ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾದ ತಕ್ಷಣ ಮನೆ ಬಿಟ್ಟು ನಡೆಯುತ್ತಾಳೆ ಧನ ಲಕ್ಷ್ಮೀ !ಒಂದೊಂದು ಪೈಸೆಗೂ ಪಡಬೇಕಾಗುತ್ತದೆ ಪಾಡು

Kitchen Vastu rules :ಈ ನಿಯಮಗಳನ್ನು ಉಲ್ಲಂಘಿಸಿದರೆ,  ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ. ಸಂಪತ್ತಿನಿಂದ ತುಂಬಿದ ಮನೆಯಲ್ಲಿ ಬಡತನ ಸುತ್ತುವರಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ.   

Written by - Ranjitha R K | Last Updated : Apr 8, 2025, 05:09 PM IST
  • ಸನಾತನ ಧರ್ಮದಲ್ಲಿ, ಮನೆಯ ಅಡುಗೆಮನೆಯ ಅನ್ನಪೂರ್ಣ ದೇವಿಯ ವಾಸಸ್ಥಾನ
  • ಅನ್ನಪೂರ್ಣೆ ಲಕ್ಷ್ಮೀದೇವಿಯ ಒಂದು ರೂಪ
  • ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಎಂದಿಗೂ ಖಾಲಿಯಾಗಬಾರದು
ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾದ ತಕ್ಷಣ ಮನೆ ಬಿಟ್ಟು ನಡೆಯುತ್ತಾಳೆ ಧನ ಲಕ್ಷ್ಮೀ !ಒಂದೊಂದು ಪೈಸೆಗೂ ಪಡಬೇಕಾಗುತ್ತದೆ ಪಾಡು

Kitchen Vastu rules : ಸನಾತನ ಧರ್ಮದಲ್ಲಿ, ಮನೆಯ ಅಡುಗೆಮನೆಯನ್ನು ಅನ್ನಪೂರ್ಣ ದೇವಿಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಅನ್ನಪೂರ್ಣೆ ಲಕ್ಷ್ಮೀದೇವಿಯ ಒಂದು ರೂಪ. ಅಡುಗೆಮನೆ ಮತ್ತು ಅನ್ನಪೂರ್ಣೆಗೆ ಸಂಬಂಧಿಸಿದ ಹಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ವಿವರಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ,  ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ. ಸಂಪತ್ತಿನಿಂದ ತುಂಬಿದ ಮನೆಯಲ್ಲಿ ಬಡತನ ಸುತ್ತುವರಿಯಲು ಹೆಚ್ಚು ಸಮಯ ಬೇಕಾಗುವುದಿಲ್ಲ. 

Add Zee News as a Preferred Source

ಇಂದು ನಾವು ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಕೆಲವು ವಸ್ತುಗಳು ಎಂದಿಗೂ ಖಾಲಿಯಾಗಬಾರದು. ಒಂದು ವೇಳೆ ಅಡುಗೆ ಮನೆಯಲ್ಲಿ ಈ ವಸ್ತುಗಳು ಖಾಲಿಯಾದರೆ ಅದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ.  ಕುಟುಂಬದ ಆದಾಯದ ಮೂಲಕ್ಕೆ ಹೊಡೆತ ಬೀಳುತ್ತದೆ. ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಹಿಂಬಾಲಿಸುತ್ತಾ ಬರುತ್ತದೆ. 

ಇದನ್ನೂ ಓದಿ : ಗುರು ಬಲದಿಂದ ಈ 5 ರಾಶಿಗಳಿಗೆ ಅನಿರೀಕ್ಷಿತ ಧನಲಾಭ.. ಸ್ವಂತ ಮನೆ, ವಾಹನ ಯೋಗ.. ಹರಿದು ಬರುವುದು ಲೆಕ್ಕವಿರದಷ್ಟು ಸಂಪತ್ತು, ಅಪಾರ ಕೀರ್ತಿ ಪ್ರತಿಷ್ಠೆ!

ಅಡುಗೆಮನೆಯಲ್ಲಿ ಈ ವಸ್ತುಗಳು ಎಂದಿಗೂ ಖಾಲಿಯಾಗಬಾರದು?
ಸಕ್ಕರೆ :
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಸಕ್ಕರೆ ಎಂದಿಗೂ ಖಾಲಿಯಾಗಬಾರದು. ಸಕ್ಕರೆ ಇಲ್ಲದೆ ಹೋದರೆ ಆಹಾರಕ್ಕೆ ರುಚಿ ಬರುವುದಿಲ್ಲ. ಆಹಾರದ ಮಾಧುರ್ಯವನ್ನು ಸವಿಯುವುದು  ಸಾಧ್ಯವಾಗುವುದಿಲ್ಲ. ಅದೇ ಸಮಯದಲ್ಲಿ, ಕುಟುಂಬ ಸದಸ್ಯರಲ್ಲಿ ಪರಸ್ಪರ ಪ್ರೀತಿ, ಸಂತೋಷ ಮತ್ತು ಶಾಂತಿ ಕೂಡ ಕೊನೆಗೊಳ್ಳಲು ಪ್ರಾರಂಭಿಸುತ್ತದೆ. 

ಉಪ್ಪು : ಧಾರ್ಮಿಕ ವಿದ್ವಾಂಸರ ಪ್ರಕಾರ, ಅಡುಗೆಮನೆಯಲ್ಲಿ ಉಪ್ಪು ಖಾಲಿಯಗಾಬಾರದು. ಇದರ ಬಣ್ಣ ಬಿಳಿ, ಇದು ಚಂದ್ರನನ್ನು ಸಂಕೇತಿಸುತ್ತದೆ. ಚಂದ್ರನನ್ನು ಸಂಪತ್ತು ಮತ್ತು ಸಮೃದ್ಧಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಉಪ್ಪಿನ ಕೊರತೆಯಿಂದಾಗಿ ಕುಟುಂಬದಲ್ಲಿ ಹಣಕಾಸಿನ ತೊಂದರೆ ಕಾಣಿಸಿಕೊಳ್ಳುತ್ತದೆ. 

ಅರಿಶಿನ : ಅರಿಶಿನವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಡುಗೆಮನೆಯಲ್ಲಿ ಅರಿಶಿನ ಇದೆ ಎಂದರೆ ಸಕಾರಾತ್ಮಕ ಶಕ್ತಿ ಹರಡುತ್ತದೆ. ಇದು ಕುಟುಂಬ ಸದಸ್ಯರ ಅದೃಷ್ಟವನ್ನು ಬೆಳಗಿಸುತ್ತದೆ. ಆದ್ದರಿಂದ ಅದು ಅಡುಗೆ ಮನೆಯಲ್ಲಿ ಎಂದಿಗೂ ಖಾಲಿಯಾಗಲೇ ಬಾರದು. 

ಇದನ್ನೂ ಓದಿ : ಈ ರಾಶಿಯವರಿಗೆ ರಾಜಯೋಗ !ಜೀವನದ ಸುವರ್ಣ ಕಾಲ ಆರಂಭ !ಭೂಮಿ, ಆಸ್ತಿ, ಮನೆ ಅಥವಾ ವಾಹನ ಖರೀದಿ ಭಾಗ್ಯ ! ಇಲ್ಲಿವರೆಗಿನ ಸೋಲು ಗೆಲುವಾಗಿ ಬದಲಾಗುವ ಪರ್ವ ಕಾಲ

ನೀರು : ನೀರಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಈ ಮಾತನ್ನು ಎಲ್ಲರೂ ಕೇಳಿರಬೇಕು. ನೀರಿಲ್ಲ ಎಂದಾದರೆ ಏನೂ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅಡುಗೆಮನೆಯಲ್ಲಿ ಸದಾ ನೀರು ಇರುವಂತೆ ನೋಡಿಕೊಳ್ಳಬೇಕು. 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News