)
Budhaditya Rajyoga, Dhana Yoga, Bhadra Raja Yoga, Sama Yoga, Varishtha Yoga Before Mahanavami: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರ ನವರಾತ್ರಿಯಲ್ಲಿ ಮಹಾನವಮಿಗೂ ಮೊದಲು ಧನಯೋಗಗಳು ಎಂದೇ ಬಣ್ಣಿಸಲಾಗುವ ಬುಧಾದಿತ್ಯ ರಾಜಯೋಗ, ಧನಯೋಗ, ಭದ್ರ ರಾಜಯೋಗ, ಸಮಯೋಗ, ವರಿಷ್ಠ ಯೋಗಗಳಂತ 'ಐದು ಮಹಾ ಯೋಗಗಳ' ಅದ್ಭುತ ಸಂಯೋಜನೆ ಏರ್ಪಡಲಿದೆ. ಇದರಿಂದ ಮಹಾನವಮಿಗೂ ಮೊದಲೇ ಕೆಲವು ರಾಶಿಯವರ ಬದುಕಿನಲ್ಲಿ ಮಹಾ ಬದಲಾವಣೆಗಳು ಸಂಭವಿಸಲಿದ್ದು, ಅದೃಷ್ಟ ಖುಲಾಯಿಸಲಿದೆ ಎನ್ನಲಾಗುತ್ತಿದೆ.
ಪಂಚ ಮಹಾಯೋಗಗಳ ನಿರ್ಮಾಣ:
ಈ ನವರಾತ್ರಿಯಲ್ಲಿ ಗ್ರಹಗಳ ರಾಜಕುಮಾರನಾದ ಬುಧ ತನ್ನ ಮೂಲ ತ್ರಿಕೋಣ ರಾಶಿಚಕ್ರ ಕನ್ಯಾ ರಾಶಿಯಲ್ಲಿ ವಿರಾಜಮಾನನಾಗಿದ್ದು ಭದ್ರ ರಾಜಯೋಗದ ಜೊತಗೆ ಸಮಯೋಗ, ವರಿಷ್ಠಯೋಗಗಳನ್ನು ನಿರ್ಮಿಸಿದ್ದಾನೆ. ಇದಲ್ಲದೆ, ಬುಧ ಸೂರ್ಯರ ಯುತಿಯಿಂದ ಬುಧಾದಿತ್ಯ ರಾಜಯೋಗ, ಧನ ಯೋಗಗಳ ರಚನೆಯೂ ಆಗಲಿದೆ.
ನವರಾತ್ರಿಯಲ್ಲಿ ತಾಯಿ ದುರ್ಗೆಯ ಆಶೀರ್ವಾದ, ಕುಬೇರ ಸಂಪತ್ತು:
ನವರಾತ್ರಿಯಲ್ಲಿ ಮಹಾನವಮಿಗೂ ಮೊದಲೇ ಈ ಪಂಚ ಮಹಾಯೋಗಗಳ ಸಮಾಗಮದ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ನಾಲ್ಕು ರಾಶಿಯವರಿಗೆ ಇದರಿಂದ ಹೆಚ್ಚು ಪ್ರಯೋಜನವಾಗಲಿದೆ ಎನ್ನಲಾಗುತ್ತಿದೆ. ತಾಯಿ ದುರ್ಗೆಯ ವಿಶೇಷ ಆಶೀರ್ವಾದದಿಂದ ಜೀವನದಲ್ಲಿ ಪ್ರಗತಿಯ ಹಾದಿ ತೆರೆಯಲಿದ್ದು, ಸಾಕ್ಷಾತ್ ಕುಬೇರನ ಸಂಪತ್ತೇ ಕೈ ಸೇರಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ವೃಷಭ ರಾಶಿ:
ನವರಾತ್ರಿಯಲ್ಲಿ ಮಹಾ ಯೋಗಗಳ ಸಮಾಗಮದಿಂದಾಗಿ ಈ ರಾಶಿಯ ನಿರುದ್ಯೋಗಿಗಳಿಗೆ ನೆಚ್ಚಿನ ಉದ್ಯೋಗ ದೊರೆಯಲಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಶುಭ ವಾರ್ತೆ ಸ್ವೀಕರಿಸುವಿರಿ. ಸರ್ಕಾರಿ ನೌಕರರಿಗೆ ಭಾರೀ ಪ್ರಯೋಜನವಿದ್ದು, ಹೊಸ ಆದಾಯದ ಮೂಲಗಳು ವೃದ್ದಿಯಾಗಿ ಸಂಪತ್ತಿನ ಸುರಿಮಳೆಯೇ ಸುರಿಯಲಿದೆ.
ಮಿಥುನ ರಾಶಿ:
ಪಂಚ ಮಹಾಯೋಗಗಳ ಸಂಯೋಜನೆಯಿಂದ ಈ ರಾಶಿಯವರಿಗೆ ಸಾಕ್ಷಾತ್ ದುರ್ಗೆಯ ವಿಶೇಷ ಆಶೀರ್ವಾದ ಲಭಿಸಲಿದೆ. ವ್ಯವಹಾರದಲ್ಲಿ ಆದಾಯ ದುಪ್ಪಟ್ಟಾಗಲಿದೆ. ಧನಯೋಗದಿಂದ ಹೆಚ್ಚಿನ ಪ್ರಯೋಜನ ಈ ರಾಶಿಯವರಿಗಿದ್ದು ಆಕಸ್ಮಿಕ ಧನದ ಹರಿವು ಹೆಚ್ಚಾಗಿ ಆಸ್ತಿ ಖರೀದಿ ಯೋಗವೂ ಇದೆ.
ಕನ್ಯಾ ರಾಶಿ:
ನವರಾತ್ರಿಯಲ್ಲಿ ದುರ್ಗಾ ಮಾತೆಯ ವಿಶೇಷ ದಯೆಯಿಂದ ಈ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಭಾರೀ ಪ್ರಯೋಜನವಾಗಲಿದೆ. ವೃತ್ತಿಪರರಿಗೆ ಬಡ್ತಿ ಸಂಭವವೂ ಇದ್ದು ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ಜೀವನದಲ್ಲಿ ಕಷ್ಟಗಳು ನಿವಾರಣೆಯಾಗಿ ಸುಖ-ಸಂಪತ್ತು ವೃದ್ಧಿಯಾಗಲಿದೆ.
ತುಲಾ ರಾಶಿ:
ನವರಾತ್ರಿಯಲ್ಲಿ ಐದು ಮಹಾ ಯೋಗಗಳ ಸಮಾಗಮದಿಂದಾಗಿ ಈ ರಾಶಿಯವರಿಗೆ ದುರ್ಗಾ ದೇವಿಯು ಆಶೀರ್ವಾದ ಮಾಡಲಿದ್ದಾಳೆ. ಸಾಕ್ಷಾತ್ ಕುಬೇರನ ಅನುಗ್ರಹವೇ ಇವರಿಗಿದ್ದು ಸ್ವಂತ ಮನೆ, ವಾಹನ ಖರೀದಿಸುವ ಸೌಭಾಗ್ಯ ಇವರ ಪಾಲಿಗಿದೆ. ಮನೆಯಲ್ಲಿ ದೀರ್ಘ ಸಮಯದಿಂದ ಅಡೆತಡೆ ಎದುರಿಸುತ್ತಿರುವ ಮಂಗಳ ಕಾರ್ಯ ಜರುಗುವ ನಿರೀಕ್ಷೆಯೂ ಇದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.