ ಅವರ ಆರೋಗ್ಯ ಹದಗೆಡುತ್ತದೆ ಮತ್ತು ಆರ್ಥಿಕ ನಷ್ಟವನ್ನೂ ಅನುಭವಿಸುತ್ತಾರೆ.
5/8ಬುಧವಾರದ ದಿನ ಕೂದಲು ತೊಳೆದರೆ ಅದು ಲಕ್ಷ್ಮೀ ದೇವಿ ಕೋಪಕ್ಕೆ ಕಾರಣವಾಗಬಹುದು. ಹೀಗೆ ಮಾಡುವುದರಿಂದ, ಆರ್ಥಿಕ ಬಿಕ್ಕಟ್ಟು ಮೇಲುಗೈ ಸಾಧಿಸುತ್ತದೆ ಎಂದು ಹೇಳಲಾಗುತ್ತದೆ.
6/8ಬುಧವು ಕೂದಲು, ಉಗುರುಗಳು, ಹಲ್ಲುಗಳು ಇತ್ಯಾದಿಗಳಿಗೆ ಸಂಬಂಧಿಸಿದೆ. ನಿಮ್ಮ ಗ್ರಹ ಬುಧ ದುರ್ಬಲವಾಗಿದ್ದರೆ, ಕೂದಲು, ಉಗುರುಗಳು ಮತ್ತು ಹಲ್ಲುಗಳು ದುರ್ಬಲಗೊಳ್ಳುವಂತಹ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಆದ್ದರಿಂದ ಬುಧವಾರ ಕೂದಲನ್ನು ತೊಳೆಯಬಾರದು.
7/8ಬುಧ ಗ್ರಹವು ವಿವೇಚನೆಗೂ ಸಂಬಂಧಿಸಿದೆ. ಬುಧವಾರದಂದು ಕೂದಲು ತೊಳೆದರೆ, ವಿವೇಚನೆ ಕಳೆದುಕೊಳ್ಳಬಹುದು ಮತ್ತು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ತೊಂದರೆಗೆ ಸಿಲುಕಬಹುದು. ಇಷ್ಟೇ ಅಲ್ಲ, ಬುಧ ದುರ್ಬಲನಾಗಿದ್ದರೆ ನಿಮ್ಮ ಮಾತು ಕೂಡ ಕೆಟ್ಟದಾಗಿರುತ್ತದೆ, ಮನೆಯಲ್ಲಿ ತೊಂದರೆಗಳು ಉಂಟಾಗುತ್ತವೆ. ಜೊತೆಗೆ ಗಂಡ ಮತ್ತು ಹೆಂಡತಿಯ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ. ಅಷ್ಟೆ ಅಲ್ಲದೆ ಸಂಗಾತಿಗೆ ಅಪಾಯವಿರುತ್ತದೆ ಎಂದು ಹೇಳಲಾಗುತ್ತದೆ
8/8ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ಈ ಮಾಹಿತಿಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ.