ವಾಸ್ತು ಶಾಸ್ತ್ರವು ಪೊರಕೆಗಳಿಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ವಿವರಿಸುತ್ತದ. ಈ ವಾಸ್ತು ನಿಯಮಗಳನ್ನು ನಿರ್ಲಕ್ಷಿಸಿದರೆ ಅವು ದುಬಾರಿಯಾಗಿ ಪರಿಣಮಿಸಬಹುದು. ಪೊರಕೆಗಳನ್ನು ಬಳಸುವುದು, ಇಡುವುದು, ಖರೀದಿಸುವುದು ಎಲ್ಲದಕ್ಕೂ ಅದರದೇ ಆದ ನೀತಿ ನಿಯಮಗಳನ್ನು ವಾಸ್ತುವಿನಲ್ಲಿ ಹೇಳಲಾಗಿದೆ. ಪೊರಕೆ ಲಕ್ಷ್ಮಿ ದೇವಿಯ ಸಂಕೇತವಾಗಿದೆ. ಹಾಗಾಗಿ ಅದನ್ನು ಅಗೌರವಗೊಳಿಸುವುದು ಎಂದರೆ ಲಕ್ಷ್ಮೀ ದೇವಿಗೆ ಅವಮಾನ ಮಾಡುವುದು ಎಂದೇ ಅರ್ಥ.
ಯಾವ ರೀತಿಯ ಪೊರಕೆಗಳನ್ನು ಬಳಸಬಾರದು :
ಸವೆದ ಅಥವಾ ಮುರಿದ ಪೊರಕೆಯನ್ನು ಬಳಸಬಾರದು. ಇಂಥಹ ಪೊರಕೆಯನ್ನು ಬಳಸಿದರೆ ಮನೆಗೆ ಬಡತನವನ್ನು ಆಹ್ವಾನಿಸಿದ ಹಾಗೆ. ಪೊರಕೆ ಸಂತೋಷ, ಸಂಪತ್ತು ಮತ್ತು ಸಮೃದ್ಧಿಯ ದೇವತೆ ಲಕ್ಷ್ಮಿ ದೇವಿಯನ್ನು ಸಂಕೇತಿಸುತ್ತದೆ. ಆದ್ದರಿಂದ, ಮುರಿದ, ಸವೆದ ಅಥವಾ ಪೊರಕೆಯನ್ನು ಬಳಸುವುದು ಎಂದಾದರೆ ಅದು ಲಕ್ಷ್ಮಿ ದೇವಿಗೆ ಅವಮಾನ ಮಾಡಿದ ಹಾಗೆ.
ಇದನ್ನೂ ಓದಿ : 500 ವರ್ಷಗಳ ಬಳಿಕ ಶನಿ ವಕ್ರಿ: ಈ ರಾಶಿಯವರ ಜೀವನದಲ್ಲಿ ಸುವರ್ಣಯುಗ, ರಾಜವೈಭೋಗ
ಮನೆಯಲ್ಲಿ ಪೊರಕೆಯನ್ನು ಯಾವ ದಿಕ್ಕಿನಲ್ಲಿ ಇಡಬೇಕು ?:
ಪೊರಕೆಯನ್ನು ಅವ್ಯವಸ್ಥಿತವಾಗಿ ಇಡುವುದರಿಂದ ಆರ್ಥಿಕ ನಷ್ಟವಾಗಬಹುದು. ಯಾವಾಗಲೂ ಪೊರಕೆಯನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ. ದಕ್ಷಿಣ ಅಥವಾ ನೈಋತ್ಯ ದಿಕ್ಕು ಪೊರಕೆಯನ್ನು ಇಡಲು ಸರಿಯಾದ ದಿಕ್ಕು. ಪೊರಕೆಯನ್ನು ಎಂದಿಗೂ ನಿಲ್ಲಿಸಿ ಇಡಬಾರದು, ಪೊರಕೆಯನ್ನು ಮಲಗಿಸಿಯೇ ಇಡಬೇಕು.
ಯಾವ ದಿನ ಮತ್ತು ದಿನಾಂಕದಂದು ಹಳೆ ಪೊರಕೆಯನ್ನು ಎಸೆಯಬೇಕು? :
ವಾಸ್ತು ಪ್ರಕಾರ, ಪೊರಕೆ ಹಾನಿಗೊಳಗಾದಾಗಲೆಲ್ಲಾ ಅದನ್ನು ತಕ್ಷಣ ಬದಲಾಯಿಸಿ. ಹಾನಿಗೊಳಗಾದ ಪೊರಕೆಯನ್ನು ಯಾವ ದಿನ ಎಸೆಯಬೇಕು ಎಂಬುದರ ಕುರಿತು ನಿಯಮಗಳನ್ನು ತಿಳಿದುಕೊಳ್ಳಿ. ಹಾಳಾದ ಪೊರಕೆಯನ್ನು ಎಸೆಯುವುದಾದರೆ ಶನಿವಾರವೇ ಸೂಕ್ತ. ಅಮಾವಾಸ್ಯೆಯ ದಿನ ಕೂಡಾ ಹಳೆಯ ಪೊರಕೆಯನ್ನು ಮನೆಯಿಂದ ಹೊರಗೆ ಹಾಕಬಹುದು. ಹೋಳಿಕಾ ದಹನದ ನಂತರ ಅಥವಾ ಗ್ರಹಣ ಮುಗಿದ ನಂತರ ಪೊರಕೆಯನ್ನು ಎಸೆಯಬಹುದು. ಗುರುವಾರ ಅಥವಾ ಶುಕ್ರವಾರ ಅಥವಾ ಏಕಾದಶಿ ತಿಥಿಯಂದು ಪೊರಕೆಯನ್ನು ಎಸೆಯಬಾರದು. ಇದು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ : ಶರದ್ ಪೂರ್ಣಿಮೆಯಂದು ಈ ಕೆಲಸ ಮಾಡಿದ್ರೆ ವರ್ಷವಿಡೀ ಶ್ರೀಮಂತರಾಗಿರುತ್ತೀರಿ: ತಾಯಿ ಲಕ್ಷ್ಮಿದೇವಿ ನಿಮ್ಮ ಕೈಬಿಡಲ್ಲ!!
ಶನಿವಾರ ಪೊರಕೆ ಖರೀದಿಸುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಹಳೆಯ ಪೊರಕೆಯನ್ನು ಹೊಸದರೊಂದಿಗೆ ಬದಲಾಯಿಸಬೇಕಾದರೆ ಶನಿವಾರ ಅದಕ್ಕೆ ಉತ್ತಮ ದಿನವಾಗಿರುತ್ತದೆ. ಶನಿವಾರ ಹೊಸ ಪೊರಕೆಯನ್ನು ಬಳಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಯಾಗುತ್ತದೆ. ಕೃಷ್ಣ ಪಕ್ಷದಲ್ಲಿ ಅದನ್ನು ಖರೀದಿಸುವುದು ಹೆಚ್ಚು ಶುಭವೆಂದು ಪರಿಗಣಿಸಲಾಗುತ್ತದೆ. ಶುಕ್ಲ ಪಕ್ಷದಲ್ಲಿ ಪೊರಕೆ ಖರೀದಿಸುವುದು ದುರದೃಷ್ಟವನ್ನು ತರುತ್ತದೆ ಎಂದು ಪರಿಗಣಿಸಲಾಗುತ್ತದೆ.
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .)









