)
Garuda Purana
: ಗರುಡ ಪುರಾಣವು ವ್ಯಕ್ತಿಯ ಹಿಂದಿನ ಮತ್ತು ಮುಂದಿನ ಜನ್ಮಗಳ ಬಗ್ಗೆ ಅವನ ಕರ್ಮಗಳ ಪ್ರಕಾರ ಹೇಳುತ್ತದೆ. ಮನುಷ್ಯ ಸಾವನ್ನಪ್ಪಿದ ನಂತರ ಏನಾಗುತ್ತಾನೆ? ಈ ಪ್ರಶ್ನೆಗೆ ಗರುಡ ಪುರಾಣದಲ್ಲಿ ಉತ್ತರವಿದೆ. ವ್ಯಕ್ತಿಯ ಜೀವನದ ಎಲ್ಲಾ ಅಂಶಗಳ ಬಗ್ಗೆ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಇಂದು ನಾವು ನಿಮ್ಮ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟಲು ಕಾರಣವಾಗುವ ಆ ತಪ್ಪುಗಳು ಯಾವುವು ಎಂಬುದರ ಬಗ್ಗೆ ತಿಳಿಸಲಿದ್ದೇವೆ.
1) ಕುತಂತ್ರಿ ಅಥವಾ ಇತರರನ್ನ ಮೂರ್ಖರನ್ನಾಗಿ ಮಾಡುವ ವ್ಯಕ್ತಿಯ ಮುಂದಿನ ಜನ್ಮ ಗೂಬೆಯಾಗಿರುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ನೀವು ನಿಮ್ಮ ಕುತಂತ್ರ ಮತ್ತು ವಂಚನೆಯಿಂದ ಇತರರನ್ನ ಮೂರ್ಖರನ್ನಾಗಿ ಮಾಡಿ ಇತರರನ್ನ ಕತ್ತಲೆಯಲ್ಲಿ ಇಡುವಂತೆಯೇ, ಮುಂದಿನ ಜನ್ಮದಲ್ಲಿ ಅವನು ಗೂಬೆಯಾಗಿ ಕತ್ತಲೆಯಲ್ಲಿ ವಾಸಿಸುತ್ತಾನೆ.
2) ಮಹಿಳೆಯರನ್ನ ಅವಮಾನಿಸುವವರು, ಅವರೊಂದಿಗೆ ಅನುಚಿತವಾಗಿ ವರ್ತಿಸುವವರು ಅಥವಾ ಮಹಿಳೆಯರನ್ನ ಕೆಟ್ಟ ಉದ್ದೇಶದಿಂದ ನೋಡುವವರು ತಮ್ಮ ಮುಂದಿನ ಜನ್ಮದಲ್ಲಿ ಹಲ್ಲಿ ಅಥವಾ ಹಾವಾಗಿ ಹುಟ್ಟುತ್ತಾರೆ. ಗರುಡ ಪುರಾಣದ ಪ್ರಕಾರ, ಹಲ್ಲಿ ಅಥವಾ ಹಾವಾಗಿ ಹುಟ್ಟುವುದು ಅವನತಿಯ ಸಂಕೇತವಾಗಿದೆ.
3) ಯಾವಾಗಲೂ ಇತರರನ್ನ ತಮ್ಮ ಮಾತುಗಳಿಂದ ಅವಮಾನಿಸುವ ಮತ್ತು ನಿಂದಿಸುವವರು ಆಡಾಗಿ ಹುಟ್ಟಬಹುದು. ಬೇರೆಯವರಿಗೆ ಕೆಟ್ಟ ಶಬ್ಧಗಳನ್ನ ಬಳಸುವವರು ಮೇಕೆಯಾಗಿ ಹುಟ್ಟುತ್ತಾರೆಂದು ಹೇಳಲಾಗಿದೆ.
೪) ಯಾರಾದರೂ ತನ್ನ ಸ್ನೇಹಿತನಿಗೆ ಮೋಸ ಮಾಡಿದರೆ ಅಥವಾ ಯಾರನ್ನಾದರೂ ಮೋಸಗೊಳಿಸಿದರೆ, ಆತನ ಮುಂದಿನ ಜನ್ಮ ರಣಹದ್ದು ಆಗಿರುತ್ತದೆ. ಗರುಡ ಪುರಾಣದ ಪ್ರಕಾರ, ತನ್ನ ಸ್ನೇಹಿತನಿಗೆ ದ್ರೋಹ ಮಾಡುವ ವ್ಯಕ್ತಿಯು ಮುಂದಿನ ಜನ್ಮದಲ್ಲಿ ರಣಹದ್ದುಗಳಂತೆ ಸತ್ತ ಜೀವಿಗಳನ್ನ ಅವಲಂಬಿಸಬೇಕಾಗುತ್ತದೆ.
ಹೀಗಾಗಿ ಈ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಯೂ ಪ್ರತಿದಿನ ಅದು ಮಾಡುವ ಕಾರ್ಯಗಳನ್ನ ಅವಲಂಬಿಸಿದ ಪಾಪ-ಪುಣ್ಯದ ಕರ್ಮದ ಫಲಗಳನ್ನ ಪಡೆಯುತ್ತದೆ ಎಂದು ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ನಾವು ಮಾಡುವ ಪಾಪ-ಪುಣ್ಯದ ಕೆಲಸಗಳ ಮೇಲೆ ನಮಗೆ ಫಲಿತಾಂಶ ಸಿಗುತ್ತದೆ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)