Yuti Drishti Yoga: ಧಾರ್ಮಿಕ ನಂಬಿಕೆಗಳ ಪ್ರಕಾರ, ದೀಪಾವಳಿಯನ್ನು ಬೆಳಕಿನ ಹಬ್ಬ ಎನ್ನಲಾಗುತ್ತದೆ. 2025ರ ದೀಪಾವಳಿ ದಿನವೇ ವಿಶೇಷ ಯುತಿ ದೃಷ್ಟಿ ಯೋಗ ರಚನೆಯಾಗಲಿದ್ದು ಕೆಲವರ ಜೀವನ ಸೂರ್ಯನಂತೆ ಕಂಗೊಳಿಸಲಿದೆ. ಆ ಅದೃಷ್ಟದ ರಾಶಿಗಳ ಬಗ್ಗೆ ತಿಳಿಯೋಣ...
ಈ ವರ್ಷ ಅಕ್ಟೋಬರ್ 20, 2025ರಂದು ದೀಪಗಳ ಹಬ್ಬ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ದೀಪಾವಳಿಯ ದಿನವೇ ಗ್ರಹಗಳ ರಾಜಕುಮಾರ ವೃತ್ತಿ-ವ್ಯವಹಾರದ ಅಂಶನಾದ ಬುಧ ಹಾಗೂ ಗ್ರಹಗಳ ಕಮಾಂಡರ್ ಮಂಗಳನಿಂದ ವಿಶೇಷ ಯುತಿ ದೃಷ್ಟಿಯೋಗ ರೂಪುಗೊಳ್ಳುತ್ತಿದೆ.
ದೀಪಾವಳಿ ದಿನವೇ ಬುಧ ಮಂಗಳರಿಂದ ರಚನೆಯಾಗುತ್ತಿರುವ ಯುತಿ ದೃಷ್ಟಿ ಯೋಗದ ಪ್ರಭಾವದಿಂದಾಗಿ ಕೆಲವು ರಾಶಿಯವರ ಲಕ್ ರಾತ್ರೋ ರಾತ್ರಿ ಬದಲಾಗಲಿದೆ. ಅವರ ಬದುಕಿನಲ್ಲಿ ಸೋಲೆಂಬುದೇ ಇರುವುದಿಲ್ಲ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಯುತಿ ದೃಷ್ಟಿ ಯೋಗವು ಈ ರಾಶಿಯವರ ಜೀವನದಲ್ಲಿ ಕಷ್ಟಗಳ ಸರಮಾಲೆಯಿಂದ ಪರಿಹಾರ ನೀಡಿ, ಉದ್ಯೋಗ ರಂಗದಲ್ಲಿ ಪ್ರಗತಿಯನ್ನು ನೀಡಲಿದೆ. ವ್ಯವಹಾರ ವಿಸ್ತರಣೆ ಸಂಬಂಧಿಸಿದ ನಿಮ್ಮ ಯೋಜನೆಗಳಿಗೆ ರೆಕ್ಕೆ ದೊರೆಯಲಿದೆ. ಪೂರ್ವಿಕರ ಆಸ್ತಿ ವ್ಯವಹಾರದಲ್ಲಿ ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಿ ಬಗೆಹರಿಯಲಿವೆ.
ಬುಧ-ಮಂಗಳ ಸಂಯೋಗದಿಂದ ರಚನೆಯಾಗಲಿರುವ ಯುತಿ ದೃಷ್ಟಿ ಯೋಗವು ಈ ರಾಶಿಯವರ ಬದುಕಿನಲ್ಲಿ ಹಠಾತ್ ಧನಲಾಭವನ್ನು ನೀಡಲಿದೆ. ದೀಪಾವಳಿಯಿಂದ ಈ ರಾಶಿಯವರ ಬದುಕಿನಲ್ಲಿ ಅದೃಷ್ಟ ಖುಲಾಯಿಸಲಿದ್ದು, ಭೂಮಿ, ಮನೆ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ಸಕಾಲವಾಗಿದೆ.
ಯುತಿ ದೃಷ್ಟಿ ಯೋಗವು ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ನೀಡಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸಂಭವವಿದೆ. ದಂಪತಿಗಳಿಗೆ ಮಕ್ಕಳಿಂದ ಶುಭ ಸುದ್ದಿ ನಿರೀಕ್ಷೆಯಿದೆ. ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಲಾಭವಾಗಲಿದ್ದು ಹಣಕಾಸಿನ ಸ್ಥಿತಿ ಉತ್ತಮಗೊಳ್ಳುತ್ತದೆ.
ದೀಪಾವಳಿ ದಿನ ರಚನೆಯಾಗುತ್ತಿರುವ ಯುತಿ ದೃಷ್ಟಿ ಯೋಗವು ಈ ರಾಶಿಯವರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಅದರಲ್ಲೂ ವಿದೇಶ ವ್ಯವಹಾರದೊಂದಿಗೆ ಸಂಬಂಧ ಹೊಂದಿರುವವರಿಗೆ ಇದು ಅತ್ಯುತ್ತಮ ಸಮಯ. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣುವಿರಿ. ಸ್ವಂತ ಮನೆ ಖರೀದಿಸುವ ಕನಸು ನನಸಾಗುವ ಪರ್ವಕಾಲ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.