)
ಪೊರಕೆ ಪ್ರತಿ ಮನೆಯಲ್ಲೂ ಒಂದು ಸ್ಥಾನ ಪಡೆದಿರುವ ವಸ್ತು. ದಿನ ನಿತ್ಯ ನಾವು ಬಳಸುವ ಈ ಪೊರಕೆ ಲಕ್ಷ್ಮೀಗೆ ಸಮಾನ. ಪೊರಕೆಯನ್ನು ಲಕ್ಷ್ಮೀ ಸ್ವರೂಪ ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಪೊರಕೆಯನ್ನು ಕಾಲಿಗೆ ತಾಗಿಸಬಾರದು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಹೇಳಲಾಗಿದೆ. ಪೊರಕೆ ಯಾವ ದಿನ ಖರೀದಿಸಬೇಕು, ಯಾವ ದಿನ ಖರೀದಿಸಬಾರದು, ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು, ಹೇಗೆ ಇಡಬೇಕು ಎನ್ನುವ ನಿಯಮಗಳನ್ನು ಹೇಳಲಾಗಿದೆ. ಈ ಪೊರಕೆ ನಿಯಮದಂತೆ ನಡೆದುಕೊಂಡರೆ ನಮ್ಮ ಮನೆಯಲ್ಲಿ ಲಕ್ಷ್ಮೀ ನಲಿದಾಡುತ್ತಾಳೆ ಎನ್ನಲಾಗಿದೆ.
ಮನೆಯೊಳಗೆ ತಂದ ಪೊರಕೆಯನ್ನು ಮನೆಯ ವಾಯುವ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿಯೇ ಇಡಬೇಕು.ಇದು ಜೀವನದಲ್ಲಿ ಧನಾತ್ಮಕ ಶಕ್ತಿಯನ್ನು ಕಾಪಾಡುತ್ತದೆ. ಮನೆಯ ಈಶಾನ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಪೊರಕೆಯನ್ನು ಇಡಬೇಡಿ. ಅಲ್ಲದೆ ನಮ್ಮ ಮನೆಯಲ್ಲಿ ಬಳಸುವ ಪೊರಕೆ ಎಲ್ಲರ ಕಣ್ಣಿಗೆ ಬೀಳುವ ಜಾಗದಲ್ಲಿ ಕೂಡಾ ಇಡಬಾರದು.ಸರಿಯಾದ ದಿಕ್ಕಿನಲ್ಲಿ ಸರಿಯಾದ ಜಾಗದಲ್ಲಿ ಪೊರಕೆ ಇಡುವ ಮನೆಯಲ್ಲಿ ಹಣಕಾಸಿನ ಸಮಸ್ಯೆ ಎದುರಾಗುವುದೇ ಇಲ್ಲ.
ಪೊರಕೆಯನ್ನು ದೇವರಕೋಕೊಣೆಯ ಬಳಿ ಇಡಲೇಬಾರದು. ಒಂದು ವೇಳೆ ದೇವರ ಕೋಣೆಯ ಬಳಿ ಪೊರಕೆ ಇಟ್ಟಿದ್ದರೆ ಅದು ಲಕ್ಷ್ಮೀಯ ಕೋಪಕ್ಕೆ ಕಾರಣವಾಗುತ್ತದೆ. ಅಷ್ಟು ಮಾತ್ರವಲ್ಲ ಅಡುಗೆ ಮನೆಯಲ್ಲಿ ಕೂಡಾ ಪೊರಕೆ ಇಡುವುದು ನಿಷಿದ್ದ. ಇದು ಮನೆಯಲ್ಲಿನ ಸಕಾರಾತ್ಮಕ ಶಕ್ತಿಯನ್ನು ಹಾಳು ಮಾಡುತ್ತದೆಯಂತೆ. ಹಾಗೆಯೇ ಮುಖ್ಯ ಬಾಗಿಲಿನ ಎದುರು ಅಥವಾ ಹಿಂದೆ ಕೂಡಾ ಪೊರಕೆ ಇಡಬಾರದು ಇದು ಕೂಡಾ ವಾಸ್ತು ದೋಷಕ್ಕೆ ಕಾರಣಾಗುತ್ತದೆ.
ಇನ್ನು ಪೊರಕೆ ಖರೀದಿಸುವುದಕ್ಕೂ ಶುಭ ದಿನ ಎನ್ನುವುದಿದೆ. ಮನಸ್ಸಿಗೆ ಬಂದ ದಿನದಂದು ಪೊರಕೆ ಖರೀದಿ ಮಾಡುವುದು ಸೂಕ್ತವಲ್ಲ. ವಾಸ್ತುವಿನಲ್ಲಿ ಹೇಳಲಾದ ದಿನದಂದು ಪೊರಕೆ ಖರೀದಿಸಿದರೆ ಪೊರಕೆ ಜೊತೆ ಅದೃಷ್ಟ ಲಕ್ಷ್ಮೀ ಕೂಡಾ ಮನೆ ಪ್ರವೇಶಿಸುತ್ತಾಳೆ.
ಸೋಮವಾರ ಯಾವುದೇ ಕಾರಣಕ್ಕೂ ಪೊರಕೆ ಕೊಳ್ಳಬಾರದು. ಸೋಮವಾರದಂದು ಪೊರಕೆ ಖರೀದಿಸಿದರೆ, ಆರ್ಥಿಕ ನಷ್ಟವನ್ನು ಉಂಟುಮಾಡಬಹುದು.ಸಾಲದ ಸುಳಿಯಲ್ಲಿ ಸಿಲುಕಬೇಕಾಗಬಹುದು.
ಪೊರಕೆ ಖರೀದಿಸಲು ಹೇಳಿ ಮಾಡಿಸಿದ ದಿನ ಎಂದರೆ ಶುಕ್ರವಾರ, ಮಂಗಳವಾರ ಮತ್ತು ಶನಿವಾರ. ಶನಿವಾರದಂದು ಹೊಸ ಪೊರಕೆ ಖರೀದಿಸುವುದು ಉತ್ತಮ. ಇದು ಬಡತನವನ್ನು ತೊಡೆದುಹಾಕುತ್ತದೆ. ಸಂಪತ್ತನ್ನು ತರುತ್ತದೆ.ಶುಕ್ರವಾರ, ಮಂಗಳವಾರ ಪೊರಕೆ ಖರೀದಿಸಿದರೆ ಪೊರಕೆ ಜೊತೆ ಅದೃಷ್ಟ ಲಕ್ಷ್ಮೀ ಕೂಡಾ ಮನೆ ಪ್ರವೇಶ ಮಾಡುತ್ತಾಳೆ. ಶುಕ್ರವಾರ, ಮಂಗಳವಾರ, ಶನಿವಾರ, ಧನತ್ರಯೋದಶಿ, ಮತ್ತು ದೀಪಾವಳಿಯಂದು ಪೊರಕೆ ಖರೀದಿಸುವುದು ಅತ್ಯಂತ ಶುಭ. ಈ ದಿನಗಳಲ್ಲಿ ಪೊರಕೆ ಖರೀದಿಸಿದರೆ ಆರ್ಥಿಕವಾಗಿ ಸಮೃದ್ಧಿಯಾಗುವುದಂತೆ.
(ಸೂಚನೆ : ಮೇಲಿನ ಲೇಖನವನ್ನು ಧಾರ್ಮಿಕ ನಂಬಿಕೆ ಮತ್ತು ಮಾಹಿತಿ ಆಧಾರದ ಮೇಲೆ ಬರೆಯಲಾಗಿದೆ. ZEE KANNADA NEWS ಇದನ್ನು ಅನುಮೊದಿಸುವುದಿಲ್ಲ.)