)
Putrada Ekadashi 2025: ಪುತ್ರದಾ ಏಕಾದಶಿಯ ಬಗ್ಗೆ ಹಲವು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಪುತ್ರದಾ ಏಕಾದಶಿಯ ಉಪವಾಸದಿಂದ ಸಂತಾನ ಪಾಪ್ತಿಯಾಗುತ್ತದೆ ಎಂಬುದು ಬಲವಾದ ನಂಬಿಕೆ. ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖವಾಗಿರುವ ಮಾಹಿತಿಗಳ ಪ್ರಕಾರ ಪುತ್ರದಾ ಏಕಾದಶಿ ಪೌಷ ಮಾಸದ ಶುಕ್ಲ ಪಕ್ಷದಂದು ಬರುತ್ತದೆ. ಈ ವರ್ಷ ಪುತ್ರದಾ ಏಕಾದಶಿ ಯಾವಾಗ? 2025ರ ಕಡೆಯ ಪುತ್ರದಾ ಏಕಾದಶಿ ಆಚರಣೆಯ ಪ್ರಯೋಜನವೇನು ಎಂಬ ಮಾಹಿತಿ ಇಲ್ಲಿದೆ.
ಈ ಬಾರಿಯ ಪುತ್ರದಾ ಏಕಾದಶಿ ಯಾವಾಗ?
ಈ ಬಾರಿಯ ಪುತ್ರದಾ ಏಕಾದಶಿ ಡಿಸೆಂಬರ್ 30 ಅಥವಾ 31 ಎನ್ನುವ ಗೊಂದಲಗಳು ಹುಟ್ಟಿಕೊಂಡಿದ್ದವು. ಪಂಚಾಂಗದ ಪ್ರಕಾರ, ಪೌಷ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯು ಡಿಸೆಂಬರ್ 30ರ (ಇಂದು) ಮಂಗಳವಾರ ಬೆಳಿಗ್ಗೆ 7.51ಕ್ಕೆ ಪ್ರಾರಂಭವಾಗಿ ಡಿಸೆಂಬರ್ 31ರ (ನಾಳೆ) ಬುಧವಾರ ಬೆಳಿಗ್ಗೆ 5 ಗಂಟೆಯವರೆಗೆ ಇರಲಿದೆ. ಈ ಸಂದರ್ಭದಲ್ಲಿ ಪುತ್ರದಾ ಏಕಾದಶಿಯನ್ನು ಮಾಡಬಹುದು, ಪುತ್ರದಾ ಏಕಾದಶಿಗೆ ಸಂಬಂಧಿಸಿದ ವ್ರತಗಳನ್ನು ಮಾಡಬಹುದು ಮತ್ತು ಉಪವಾಸವನ್ನು ಕೈಗೊಳ್ಳಬಹುದು.
ಪುತ್ರದಾ ಏಕಾದಶಿಯ ಉಪವಾಸ ಯಾವಾಗ?
ವೈದಿಕ ಪಂಚಾಂಗದ ಪ್ರಕಾರ, ಡಿಸೆಂಬರ್ 30 ರಂದು ಏಕಾದಶಿ ತಿಥಿಯು ಇಡೀ ದಿನ ಇರುವುದರಿಂದ ಅದೇ ದಿನ ಪುತ್ರದಾ ಏಕಾದಶಿ ಉಪವಾಸವನ್ನು ಆಚರಿಸಬೇಕು. ಈ ವರ್ಷ ಪುತ್ರದಾ ಏಕಾದಶಿಯಂದು ಬುಧ ಮತ್ತು ಸೂರ್ಯನ ಸಂಯೋಗದಿಂದ ಬುಧಾದಿತ್ಯ ಎಂಬ ರಾಜಯೋಗವನ್ನು ಸೃಷ್ಟಿ ಮಾಡುತ್ತದೆ. ಇದರಿಂದ ಪುತ್ರದಾ ಏಕಾದಶಿಯ ದಿನ ಉಪವಾಸ ಮಾಡಿದರೆ ಉಪವಾಸದ ಮಹತ್ವವನ್ನು ಮತ್ತಷ್ಟು ಹೆಚ್ಚಾಗುತ್ತದೆ ಎನ್ನಲಾಗಿದೆ.
ಪುತ್ರದಾ ಏಕಾದಶಿ ಪ್ರಯೋಜನ?
ಪುತ್ರದಾ ಏಕಾದಶಿ ಆಚರಿಸುವುದರಿಂದ ವಿಶೇಷವಾಗಿ ಪುತ್ರದ ಏಕಾದಶಿಯ ದಿನ ಉಪವಾಸವನ್ನು ಕೈಗೊಂಡರೆ ಯೋಗ್ಯ ಸಂತಾನವಾಗುತ್ತದೆ ಎನ್ನುವ ನಂಬಿಕೆ ಜನಜನಿತವಾಗಿದೆ. ಧಾರ್ಮಿಕ ಗ್ರಂಥಗಳು ಕೂಡ ಪುತ್ರದಾ ಏಕಾದಶಿಯ ದಿನ ಉಪವಾಸ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವ ಸಂಗತಿಯನ್ನು ತಿಳಿಸುತ್ತವೆ.
ಸಕಲೈಶ್ವರ್ಯಕ್ಕಾಗಿ ಪುತ್ರದ ಏಕಾದಶಿ ಉಪಾಯ:
ಪುತ್ರದಾ ಏಕಾದಶಿ ಪೂಜೆ ಮಾಡುವವರು ಮನಸ್ಸಿನಲ್ಲಿ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ಮಂತ್ರವನ್ನು ಜಪಿಸಬೇಕು. ವಿಷ್ಣುವಿಗೆ 2-3 ತುಳಸಿ ಎಲೆಗಳ ನೈವೇದ್ಯ ನೀಡಬೇಕು. ದಿನವಿಡೀ ಉಪವಾಸಮಾಡಿದ ಬಳಿಕ ರಾತ್ರಿ ವಿಷ್ಣು ಸ್ತೋತ್ರ ಪಠಿಸಬೇಕು. ಹೀಗೆ ಶ್ರದ್ದಾ ಭಕ್ತಿಯಿಂದ ಪುತ್ರದಾ ಏಕಾದಶಿ ಮಾಡಿದರೆ ಸಂತಾನ ಪ್ರಾಪ್ತಿಯಾಗುವುದು ಮಾತ್ರವಲ್ಲದೆ ಜೀವನದಲ್ಲಿ ಸಕಲ ಸುಖ ಸಂತೋಷಗಳು ನಿಮ್ಮದಾಗಲಿವೆ ಎಂದು ಹೇಳಲಾಗುತ್ತದೆ.
ಸೂಚನೆ : ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.