ವೀಳ್ಯದೆಲೆ ಮನೆಯ ಹಿತ್ತಲಲ್ಲಿ ನೆಟ್ಟರೆ ಏನಾಗುತ್ತದೆ.. ಯಾವ ದಿಕ್ಕಿನಲ್ಲಿ ಇರಬೇಕು ಗೊತ್ತಾ?

 ಆಧ್ಯಾತ್ಮಿಕವಲ್ಲದೆ.. ಆರೋಗ್ಯದ ದೃಷ್ಟಿಯಿಂದಲೂ ವೀಳ್ಯದೆಲೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.   

Written by - Chetana Devarmani | Last Updated : Oct 5, 2025, 10:39 PM IST
  • ಮನೆಯಲ್ಲಿ ವೀಳ್ಯದೆಲೆ ಬೆಳೆಸುವುದರಿಂದ ಏನು ಪ್ರಯೋಜನ?
  • ವೀಳ್ಯದೆಲೆ ಮನೆಯಲ್ಲಿ ಬೆಳೆಸಬಹುದೇ?
  • ಯಾವ ದಿಕ್ಕಿನಲ್ಲಿ ಬೆಳಸಿದರೆ ಪ್ರಯೋಜನವಾಗುತ್ತದೆ?
ವೀಳ್ಯದೆಲೆ ಮನೆಯ ಹಿತ್ತಲಲ್ಲಿ ನೆಟ್ಟರೆ ಏನಾಗುತ್ತದೆ.. ಯಾವ ದಿಕ್ಕಿನಲ್ಲಿ ಇರಬೇಕು ಗೊತ್ತಾ?

ವೀಳ್ಯದೆಲೆಯ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಇವುಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ವೀಳ್ಯದೆಲೆ ಇಲ್ಲದೆ ವ್ರತಗಳು, ಪೂಜೆಗಳು ಪೂರ್ಣವಾಗುವುದಿಲ್ಲ. ಹಾಗೆಯೇ ವೀಳ್ಯದೆಲೆ ಇಲ್ಲದೆ ತಾಂಬೂಲ ಕೊಡುವುದಿಲ್ಲ. ಆಧ್ಯಾತ್ಮಿಕವಲ್ಲದೆ.. ಆರೋಗ್ಯದ ದೃಷ್ಟಿಯಿಂದಲೂ ವೀಳ್ಯದೆಲೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. 

Add Zee News as a Preferred Source

ವೀಳ್ಯದೆಲೆಯನ್ನು ತಿನ್ನುವುದರಿಂದ ಅನೇಕ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು. ಅನೇಕ ಜನರು ಈಗ ಮನೆಯಲ್ಲಿಯೂ ವೀಳ್ಯದೆಲೆ ಬೆಳೆಸುತ್ತಿದ್ದಾರೆ. ಆದರೆ ವಾಸ್ತು ಪ್ರಕಾರ.. ಕೆಲವು ರೀತಿಯ ಗಿಡಗಳನ್ನು ಮನೆಯಲ್ಲಿ ಬೆಳೆಸಬಾರದು. ಹೀಗೆ ಬೆಳೆಸುವುದರಿಂದ ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 

ಇದನ್ನೂ ಓದಿ: ಮಲಗುವಾಗ ದಿಂಬಿನ ಪಕ್ಕ ಈ 5 ವಸ್ತುಗಳನ್ನು ಇಡಬೇಡಿ.. ದಾರಿದ್ರ್ಯ ವಕ್ಕರಿಸಿ ಸಿರಿವಂತನೂ ಬಡವನಾಗುವ!

ವಾಸ್ತು ಪ್ರಕಾರ ಕೆಲವು ಗಿಡಗಳನ್ನು ಬೆಳೆಸುವುದರಿಂದ ಆರ್ಥಿಕ ಲಾಭವೂ ಬರುತ್ತದೆ. ಮನೆಯಲ್ಲಿ ವೀಳ್ಯದೆಲೆ ಬಳ್ಳಿಯನ್ನು ಬೆಳೆಸುವುದರಿಂದ ಏನು ಪ್ರಯೋಜನ? ಇದನ್ನು ಮನೆಯಲ್ಲಿ ಬೆಳೆಸಬಹುದೇ? ಯಾವ ದಿಕ್ಕಿನಲ್ಲಿ ಇಟ್ಟರೆ ಪ್ರಯೋಜನ ಎಂದು ತಿಳಿಯೋಣ.

ವೀಳ್ಯದೆಲೆ ಹಿಂದೂ ಸಂಪ್ರದಾಯಗಳ ಪ್ರಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಆಯುರ್ವೇದದಲ್ಲಿಯೂ ಸಹ ಅನೇಕ ರೋಗಗಳನ್ನು ಕಡಿಮೆ ಮಾಡಲು ಔಷಧಿಯಾಗಿ ಬಳಸಲಾಗುತ್ತದೆ. ಆದರೆ ವೀಳ್ಯದೆಲೆ ಇರುವ ಮನೆಯಲ್ಲಿ ಶನಿ ಇರುವುದಿಲ್ಲ. ವೀಳ್ಯದೆಲೆಯ ಬಳ್ಳಿ ಮನೆಯಲ್ಲಿದ್ದರೆ ಆರ್ಥಿಕ ಸಮಸ್ಯೆಗಳು ಬರುವುದಿಲ್ಲ. ಮನೆಯಲ್ಲಿ ಹಣದ ಕೊರತೆ ಕಾಡುವುದಿಲ್ಲ ಎಂದು ಹೇಳಲಾಗುತ್ತದೆ.  

ವೀಳ್ಯದೆಲೆಯ ಬಳ್ಳಿ ಮನೆಯಲ್ಲಿರುವುದು ಎಂದರೆ ಲಕ್ಷ್ಮೀದೇವಿ ಮತ್ತು ಆಂಜನೇಯ ಸ್ವಾಮಿಯ ಮನೆಯಲ್ಲಿರುವುದು ಎಂದರ್ಥ. ಈ ಗಿಡ ಸರಿಯಾಗಿ ಬೆಳೆದರೆ ಸಾಲದ ಬಾಧೆಯೂ ಬರುವುದಿಲ್ಲ ಎನ್ನುತ್ತಾರೆ. ವೀಳ್ಯದೆಲೆ ಚೆನ್ನಾಗಿ ಬೆಳೆಯಲು ಬಿಸಿಲಿನ ಸ್ಥಳದಲ್ಲಿ ಇಡಬೇಕು. ಇದನ್ನು ಪೂರ್ವ ದಿಕ್ಕಿಗೆ ಇಟ್ಟರೆ ತುಂಬಾ ಒಳ್ಳೆಯದು.  

ಇದನ್ನೂ ಓದಿ: ಎಷ್ಟೇ ವಿಷಕಾರಿ ಹಾವು ಕಚ್ಚಿದರೂ ಜೀವ ಉಳಿಸುವ ಸುವರ್ಣ ತಂತ್ರ! ಸಾವಿನಿಂದ ಪಾರುಮಾಡುವ ಏಕೈಕ ಉಪಾಯ..

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
 

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News