)
Shani Powerful COnjunction: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 500 ವರ್ಷಗಳ ಬಳಿಕ ಶನಿ ಮಹಾತ್ಮ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಿರುವ ಶನಿ ಮಹಾತ್ಮ ಬೆಳ್ಳಿ ಪಾದಗಳಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದಾಗಿ 500 ವರ್ಷಗಳ ನಂತರ ದೀಪಾವಳಿಯಲ್ಲಿ ಶನಿಯ ಪ್ರಬಲ ಸಂಯೋಗ ರಚನೆಯಾಗಿದೆ. ಇದರಿಂದ ಕೆಲವು ರಾಶಿಯವರ ಬಾಳಲ್ಲಿ ದಿವ್ಯ ಜ್ಯೋತಿ ಬೆಳಗಲಿದೆ. ಅವರ ಬಾಳೇ ಬಂಗಾರವಾಗಲಿದೆ ಎನ್ನಲಾಗುತ್ತಿದೆ.
ಮಿಥುನ ರಾಶಿ:
ದೀಪಾವಳಿ ವೇಳೆ ಶನಿ ಸಂಚಾರದಿಂದ ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ವೃತ್ತಿಪರರಿಗೆ ಮೇಲಾಧಿಕಾರಿಗಳಿಂದ ಗೌರವ ಮನ್ನಣೆ ದೊರೆಯಲಿದೆ. ವ್ಯವಹಾರದಲ್ಲಿ ಹೊಸ ಯೋಜನೆಗಳಲ್ಲಿ ಭರ್ಜರಿ ಲಾಭವಾಗಲಿದೆ. ಹಣಕಾಸಿನ ಸುರಿಮಳೆಯೇ ಆಗಲಿದ್ದು ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿಯನ್ನು ಕಾಣುವಿರಿ.
ಕಟಕ ರಾಶಿ:
ಶನಿ ಹಿಮ್ಮುಖ ಚಲನೆಯು ಈ ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ. ದೀರ್ಘಾವಧಿಯಿಂದ ಬಾಕಿ ಉಳಿದಿದ್ದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿದ್ದು ಹಠಾತ್ ಧನಲಾಭದಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಹಿಂದೆ ಮಾಡಿರುವ ಹೂಡಿಕೆಗಳಿಂದ ಭರ್ಜರಿ ಆದಾಯವನ್ನು ಗಳಿಸುವಿರಿ. ವ್ಯವಹಾರ ವಿಸ್ತರಣೆಗೆ ಇದು ಸಕಾಲ. ಒಟ್ಟಾರೆ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ.
ಮಕರ ರಾಶಿ:
500ವರ್ಷಗಳ ಬಳಿಕ ದೀಪಾವಳಿ ಸಂದರ್ಭದಲ್ಲಿ ಶನಿಯ ಹಿಮ್ಮುಖ ಸಂಚಾರದಿಂದ ಈ ರಾಶಿಯವರ ಭಾಗ್ಯ ಜ್ಯೋತಿ ಬೆಳಗಲಿದೆ. ವಿದೇಶ ವ್ಯವಹಾರಗಳಿಂದ ಎಂದೂ ಕಂಡಿರದಷ್ಟು ಲಾಭವನ್ನು ಕಾಣುವಿರಿ. ಸರ್ಕಾರಿ ಉದ್ಯೋಗಿಗಳಿಗೆ ನಿಮಗೆ ಬೇಕಾದ ಸ್ಥಳಕ್ಕೆ ವರ್ಗಾವಣೆ ಆಗಲಿದೆ. ಕುಟುಂಬದಲ್ಲಿ ಒಡಹುಟ್ಟಿದವರೊಂದಿಗಿನ ಸಂಬಂಧದಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. ಮಕ್ಕಳ ಮದುವೆಯ ಬಗೆಗಿನ ನಿಮ್ಮ ಪ್ರಯತ್ನಗಳಿಗೆ ಫಲ ಸಿಗುವ ಕಾಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.