Shiva Temple You Should Visit this Mahashivratri: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಹಾಶಿವರಾತ್ರಿಯ ದಿನ ಪ್ರತಿಯೊಬ್ಬರು ತಮ್ಮ ರಾಶಿಗೆ ಅನುಗುಣವಾಗಿಯೇ ಶಿವನ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜೊತೆಗೆ ಜೀವನದಲ್ಲಿ ಎದುರಾಗಿರುವ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ದೊರೆತು ಜೀವನದಲ್ಲಿ ಅದೃಷ್ಟವೇ ಬದಲಾಗುತ್ತದೆ. ಅಪಾರ ಸಂಪತ್ತಿನ ಒಡೆಯರಾಗುತ್ತಾರೆ ಎಂಬ ನಂಬಿಕೆಯಿದೆ. ಶಿವರಾತ್ರಿಯ ದಿನ ಯಾವ ರಾಶಿಯವರು ಯಾವ ಮಂದಿರಕ್ಕೆ ಭೇಟಿ ನೀಡುವುದರಿಂದ ಶುಭವಾಗುತ್ತದೆ ತಿಳಿಯಲು ಮುಂದೆ ಓದಿ...
ಮೇಷ ರಾಶಿ:
ಮಹಾಶಿವರಾತ್ರಿಯ ದಿನ ಈ ರಾಶಿಯವರು ಕೇದಾರನಾಥಕ್ಕೆ ಭೇಟಿ ನೀಡುವುದರಿಂದ ಆಂತರಿಕ ಶಕ್ತಿ ಹೆಚ್ಚಾಗುತ್ತದೆ. ಜೀವನದಲ್ಲಿ ನಿಮ್ಮ ಪ್ರಗತಿಗೆ ಅಡ್ಡಿಯಾಗಿರುವ ಭಾವನಾತ್ಮಕ ಅಡೆತಡೆಗಳಿಂದ ಪರಿಹಾರ ಪಡೆಯಬಹುದು.
ವೃಷಭ ರಾಶಿ:
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ರಾಶಿಯವರು ಶಿವರಾತ್ರಿಯ ದಿನ್ ಸೋಮನಾಥನ ದೇವಾಲಯಕ್ಕೆ ಭೇಟಿ ನೀಡುವುದು ಶುಭ. ಇದರಿಂದ ಜೀವನದಲ್ಲಿ ಸುಖ-ಸಂಪತ್ತು ಹೆಚ್ಚಾಗಿ ಆರ್ಥಿಕ ಸ್ಥಿರತೆ ಕಂಡು ಬರಲಿದೆ ಎಂಬ ನಂಬಿಕೆಯಿದೆ.
ಮಿಥುನ ರಾಶಿ:
ಈ ರಾಶಿಯವರು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ವಿಶಿಷ್ಟ ಸಂಕೇತಕ್ಕೆ ಹೆಸರುವಾಸಿ ಆಗಿರುವ ತ್ರಯಂಬಕೇಶ್ವರನ ದೇವಾಲಯಕ್ಕೆ ಮಹಾಶಿವರಾತ್ರಿಯ ದಿನ ಭೇಟಿ ನೀಡುವುದರಿಂದ ಜೀವನದಲ್ಲಿ ಸುಖ ಶಾಂತಿ ಹೆಚ್ಚಾಗುತ್ತದೆ.
ಕರ್ಕಾಟಕ ರಾಶಿ:
ಶಿವರಾತ್ರಿಯ ಪುಣ್ಯ ದಿನದಂದು ಈ ರಾಶಿಯವರು ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡುವುದರಿಂದ ಭಾವನಾತ್ಮಕ ಗಾಯಗಳು ಗುಣವಾಗಿ, ಆಂತರಿಕ ಶಕ್ತಿ ವೃದ್ಧಿಯಾಗುತ್ತದೆ.
ಇದನ್ನೂ ಓದಿ- 144 ವರ್ಷಗಳ ಬಳಿಕ ಮಹಾಶಿವರಾತ್ರಿ ದಿನವೇ 'ವಜ್ರ ಯೋಗ': ಈ ರಾಶಿಯವರಿಗೆ ಕುಬೇರ ಸಂಪತ್ತೇ ಕೈ ಸೇರುತ್ತೆ..!
ಸಿಂಹ ರಾಶಿ:
ಈ ರಾಶಿಯವರು ಮಹಾಶಿವರಾತ್ರಿಯ ದಿನ ಹಿಂದೂ ಪುರಾಣಗಳಲ್ಲಿ ಬಹಳ ಮಹತ್ವದ್ದು ಎನಿಸಿರುವ ಸೂರ್ಯನ ಶಕ್ತಿ ಪ್ರತಿನಿಧಿಸುವ ರಾಮನಾಥ ದೇವಾಲಯಕ್ಕೆ ಭೇಟಿ ನೀಡುವುದರಿಂದ ಜೀವನದಲ್ಲಿ ಪ್ರಗತಿ, ಯಶಸ್ಸು ಗಳಿಸುವರು.
ಕನ್ಯಾ ರಾಶಿ:
ಶಿವರಾತ್ರಿಯಂದು ಈ ರಾಶಿಯವರು ನಾಗೇಶ್ವರ ಮಂದಿರಕ್ಕೆ ತೆರಳಿ ದರ್ಶಣ ಪ್ಡೆಯುವುದರಿಂದ ಸಂಬಂಧಗಳಲ್ಲಿ ಮೂಡಿರುವ ಬಿರುಕು ಸರಿಹೋಗಿ, ಕೆಲಸದಲ್ಲಿ ಏಳ್ಗೆಯನ್ನು ಕಾಣುವರು ಎನ್ನಲಾಗುತ್ತದೆ.
ತುಲಾ ರಾಶಿ:
ಮಹಾಶಿವರಾತ್ರಿಯ ದಿನ ಈ ರಾಶಿಯಯ್ವರು ವೈದ್ಯನಾಥನ ದೇವಾಲಯಕ್ಕೆ ಭೇಟಿ ನೀಡುವುದರಿಂದ ಕುಟುಂಬದಲ್ಲಿ ಶಾಂತಿ ನೆಲ್ವ್ಸುತ್ತದೆ. ಜೀವನದ ಎಲ್ಲಾ ಆಯಾಮಗಳಲ್ಲೂ ಶಕ್ತಿ ಪುನಃಸ್ಥಾಪನೆಯಾಗುತ್ತದೆ ಎಂದು ನಂಬಲಾಗಿದೆ.
ವೃಶ್ಚಿಕ ರಾಶಿ:
ಈ ರಾಶಿಯವರು ಮಹಾಶಿವರಾತ್ರಿಯ ದಿನ ಕಾಶಿ ವಿಶ್ವನಾಥನ ದರ್ಶಣ ಪಡೆಉವುದರಿಂದ ಜೀವನದಲ್ಲಿ ಪರಿವರ್ತನೆಯನ್ನು ಕಾಣುವಿರಿ. ಪಾಪಗಳಿಂದ ಮುಕ್ತಿ ದೊರೆತು ಜೀವನದಲ್ಲಿ ಸುಖ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಮಾರ್ಚ್ ಆರಂಭವಾಗುತ್ತಿದ್ದಂತೆ ಈ ರಾಶಿಯವರಿಗೆ ಶುಕ್ರ ದೆಸೆ: ಕೆಲಸಗಳಲ್ಲಿ ಜಯ, ಭಾರೀ ಧನಲಾಭ, ಭೂಮಿ ಮನೆ ಖರೀದಿ ಭಾಗ್ಯ
ಧನು ರಾಶಿ:
ಮಹಾಶಿವರಾತ್ರಿಯಂದು ಬೈಜನಾಥನ ದೇವಾಲಯಕ್ಕೆ ಹೋಗುವುದರಿಂದ ಈ ರಾಶಿಯವರಿಗೆ ಜೀವನದಲ್ಲಿ ತಮ್ಮ ಗುರಿ ಸಾಧಿಸಲು ದೇವರ ಅನುಗ್ರಹ ದೊರೆಯಲಿದೆ.
ಮಕರ ರಾಶಿ:
ಶಿವನ ಶಕ್ತಿಗಳು ಭೌತಿಕ ಮತ್ತು ಆಧ್ಯಾತ್ಮಿಕ ಅಂಶಗಳೆರಡರ ಮೇಲೂ ಕೇಂದ್ರೀಕೃತವಾಗಿರುತ್ತದೆ. ಹಾಗಾಗಿ ಶಿವರಾತ್ರಿಯ ದಿನ ಈ ರಾಶಿಯವರಿಗೆ ಘೃಷ್ಣೇಶ್ವರ ದೇವಾಲಯಕ್ಕೆ ಭೇಟಿ ನೀಡುವುದು ಅತ್ಯಂತ ಶುಭ ಎನ್ನಲಾಗುತ್ತದೆ.
ಕುಂಭ ರಾಶಿ:
ಮಹಾಶಿವರಾತ್ರಿಯ ದಿನ ಈ ರಾಶಿಯ ಜನರು ಜಂಬುಕೇಶ್ವರ ದೇವಾಲಯಕ್ಕೆ ಭ್ತಿ ನೀಡುವುದರಿಂದ ಭೌತಿಕ ಸುಖ ಹೆಚ್ಚಾಗುತ್ತದೆ, ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.
ಮೀನ ರಾಶಿ:
ಮಹಾಶಿವರಾತ್ರಿಯ ದಿನ ಈ ರಾಶಿಯವರು ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡುವುದರಿಂದ ಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆಯುತ್ತವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ ಎನ್ನಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









