)
ಬೆಂಗಳೂರು : ಮನೆಗಳಲ್ಲಿ ಮರಗಳು ಮತ್ತು ಸಸ್ಯಗಳನ್ನು ನೆಡುವುದು ಹಸಿರಿನ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದು ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ, ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಮನೆಗಳಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ಜನರು ಕುಂಡಗಳಲ್ಲಿ ಗಿಡಗಳನ್ನು ನೆಡುವುದು ಇದೆ. ಆದರೆ ಇಲ್ಲಿ ನೆನಪಿನಲ್ಲಿಡಬೇಕಾದ ಅಂಶ ಎಂದರೆ ಕುಂಡಗಳಲ್ಲಿ ನೆಡುವ ಸಸ್ಯವನ್ನು ಎಲ್ಲಿ ಬೇಕೋ ಅಲ್ಲಿ ಇಡುವಂತಿಲ್ಲ. ಇದು ವಾಸ್ತುವಿನ ಅಡಿಯಲ್ಲಿ ಕೆಲವು ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಹೀಗೆ ಮಾಡುವುದರಿಂದ ಕುಟುಂಬದ ಸಂತೋಷ ಮತ್ತು ಸಮೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯಲ್ಲಿ ಗಿಡಗಳನ್ನು ಎಲ್ಲಿ ಇಡಬೇಕು ಎನ್ನುವುದನ್ನು ತಿಳಿದುಕೊಂಡು ನೆಡುವುದು ಬಹಳ ಮುಖ್ಯ.
ವಾಸ್ತು ಶಾಸ್ತ್ರದ ಪ್ರಕಾರ, ಎಲ್ಲಾ ಗಿಡವನ್ನು ಎಲ್ಲಾ ದಿಕ್ಕಿನಲ್ಲಿಯೂ ಇಡುವುದು ಸೂಕ್ತವಲ್ಲ. ಕೆಲವೊಂದು ಗಿಡಗಳನ್ನು ನಿರ್ದಿಷ್ಟ ದಿಕ್ಕಿನಲ್ಲಿ ಮತ್ತು ಸ್ಥಳದಲ್ಲಿ ನೆಟ್ಟರೆ ಮಾತ್ರ ಅದು ಶುಭ ಫಲಿತಾಂಶಗಳನ್ನು ನೀಡಲು ಸಾಧ್ಯ. ಉದಾಹರಣೆಗೆ, ಆಗ್ನೇಯ ಮೂಲೆಯಲ್ಲಿ ಬಿದಿರಿನ ಗಿಡವನ್ನು ಇರಿಸಿದರೆ, ಅದು ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ಅದೇ ರೀತಿ, ಮನಿ ಪ್ಲಾಂಟ್ ಇಡಲು ಉತ್ತಮ ದಿಕ್ಕು ಪಶ್ಚಿಮ. ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಆದರೆ ತುಳಸಿ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇರಿಸಿದಾಗ ಮಾತ್ರ ಅದು ಹೆಚ್ಚಿನ ಫಲವನ್ನು ನೀಡುತ್ತದೆ.
ಮನೆಯಲ್ಲಿ ಗಿಡಗಳನ್ನು ಎಲ್ಲಿ ಇಡಬೇಕು? :
ಮನೆಗಳಲ್ಲಿ ಗಿಡಗಳು ಗರಿಷ್ಠ ಪ್ರಯೋಜನವನ್ನು ನೀಡಲು ಅವುಗಳನ್ನು ಎಲ್ಲಿ ಇಡಬೇಕು? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಜ್ಯೋತಿಷ್ಯದ ಪ್ರಕಾರ, ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಸಸ್ಯಗಳನ್ನು ಇಟ್ಟರೆ ಅದು ಹೆಚ್ಚು ಪ್ರಯೋಜನಕಾರಿ. ಇದಕ್ಕೆ ಕಾರಣವೆಂದರೆ ಈ ಎರಡೂ ದಿಕ್ಕುಗಳು ಸಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧ ಹೊಂದಿವೆ. ಈ ಎರಡೂ ಸ್ಥಳಗಳಲ್ಲಿ ಗಿಡಗಳನ್ನು ಇಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ.
ಯಾವ ದಿಕ್ಕಿನಲ್ಲಿ ಸಸ್ಯಗಳನ್ನು ಇಡಬಾರದು :
ಸಸ್ಯಗಳನ್ನು ಇರಿಸಲು ಸರಿಯಾದ ದಿಕ್ಕು ಯಾವುದು ಎನ್ನುವುದನ್ನು ಮೇಲೆ ತಿಳಿಸಲಾಗಿದೆ.ಅದೇ ರೀತಿ ಅಶುಭ ದಿಕ್ಕುಗಳ ಬಗ್ಗೆಯೂ ಮಾಹಿತಿ ಇದ್ದರೆ ಒಳ್ಳೆಯದು. ಹೌದು ಗಿಡ ನೆಡಲು ಇರುವ ಶುಭ ದಿಕ್ಕು ಎಂದರೆ ದಕ್ಷಿಣ ಮತ್ತು ಪಶ್ಚಿಮ. ಇವುಗಳಲ್ಲಿ ದಕ್ಷಿಣ ದಿಕ್ಕನ್ನು ಸಾವಿನ ದೇವರು ಯಮರಾಜನ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಈ ದಿಕ್ಕಿನಲ್ಲಿ ಗಿಡಗಳನ್ನು ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನಿಲ್ಲುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.