ದಿನಭವಿಷ್ಯ 11-06-2024: ಜ್ಯೇಷ್ಠ ಮಾಸದ, ಶುಕ್ಲ ಪಕ್ಷದ ಈ ದಿನ ವ್ಯಾಘಟ ಯೋಗ ನಿಮ್ಮ ರಾಶಿಗೆ ಹೇಗಿದೆ?

Today Horoscope 11th June 2024: ಮಂಗಳವಾರದ ಈ ದಿನ ವ್ಯಾಘಟ ಯೋಗವು ಮೇಷ ರಷಿಯಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jun 11, 2024, 07:45 AM IST
  • ಮಿಥುನ ರಾಶಿಯವರೇ ಉದ್ಯೋಗದಲ್ಲಿ ಯಾವುದೇ ಹೊಸ ಜವಾಬ್ದಾರಿಯನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ.
  • ಸಿಂಹ ರಾಶಿಯವರಿಗೆ ಇಂದು ದಿನದ ಪೂರ್ವಾರ್ಧ ಫಲಪ್ರಧವಾಗಿರುತ್ತದೆ.
  • ವೃಶ್ಚಿಕ ರಾಶಿಯವರಿಗೆ ಇಂದು ಶುಭ ದಿನ.
ದಿನಭವಿಷ್ಯ 11-06-2024:  ಜ್ಯೇಷ್ಠ ಮಾಸದ, ಶುಕ್ಲ ಪಕ್ಷದ ಈ ದಿನ ವ್ಯಾಘಟ ಯೋಗ ನಿಮ್ಮ ರಾಶಿಗೆ ಹೇಗಿದೆ?  title=

Mangalvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಪಂಚಮಿ ತಿಥಿಯ ಈ ದಿನ ಮಂಗಳವಾರ ಆಶ್ಲೇಷ ನಕ್ಷತ್ರ ವ್ಯಾಘಟ ಯೋಗ ಇರಲಿದೆ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ಮೇಷ ರಾಶಿಯವರಿಗೆ ಇಂದು ಅನುಕೂಲಕರ ದಿನ. ಹಿಂದೆ ನೀವು ಯಾರಿಗಾದರೂ ಸಾಲ ನೀಡಿದ್ದರೆ ಆ ಹಣ ಇಂದು ಕೈ ಸೇರಲಿದೆ. ವ್ಯಾಪಾರದಲ್ಲಿ ಲಾಭದ ನಿರೀಕ್ಷೆ, ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ವೃಷಭ ರಾಶಿಯವರಿಗೆ ಇಂದಿನ ದಿನವು ಸಂತೋಷದಿಂದ ಕೂಡಿರುತ್ತದೆ. ಫೋನ್ ಬಳಕೆಯನ್ನು ಕಡಿಮೆ ಮಾಡಿದರೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹಣದ ವಿಷಯದಲ್ಲಿ ಜನರನ್ನು ಅತಿಯಾಗಿ ನಂಬುವುದನ್ನು ತಪ್ಪಿಸಬೇಕು.

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಮಿಥುನ ರಾಶಿಯವರಿಗೆ ಇದು ಮಿಶ್ರ ಫಲಗಳಿಂದ ಕೂಡಿದ ವಾರ. ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ದಿನವನ್ನು ಆನಂದಿಸುವಿರಿ. ಉದ್ಯೋಗದಲ್ಲಿ ಯಾವುದೇ ಹೊಸ ಜವಾಬ್ದಾರಿಯನ್ನು ನಿರ್ಲಕ್ಷಿಸುವುದನ್ನು ತಪ್ಪಿಸಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕರ್ಕಾಟಕ ರಾಶಿಯವರೇ ನಿಮ್ಮ ಯೋಜನೆ ಪ್ರಕಾರ ಕೆಲಸ ಮಾಡುವುದರಿಂದ ಯಶಸ್ಸು. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವಾಗುತ್ತದೆ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. 

ಇದನ್ನೂ ಓದಿ- Gajakesari Yoga: ಗುರು-ಚಂದ್ರರಿಂದ ಗಜಕೇಸರಿ ರಾಜಯೋಗ, 3 ರಾಶಿಯವರ ಜೀವನದಲ್ಲಿ ಭಾಗ್ಯೋದಯ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಿಂಹ ರಾಶಿಯವರಿಗೆ ಇಂದು ದಿನದ ಪೂರ್ವಾರ್ಧ ಫಲಪ್ರಧವಾಗಿರುತ್ತದೆ. ವ್ಯಾಪಾರ ಸಂಬಂಧಿತ ಪ್ರವಾಸಗಳು ಲಾಭದಾಯಕವಾಗಿರುತ್ತದೆ. ಮನೆಯಿಂದ ಹೊರ ಹೋಗುವಾಗ ಹಿರಿಯರ ಆಶೀರ್ವಾದ ಪಡೆದು ಹೊರಹೋಗುವುದರಿಂದ  ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುತ್ತೀರಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕನ್ಯಾ ರಾಶಿಯವರಿಗೆ ಈ ದಿನ ಮಿಶ್ರ ಫಲಗಳಿಂದ ಕೂಡಿರುತ್ತದೆ. ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳು ಹೆಚ್ಚಾಗಬಹುದು. ನಿಮ್ಮ ಯೋಜನೆಗಳಿಂದ ನಿಮ್ಮ ಶತ್ರುಗಳು ಹೆಚ್ಚು ಪ್ರಭಾವಿತರಾಗಬಹುದು. ನಿಮ್ಮ ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು. 

ತುಲಾ ರಾಶಿಯವರ ಭವಿಷ್ಯ (Libra Horoscope): 
ತುಲಾ ರಾಶಿಯವರಿಗೆ ಇಂದು ದಿನವು ಉತ್ತಮ ಮನಸ್ಥಿತಿಯೊಂದಿಗೆ ಆರಂಭವಾಗುತ್ತದೆ. ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಒಳ್ಳೆಯ ದಿನ. ಸಾಲದಿಂದ ಮುಕ್ತಿ ಪಡೆಯಬಹುದು. ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಉದ್ವೇಗವು ಕೊನೆಗೊಳ್ಳುತ್ತದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವೃಶ್ಚಿಕ ರಾಶಿಯವರಿಗೆ ಇಂದು ಶುಭ ದಿನ. ಪ್ರಸ್ತುತ ನೀವು ಎದುರಿಸುತ್ತಿರುವ ಸಮಸ್ಯೆಗಳಿಂದ ಪರಿಹಾರ ಪಡೆಯುವುದರಿಂದ ಮನಸ್ಸಿನಲ್ಲಿ ಸಂತಸ ಮೂಡುತ್ತದೆ. ಜೀವನದಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸುವಿರಿ. 

ಇದನ್ನೂ ಓದಿ- 500 ವರ್ಷಗಳ ನಂತರ ರೂಪಗೊಂಡ ಪಂಚ ದಿವ್ಯ ರಾಜಯೋಗ: ಯಾವ ರಾಶಿಗಳಿಗೆ ಶುಭ & ಅಶುಭ?

ಧನು ರಾಶಿಯವರ ಭವಿಷ್ಯ (Sagittarius Horoscope):  
ಧನು ರಾಶಿಯವರಿಗೆ ದಿನವು ಉತ್ಸಾಹದಿಂದ ಕೂಡಿರುತ್ತದೆ. ವ್ಯಾಪಾರ ಕ್ಷೇತ್ರದಲ್ಲಿ ಬಂಪರ್ ಧನಲಾಭವನ್ನು ನಿರೀಕ್ಷಿಸಬಹುದು. ಕುಟುಂಬಕ್ಕೆ ಹೊಸ ಸದಸ್ಯರ ಆಗಮನದಿಂದ ಸಂತೋಷದ ವಾತಾವರಣ ಇರಲಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಮಕರ ರಾಶಿಯವರೇ ನಿಮ್ಮ ಒಳ್ಳೆಯ ಆಲೋಚನೆಗಳು ಸಮಾಜದಲ್ಲಿ ವಿಶಿಷ್ಟವಾದ ಗುರುತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಗುತ್ತಿಗೆದಾರರಿಗೆ ಇಂದು ಲಾಭದಾಯಕ ದಿನವಾಗಲಿದೆ. ಆದಾಗ್ಯೂ, ನೀವು ಹಿರಿಯರ ಮಾತಿಗೆ ಕಿವಿಗೊಡುವುದನ್ನು ಮರೆಯಬೇಡಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕುಂಭ ರಾಶಿಯವರೇ ನೀವು ಕುಟುಂಬದ ಸದಸ್ಯರೊಂದಿಗೆ ಇಂದು ಉತ್ತಮ ಸಮಯವನ್ನು ಆನಂದಿಸುವಿರಿ. ಇದು ನಿಮ್ಮ ಸಂಬಂಧಗಳನ್ನು ಸುಧಾರಿಸುತ್ತದೆ. ಭವಿಷ್ಯದಲ್ಲಿ ನಿಮಗೆ ಪ್ರಯೋಜನವನ್ನು ನೀಡುವ ಯಾರನ್ನಾದರೂ ನೀವು ಭೇಟಿಯಾಗಬಹುದು. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಮೀನ ರಾಶಿಯವರು ಇಂದು ಕುಟುಂಬದೊಂದಿಗೆ ವಿಹಾರಕ್ಕಾಗಿ ಯೋಜಿಸಬಹುದು. ಸ್ನೇಹಿತರೊಂದಿಗೆ ಸಂತೋಷ ಕೂಟಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಬಹುದು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ತಜ್ಞರ ಸಲಹೆ ಪಡೆಯುವುದರಿಂದ ಪ್ರಯೋಜನವಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News