)
Auspicious Five Rare Yogas On Vijayadashami: ಅಕ್ಟೋಬರ್ 01, 2025ರಂದು ಮಹಾನವಮಿ(ಆಯುಧ ಪೂಜೆ) ಆಚರಿಸಲಾಗುತ್ತಿದೆ. ಅಕ್ಟೋಬರ್ 02, 2025 ವಿಜಯದಶಮಿ (ದಸರಾ) ಆಚರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಜೊತೆಗೆ ಜ್ಯೋತಿಷ್ಯದ ದೃಷ್ಟಿಯಿಂದಲೂ ಈ ವಿಜಯದಶಮಿ ತುಂಬಾ ವಿಶೇಷವಾಗಿದೆ. ಸುಮಾರು 100 ವರ್ಷಗಳ ಬಳಿಕ ವಿಜಯದಶಮಿಯಲ್ಲಿ ಅಪರೂಪದ ಅರ್ಧಕೇಂದ್ರ ಯೋಗ, ಬುಧಾದಿತ್ಯ ಯೋಗ, ಭದ್ರ ಮಹಾಪುರುಷ ರಾಜಯೋಗ, ನವಪಂಚಮ ಯೋಗ, ರವಿ ಯೋಗಗಳು ನಿರ್ಮಾಣವಾಗಲಿವೆ.
ಅಪರೂಪದ ಪಂಚ ಮಹಾ ಯೋಗಗಳು:
ಈ ಬಾರಿಯ ವಿಜಯದಶಮಿಯಲ್ಲಿ ಬುಧ ತನ್ನದೇ ರಾಶಿಯಲ್ಲಿದ್ದು ಭದ್ರ ಮಹಾಪುರುಷ ರಾಜ ಯೋಗವನ್ನು ಸೃಷ್ಟಿಸಲಿದ್ದಾನೆ. ಅಲ್ಲಿಯೇ ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗವೂ ರಚನೆಯಾಗಲಿದೆ. ಇದಲ್ಲದೆ, ಯಮನೊಟ್ಟಿಗೆ ಸೂರ್ಯನ ಸಮಾಗಮದಿಂದ ನವಪಂಚಮ ಯೋಗ ಸೃಷ್ಟಿಯಾದರೆ, ಗುರು-ಶುಕ್ರರು ಒಟ್ಟಿಗೆ ಕೂಡಿ ಅರ್ಧಕೆಂದ್ರ ಯೋಗವನ್ನು ನಿರ್ಮಿಸಲಿದ್ದಾರೆ. ಇದಲ್ಲದೆ, ಶುಭ ರವಿ ಯೋಗವೂ ಸೃಷ್ಟಿಯಾಗಲಿದೆ.
ವಿಜಯದಶಮಿಯಲ್ಲಿ ಅಪರೂಪದ ಯೋಗಗಳ ಪ್ರಭಾವ:
ಶತಮಾನದ ಬಳಿಕ ಭದ್ರ ಮಹಾಪುರುಷ ರಾಜ ಯೋಗವೂ ಸೇರಿದಂತೆ ವಿಜಯದಶಮಿಯಲ್ಲಿ ನಿರ್ಮಾಣವಾಗಲಿರುವ ಬುಧಾದಿತ್ಯ ಯೋಗ, ನವಪಂಚಮ ಯೋಗ, ಅರ್ಧಕೆಂದ್ರ ಯೋಗ ಮತ್ತು ರವಿ ಯೋಗಗಳ ಶುಭ-ಅಶುಭ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವಫ್ರ ಅದೃಷ್ಟದ ಬಾಗಿಲುಗಳು ತೆರೆಯುತ್ತವೆ. ಜೀವನದಲ್ಲಿ ಕಷ್ಟಗಳು ಕಳೆದು ಸುಖದ ದಿನಗಳು ಬರಲಿವೆ ಎನ್ನಲಾಗುತ್ತಿದೆ.
ವಿಜಯದಶಮಿಯಲ್ಲಿ ಈ ಮೂರು ರಾಶಿಯವರ ಅದೃಷ್ಟವೇ ಬದಲು:
ಸಿಂಹ ರಾಶಿ:
2025 ವಿಜಯದಶಮಿಯಲ್ಲಿ ನಿರ್ಮಾಣವಾಗಲಿರುವ ಅಪರೂಪದ ಐದು ಯೋಗಗಳಿಂದಾಗಿ ಈ ರಾಶಿಯವರಿಗೆ ಧಿಡೀರ್ ಧನಲಾಭವಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಿ ಹಣಕಾಸು ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಹೂಡಿಕೆಯಿಂದ ಭರ್ಜರಿ ಆದಾಯವನ್ನು ಗಳಿಸುವಿರಿ. ಸ್ಥಗಿತಗೊಂಡಿದ್ದ ವಿವಾಹ ಮಾತುಕತೆಗಳು ಮುಂದುವರೆಯಲಿವೆ. ಅವಿವಾಹಿತರಿಗೆ ಶೀಘ್ರದಲ್ಲೇ ಮದುವೆ ಯೋಗ.
ಕನ್ಯಾ ರಾಶಿ:
ವಿಜಯದಶಮಿಯಲ್ಲಿ ಐದು ಗ್ರಹಗಳ ಅಪರೂಪದ ಸಂಯೋಗ, ಶುಭ ಯೋಗಗಳು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಅಗಾಧ ಯಶಸ್ಸನ್ನು ನೀಡಲಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ, ಪ್ರತಿಷ್ಠೆಗಳು ಹೆಚ್ಚಾಗಲಿದ್ದು ಜೀವನದಲ್ಲಿ ಹೊಸತನವನ್ನು ಅನುಭವಿಸುವಿರಿ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ದೊರೆತರೆ, ವಿವಾಹಿತರು ದಾಂಪತ್ಯದಲ್ಲಿ ಸುಖ-ಸಮೃದ್ಧಿಯನ್ನು ಕಾಣುವರು. ಹಣಕಾಸಿನ ಹರಿವು ಹೆಚ್ಚಾಗಿ ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಲಿದೆ.
ಮಕರ ರಾಶಿ:
ವಿಜಯದಶಮಿಯಲ್ಲಿ ನಿರ್ಮಾಣವಾಗಲಿರುವ ಐದು ಅಪರೂಪದ ಯೋಗಗಲಿಂದಾಗಿ ಈ ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಬೇರೆಡೆ ಸಿಲುಕಿರುವ ಹಣ ಮರಳಿ ಕೈ ಸೇರಲಿದೆ. ಉದ್ಯಮಿಗಳಿಗೆ ಭಾರೀ ಅನುಕೂಲಕರ ಸಮಯ ಇದಾಗಿದ್ದು, ವ್ಯವಹಾರದಲ್ಲಿ ದೊಡ್ಡ ಆರ್ಡರ್ ಸಿಗಲಿದೆ. ಮನೆಯಲ್ಲಿ ಸುಖ-ಸಂಪತ್ತು ಹೆಚ್ಚಾಗಲಿದೆ. ಹಣದ ಸುರಿಮಳೆಯೇ ಆಗಲಿದ್ದು ಐಶಾರಾಮಿ ವಸ್ತುಗಳನ್ನು ಖರೀದಿಸುವ ನಿಮ್ಮ ಬಹುಕಾಲದ ಬಯಕೆ ಈದೆರಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.