)
ಶಿವಮೊಗ್ಗ: ಅವರಿಬ್ರು ಒಳ್ಳೆ ಆತ್ಮೀಯ ಸ್ನೇಹಿತ್ರು. ಅವರಿಬ್ಬರಲ್ಲಿ ಅನ್ಯೋನ್ಯತೆ ಇತ್ತು. ಅವರಿಬ್ರು ಲಾರಿ ಡ್ರೈವರ್ ಕೂಡ ಆಗಿದ್ರು. ಆದ್ರೆ ಇವರಿಬ್ರ ಮಧ್ಯೆ ಬಂದಿದ್ದು, ಆ ಲೇಡಿ. ತನ್ನ ಸ್ನೇಹಿತ ಡೈವರ್ಸ್ ನೀಡಿದ್ದ ಮಹಿಳೆಗೆ ಈತ ಮದ್ವೆಯಾಗಿದ್ದ. ಇದೇ ಈಗ ಈತನಿಗೆ ಮುಳುವಾಗಿದೆ. ತನ್ನಿಂದ ದೂರವಾದ ಪತ್ನಿ ಮೇಲೆ ಕಣ್ಣು ಹಾಕಿದ್ದಲ್ಲದೇ, ಈತ ಮದ್ವೆ ಕೂಡ ಆಗಿದ್ದು, ಇದೇ ಕಾರಣ ಈತ ರಕ್ತದ ಮಡುವಿನಲ್ಲಿ ಬೀಳುವಂತಾಗಿದೆ.
ಹೀಗೆ ಪೆಟ್ರೋಲ್ ಬಂಕ್ ಮುಂದೆ ರಕ್ತ ಚೆಲ್ಲಿರುವ ದೃಶ್ಯ ನೋಡಿದ್ರೆ, ಇಲ್ಲೇನೋ ಅನಾಹುತ ನಡೆದಿದೆ ಎಂಬ ಅನುಮಾನ ಕಾಡೋದು ಸಹಜ.ಎಸ್.......ಮಲೆನಾಡು ಜಿಲ್ಲೆ ಶಿವಮೊಗ್ಗ ನಗರದ ಹೊರವಲಯದ ಮಲವಗೊಪ್ಪದಲ್ಲೀ, ಇಂತಹದ್ದೊಂದು ದುರ್ಘಟನೆ ನಡೆದು ಹೋಗಿದ್ದು, ತಾನು ಡೈವರ್ಸ್ ನೀಡಿದ್ದ ಪತ್ನಿಗೆ, ತನ್ನ ಸ್ನೇಹಿತನೇ ಮದುವೆಯಾದ ಎಂದು ಗರಂ ಆದ ಈ ವ್ಯಕ್ತಿ, ತನ್ನ ಸ್ನೇಹಿತನ ಜೊತೆ ಸೇರಿ, ಹಿಗ್ಗಾಮುಗ್ಗಾ ಆ್ಯಕ್ಸೆಲ್ ಬ್ಲೇಡ್ ನಿಂದ ಇರಿದು ಹಲ್ಲೆ ಮಾಡಿದ್ದಾನೆ.ವಿಕ್ರಂ ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಈತ, ಕಳೆದೆರೆಡುವರೆ ತಿಂಗಳ ಹಿಂದೆಯಷ್ಟೆ, ತನ್ನ ಪತ್ನಿ ಛಾಯಾಗೆ ಡೈವರ್ಸ್ ಕೊಟ್ಟಿದ್ದನಂತೆ. ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ತನ್ನ ಪತ್ನಿಯಿಂದ ಡೈವರ್ಸ್ ಪಡೆದಿದ್ದನಂತೆ.ಇತ್ತ ವಿಕ್ರಂನಿಂದ ಡೈವರ್ಸ್ ಪಡೆದ ಪತ್ನಿ ಛಾಯಾ, ವಿಕ್ರಂ ನ ಸ್ನೇಹಿತ ಲಾರಿ ಡ್ರೈವರ್ ಆಗಿದ್ದ ವಿನೋದ್ ಜೊತೆ ಮದುವೆ ಕೂಡ ಆಗಿದ್ಲಂತೆ. ಇದೇ ವಿಚಾರ ಮನಸ್ಸಿಲ್ಲಿಟ್ಟುಕೊಂಡು ಜಿದ್ದು ಸಾಧಿಸುತ್ತಿದ್ದ, ವಿಕ್ರಂ ಮಲವಗೊಪ್ಪದ ಪೆಟ್ರೋಲ್ ಬಂಕ್ ಬಳಿ ಮಾತನಾಡುವ ನೆಪದಲ್ಲಿ ನಿನ್ನೆ ರಾತ್ರಿ ವಿನೋದ್ ಗೆ ಬರಲು ಹೇಳಿ, ಅ್ಯಕ್ಸೆಲ್ ಬ್ಲೇಡ್ ನಿಂದ ಸ್ನೇಹಿತ ವಿನೋದ್ ಮೇಲೆ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾನೆ. ವಿಕ್ರಂ ಹಾಗೂ ಸ್ನೇಹಿತ ಸೇರಿ, ವಿನೋದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆ್ಯಕ್ಸೆಲ್ ಬ್ಲೇಡ್ ನಿಂದ ಬೆನ್ನು, ಕೈ, ಮುಖದ ತುಂಬಾ ಬ್ಲೇಡ್ ನಿಂದ ಹಲ್ಲೆ ಮಾಡಿದ್ದು, ಗಾಯಗೊಂಡ ವಿನೋದ್ ನನ್ನು ಬಳಿಕ ನೋಡಿದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಂದಹಾಗೆ, ಕಳೆದೆರೆಡು ತಿಂಗಳ ಹಿಂದೆಯಷ್ಟೇ ತನ್ನ ಪತ್ನಿ ಛಾಯಾ ಗೆ ಡೈವರ್ಸ್ ನೀಡಿದ್ದ ವಿಕ್ರಂ, ವಿನೋದ್ ವಿರುದ್ಧ ದ್ವೇಷ ಸಾಧಿಸಿಕೊಂಡೇ ಬಂದಿದ್ದ ಎನ್ನಲಾಗಿದೆ. ಬಳಿಕ ಡೈವರ್ಸ್ ಪಡೆದ ಛಾಯಾ ಜೊತೆ ಮದುವೆಯಾಗಿದ್ದಕ್ಕೆ ಆಕ್ರೋಶಗೊಂಡಿದ್ದ ವಿಕ್ರಂ, ವಿನೋದ್ ಕತೆ ಮುಗಿಸಲು ಸ್ಕೆಚ್ ಹಾಕಿದ್ದಾನೆ. ಅದರಂತೆ, ನಿನ್ನೆ ರಾತ್ರಿ, ಪ್ಲ್ಯಾನ್ ಪ್ರಕಾರ, ವಿನೋದ್ ಜೊತೆ ಇದ್ದ ತನ್ನ ಮಗನಿಗೆ ಫೋನಾಯಿಸಿ, ಪೆಟ್ರೋಲ್ ಬಂಕ್ ಬಳಿ ಬಂದ ವಿಷಯ ತಿಳಿದು ಬಂದು ಮಾರಣಾಂತಿಕ ದಾಳಿ ನಡೆಸಿದ್ದಾನೆ. ಇತ್ತ ಹಲ್ಲೆಗೊಳಗಾದ ಬೆಂಗಳೂರಿನಲ್ಲಿ ನೆಲೆಸಿರುವ ವಿನೋದ್ ಪೋಷಕರು, ರಾತ್ರೋರಾತ್ರಿ ಶಿವಮೊಗ್ಗದ ಆಸ್ಪತ್ರೆಗೆ ಧಾವಿಸಿದ್ದಾರೆ. ಮಗನ ಸ್ಥಿತಿ ಕಂಡು ಮಮ್ಮಲ ಮರುಗಿದ್ದಾರೆ. ನಮ್ಮ ಮಗ ಮದುವೆನೇ ಆಗಿಲ್ಲ. ಆದ್ರೆ, ಈ ರೀತಿ ವಿಕ್ರಂನಿಂದ ವಿಚ್ಛೇದಿತ ಪತ್ನಿ ಛಾಯಾ ಜೊತೆ ಮದುವೆಯಾದ ವಿಚಾರ ನಮಗೆ ಇಲ್ಲಿಗೆ ಬಂದ ಬಳಿಕವಷ್ಟೇ ಗೊತ್ತು ಅಂತಾ ಘಟನೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ ವಿನೋದ್ ಪೋಷಕರು.
ಒಟ್ಟಾರೆ, ವಿಚ್ಛೇದನ ನೀಡಿದ ಬಳಿಕ ತನ್ನ ಪತ್ನಿ ಯಾರ ಜೊತೆ ಹೋದರೇನು ಎಂದು ಸುಮ್ಮನಿರದ ವಿಕ್ರಂ ಪರಿಸ್ಥಿತಿ ತಾನೇ ಇರುವೆ ಬಿಟ್ಡುಕೊಂಡಂತಾಗಿದೆ. ತನ್ನ ಸ್ನೇಹಿತನೇ ತನಗೆ ಈ ರೀತಿ ಅನ್ಯಾಯ ಮಾಡಿ ಬಿಟ್ನಲ್ಲ ಅಂತಾ ಸಿಟ್ಟು ತಲೆಗೇರಿಸಿಕೊಂಡಿದ್ದ ಅನ್ಸುತ್ತೆ. ಏನೇಯಾಗ್ಲೀ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇತ್ತ ಸ್ನೇಹಿತನ ಮೇಲೆ ಹಲ್ಲೆ ಮಾಡಿದ ವಿನೋದ್ ಪರಿಸ್ಥಿತಿ ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿದೆ.