)
Surya Budh Yuti Budhaditya Rajayoga: ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಅಕ್ಟೋಬರ್ ಅಂತ್ಯದಲ್ಲಿ ಗ್ರಹಗಳ ರಾಜಕುಮಾರ, ಬುದ್ದಿ, ಮಾತು, ವ್ಯವಹಾರದ ಅಂಶನಾದ ಬುಧ ಗ್ರಹ ಮಂಗಳನ ಅಧಿಪತ್ಯದ ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದಾನೆ. ನವೆಂಬರ್ 16, 2025ರಂದು ಆತ್ಮವಿಶ್ವಾಸ, ನಾಯಕತ್ವ, ಬೌದ್ದಿಕ ತೇಜಸ್ಸನ್ನು ನೀಡುವ ಸೂರ್ಯ ದೇವ ಕೂಡ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಮಂಗಳನ ರಾಶಿಚಕ್ರ ಚಿಹ್ನೆಯಲ್ಲಿ ಬುಧ ಸೂರ್ಯರ ಯುತಿ ನಿರ್ಮಾಣವಾಗಲಿದೆ. ಇದರಿಂದಾಗಿ ಬುಧಾದಿತ್ಯ ರಾಜಯೋಗ ಸೃಷ್ಟಿಯಾಗಲಿದ್ದು, ಕೆಲವರ ಲಕ್ ಬದಲಾಗಲಿದೆ. ಬುಧಾದಿತ್ಯ ರಾಜಯೋಗ ಮೇಷದಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಲು ಮುಂದೆ ಓದಿ...
ಮೇಷ ರಾಶಿ:
ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಅಷ್ಟು ಉತ್ತಮವಾಗಿಲ್ಲ. ಉದ್ಯೋಗ ರಂಗದಲ್ಲಿ ಕಿರಿಕಿರಿ ಹೆಚ್ಚಾಗಬಹುದು. ನಿಮ್ಮ ಕಷ್ಟಕ್ಕೆ ಸರಿಯಾದ ಪ್ರತಿಫಲ ದೊರೆಯದೆ ಪರಿತಪಿಸುವ ಸಮಯ. ಯಾವುದಕ್ಕೂ ಧೃತಿಗೆಡದೆ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ. ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ.
ವೃಷಭ ರಾಶಿ:
ಬುಧ ಆದಿತ್ಯ ಯುತಿಯಿಂದಾಗಿ ಈ ರಾಶಿಯವರಲ್ಲಿ ಸಾಹಸ ಮನೋಭಾವ ಬೆಳೆಯಲಿದೆ. ವೃತ್ತಿ-ವ್ಯವಹಾರ ಮಾತ್ರವಲ್ಲ, ವೈಯಕ್ತಿಕ ಬದುಕಿನಲ್ಲಿಯೂ ಸಹ ಎಂತಹುದ್ದೆ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ನಿಮ್ಮಲ್ಲಿ ಹೆಚ್ಚಾಗಲಿದೆ. ನ್ಯಾಯಾಲಯ ಪ್ರಕರಣಗಳಲ್ಲಿ ನಿಮ್ಮ ಪರವಾದ ತೀರ್ಪು ಬರಬಹುದು.
ಮಿಥುನ ರಾಶಿ:
ಬುಧಾದಿತ್ಯ ರಾಜಯೋಗದಿಂದ ಈ ರಾಶಿಯವರಲ್ಲಿ ಸಂವಹನ ಕೌಶಲ್ಯ ವೃದ್ಧಿಯಾಗಲಿದೆ. ನಿಮ್ಮ ಮಾತನ್ನೇ ಬಂಡವಾಳವಾಗಿ ಬಳಸಿಕೊಳ್ಳುವುದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯುವಿರಿ. ವ್ಯವಹಾರದಲ್ಲಿ ಬಂಪರ್ ಅವಕಾಶಗಳಿವೆ. ವ್ಯವಹಾರ ಸಂಬಂಧಿತ ಪ್ರವಾಸಗಳು ಲಾಭದಾಯಕವಾಗಿರಲಿವೆ. ಸಮಾಜದಲ್ಲಿ ನಿಮ್ಮ ಕೀರ್ತಿ ವೃದ್ಧಿಯಾಗಲಿದೆ.
ಕಟಕ ರಾಶಿ:
ಈ ರಾಶಿಯ ವೃತ್ತಿಪರರಿಗೆ ಬುಧಾದಿತ್ಯ ರಾಜಯೋಗವು ಅತ್ಯುತ್ತಮವಾದ ಸಮಯವಾಗಿದೆ. ನವದಂಪತಿಗಳು ಮಕ್ಕಳ ಸಂತಸವನ್ನು ಪಡೆಯಬಹುದು. ಪ್ರೀತಿ-ಪ್ರೇಮದಲ್ಲಿರುವವರು ತಮ್ಮ ಸಂಬಂಧವನ್ನು ಮದುವೆ ಹಂತಕ್ಕೆ ಕೊಂಡೊಯ್ಯಲು ಸರಿಯಾದ ಸಮಯ. ಅದೃಷ್ಟದ ಬಲದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು.
ಸಿಂಹ ರಾಶಿ:
ಬುಧ-ಸೂರ್ಯರ ಸಂಯೋಗವು ಈ ರಾಶಿಯವರಿಗೆ ಸುವರ್ಣ ಸಮಯ ಎಂತಲೇ ಹೇಳಬಹುದು. ಈ ವೇಳೆ ಉದ್ಯೋಗ ರಂಗದಲ್ಲಿ ನಿಮ್ಮ ಕಾರ್ಯವೈಖರಿ ಬೇರೆಯವರನ್ನು ಮಂತ್ರ ಮುಗ್ಧರನ್ನಾಗಿಸಲಿದೆ. ಜಂಟಿ ವ್ಯವಹಾರಗಳನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಅತ್ಯುತ್ತಮ ಸಮಯ ಇದಾಗಿದ್ದು, ಭಾರೀ ಆದಾವನ್ನು ಗಳಿಸುವಿರಿ.
ಕನ್ಯಾ ರಾಶಿ:
ಬುಧ ಆದಿತ್ಯ ಸಂಯೋಗವು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ದೀರ್ಘ ಸಮಯದಿಂದ ಕುಂಠಿತಗೊಂಡಿದ್ದ ಕೆಲಸಗಳಲ್ಲಿ ವೇಗ ಕಂಡು ಬರಲಿದೆ. ಚಿಲ್ಲರೆ ವ್ಯಾಪಾರದಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವಿರಿ. ವೈವಾಹಿಕ ಬದುಕಿನಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳು ತಹಬದಿಗೆ ಬರಲಿವೆ.
ತುಲಾ ರಾಶಿ:
ಬುಧಾದಿತ್ಯ ರಾಜಯೋಗವು ಈ ರಾಶಿಯವರ ವ್ಯಕ್ತಿತ್ವವನ್ನು ವಜ್ರದಂತೆ ಹೊಳೆಯುವಂತೆ ಮಾಡಲಿದೆ. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಸಾಲಭಾದೆಯಿಂದ ಪರಿಹಾರದ ಜೊತೆಗೆ ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಮಕ್ಕಳ ಶಿಕ್ಷಣ, ಮದುವೆಗಾಗಿ ಹೆಚ್ಚಿನ ಹಣ ವ್ಯಯಿಸಬಹುದು.
ವೃಶ್ಚಿಕ ರಾಶಿ:
ಬುಧ ಆದಿತ್ಯ ಒಟ್ಟಿಗೆ ಕೂಡುವುದರಿಂದ ಈ ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ವೃತ್ತಿ ಬದುಕಿನಲ್ಲಿ ಉತ್ಪಾದಕತೆ ಸುಧಾರಿಸುವುದಲ್ಲದೆ, ನಿಮ್ಮ ಸ್ಥಾನಮಾನವೂ ಹೆಚ್ಚಾಗಲಿದೆ. ವ್ಯವಹಾರದಲ್ಲಿ ನಿರೀಕ್ಷೆಗಿಂತಲೂ ಅಧಿಕ ಲಾಭವನ್ನು ಪಡೆಯುವಿರಿ. ಸಾಲದಿಂದ ಮುಕ್ತಿ ಹೊಂದುವ ಸುವರ್ಣ ಸಮಯ ಇದಾಗಿದ್ದು ಜೀವನದಲ್ಲಿ ಸುಖ-ಸೌಕರ್ಯಗಳ ಜೊತೆಗೆ ಸಂತೋಷವೂ ಹೆಚ್ಚಾಗಲಿವೆ.
ಧನು ರಾಶಿ:
ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಮಿಶ್ರ ಫಲವನ್ನು ನೀಡಲಿದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು, ಗುರಿ ತಲುಪಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟುಗಳನ್ನು ತಪ್ಪಿಸಲು ಅಧಿಕ ಖರ್ಚಿಗೆ ಕಡಿವಾಣ ಹಾಕಿ. ವ್ಯವಹಾರದಲ್ಲಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿದೆ.
ಮಕರ ರಾಶಿ:
ಬುಧ ಸೂರ್ಯರ ಸಂಯೋಗದಿಂದ ಈ ರಾಶಿಯವರಿಗೆ ಕೌಟುಂಬಿಕ ಬದುಕು ಉತ್ತಮಗೊಳ್ಳಲಿದೆ. ವೃತ್ತಿ ಬದುಕಿನಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳುವ ಸಮಯ. ಆಸ್ತಿ, ಭೂಮಿ ಖರೀದಿಸಲು ಅತ್ಯುತ್ತಮ ಸಮಯ ಇದಾಗಿದೆ. ಸಂಗಾತಿಗಾಗಿ ಚಿನ್ನಾಭರಣ ಖರೀದಿಸುವ ಅವಕಾಶಗಳು ಇವೆ.
ಕುಂಭ ರಾಶಿ:
ಬುಧಾದಿತ್ಯ ರಾಜಯೋಗದಿಂದಾಗಿ ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಪ್ರಗತಿಯ ಹಾದಿ ಸುಗಮಗೊಳ್ಳಲಿದೆ. ವ್ಯವಹಾರ ಸಂಬಂಧಿತ ಪ್ರವಾಸಗಳಿಂದ ಅಧಿಕ ಲಾಭವನ್ನು ನಿರೀಕ್ಷಿಸಬಹುದು. ಅವಿವಾಹಿತರಿಗೆ ವಿವಾಹ ಯೋಗವಿದೆ. ಕುಟುಂಬದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ.
ಮೀನ ರಾಶಿ:
ಬುಧ ಆದಿತ್ಯ ಸಂಯೋಗದಿಂದ ನಿರ್ಮಾಣವಾಗಲಿರುವ ರಾಜಯೋಗವು ಈ ರಾಶಿಯವರಿಗೆ ಹೊಸ ಮನೆ, ಭೂಮಿ ಖರೀದಿಸುವ ಯೋಗವನ್ನು ನೀಡಲಿದೆ. ಕುಟುಂಬದಲ್ಲಿ ಪ್ರೀತಿ-ವಾತ್ಸಲ್ಯ ಹೆಚ್ಚಾಗಲಿದೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ಯೋಜಿಸಬಹುದು. ಕೌಟುಂಬಿಕ ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.