)
Tulsi Vivah Remedies: ಕಾರ್ತಿಕ ಮಾಸದ ಶುಕ್ಲ ಪಕ್ಷದ ಹನ್ನೆರಡನೆಯ ತಿಥಿಯಾದ ಉತ್ಥಾನ ದ್ವಾದಶಿ ಇರಲಿದೆ. ನವೆಂಬರ್ 02, 2025ರ ಭಾನುವಾರ ಉತ್ಥಾನ ದ್ವಾದಶಿ ಆಚರಣೆ ಇರಲಿದ್ದು ಈ ದಿನ 'ತುಳಸಿ ವಿವಾಹ' ತುಂಬಾ ವಿಶೇಷವಾಗಿದೆ. ಉತ್ಥಾನ ದ್ವಾದಶಿಯು ತುಳಸಿ ದೇವಿ ವಿಷ್ಣುವನ್ನು ವರಿಸಿದ ದಿನ.
ಧಾರ್ಮಿಕ ನಂಬಿಕೆಗಳ ತುಳಸಿ ಗಿಡದ ಪಕ್ಕದಲ್ಲಿ ಕೃಷ್ಣ/ವಿಷ್ಣುವಿನ ವಿಗ್ರಹ ಹಾಗೂ ಭಗವಾನ್ ವಿಷ್ಣು ನೆಲೆಸಿದ್ದಾನೆ ಎಂದು ನಂಬಲಾದ ಬೆಟ್ಟದ ನೆಲ್ಲಿಕಾಯಿಯನ್ನು ಇಟ್ಟು ಪೂಜಿಸುವುದು ಒಳ್ಳೆಯದು.
ತುಳಸಿ ಪೂಜೆಗೆ ಶುಭ ಸಮಯ:
ಈ ವರ್ಷ ಸಂಜೆ 06:30ರಿಂದ 08:40ರವರೆಗೆ ತುಳಸಿ ಪೂಜೆಗೆ ಸಮಯ ತುಂಬಾ ಪ್ರಾಶಸ್ತ್ಯವಾಗಿದೆ.
ತುಳಸಿ ಪೂಜೆಯಲ್ಲಿ ನೇವೇದ್ಯ:
ತುಳಸಿ ಪೂಜೆಯಲ್ಲಿ ನೇವೇದ್ಯಕ್ಕಾಗಿ ಹೆಸರುಬೇಳೆ ಕೋಸಂಬರಿ (ಉಪ್ಪು ಹಾಕದೆ) ಮತ್ತು ಬೆಲ್ಲದ ಪಾನಕ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.
ತುಳಸಿ ವಿವಾಹದಂದು 3 ವಸ್ತುಗಳನ್ನು ತಂದರೆ ಶುಭ:
1) ಅರಿಶಿನದ ಕೊಂಬು:
ಮದುವೆಯಲ್ಲಿ ಅತಿ ಮುಖ್ಯವಾಗಿ ಬಳಸಲ್ಪಡುವ ವಸ್ತು ಅರಿಶಿನದ ಕೊಂಬು. ತುಳಸಿ ವಿವಾಹದ ದಿನ ಮನೆಗೆ ಅರಿಶಿನದ ಕೊಂಬನ್ನು ಮನೆಗೆ ತರುವುದರಿಂದ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ದೂರವಾಗಿ ಶಾಂತಿ, ನೆಮ್ಮದಿ ನೆಲಸುತ್ತದೆ. ಮನೆಯಲ್ಲಿ ಸುಖ-ಸಮೃದ್ಧಿಯನ್ನು ಕಾಣಬಹುದು. ಹಣಕಾಸಿನ ಸಮಸ್ಯೆಗಳು ಬಗೆಹರಿದು ಸಾಲಬಾಧೆಯಿಂದ ಮುಕ್ತಿ ಹೊಂದುವಿರಿ.
2) ಮೊಸರು:
ತುಳಸಿ ವಿವಾಹದಂದು ಮೊಸರನ್ನು ಮನೆಗೆ ತರುವುದರಿಂದ ವೃತ್ತಿ, ವ್ಯಾಪಾರ, ವ್ಯವಹಾರದಲ್ಲಿ ಅಭಿವೃದ್ಧಿ ಕಂಡು ಬರುತ್ತದೆ. ತಡೆಯಾಗಿದ್ದ ಹಣಕಾಸು ಕೈ ಸೇರಲಿದ್ದು ಮನೆಯಲ್ಲಿ ಸಂಪತ್ತು ಹೆಚ್ಚಾಗಲಿದೆ. ಕುಟುಂಬದಲ್ಲಿ ಸಕಾರಾತ್ಮಕತೆ ಹೆಚ್ಚಲಿದೆ.
3) ಹೆಸರುಕಾಳು:
ತುಳಸಿ ವಿವಾಹದ ದಿನ ಹೆಸರು ಕಾಲನ್ನು ಮನೆಗೆ ತರುವುದರಿಂದ ವೈಯಕ್ತಿಕ ಜೀವನ, ವೃತ್ತಿ ಬದುಕು, ವ್ಯಾಪಾರ-ವ್ಯವಹಾರ, ಸಂತಾನ, ಹಣಕಾಸು ಎಲ್ಲಾ ರೀತಿಯ ಲಾಭಗಳು ದೊರೆಯುತ್ತವೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.