ಇದೊಂದು ವಸ್ತುವನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡರೆ ಸಾಲವೆಲ್ಲಾ ತೀರುವುದು !ಹರಿದು ಬರುವುದು ಧನ ಸಂಪತ್ತು

ಏಲಕ್ಕಿಗೆ ಸಂಬಂಧಿಸಿದ ಕೆಲವು ವಿಶೇಷ ಪರಿಹಾರಗಳು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈ ಪರಿಹಾರಗಳನ್ನು ಅಳವಡಿಸಿಕೊಳ್ಳುವುದರಿಂದ ಅದೃಷ್ಟದ ಬಾಗಿಲು ತೆರೆಯುವುದು. 

Written by - Ranjitha R K | Last Updated : Jun 20, 2025, 04:22 PM IST
  • ಶುಕ್ರವಾರ ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿಗೆ ಸಮರ್ಪಿತ
  • ಲಕ್ಷ್ಮಿ ದೇವಿಯನ್ನು ವಿಧಿ ವಿಧಾನಗಳೊಂದಿಗೆ ಪೂಜಿಸುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ
  • ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾದ ವಿಶೇಷ ಪರಿಹಾರ
ಇದೊಂದು ವಸ್ತುವನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡರೆ ಸಾಲವೆಲ್ಲಾ ತೀರುವುದು !ಹರಿದು ಬರುವುದು ಧನ ಸಂಪತ್ತು

ಬೆಂಗಳೂರು : ಹಿಂದೂ ಧರ್ಮದಲ್ಲಿ, ಶುಕ್ರವಾರವನ್ನು ಸಂಪತ್ತಿನ ದೇವತೆಯಾದ ಲಕ್ಷ್ಮೀದೇವಿಗೆ  ಸಮರ್ಪಿತವೆಂದು ಪರಿಗಣಿಸಲಾಗುತ್ತದೆ. ಈ ದಿನದಂದು ಲಕ್ಷ್ಮಿ ದೇವಿಯನ್ನು ವಿಧಿ ವಿಧಾನಗಳೊಂದಿಗೆ  ಪೂಜಿಸುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಅಲ್ಲದೆ ಜೀವನದಲ್ಲಿ ಸಂತೋಷ, ಸಮೃದ್ಧಿ ನೆಲೆಯಾಗುತ್ತದೆ.  ಜೀವನದಲ್ಲಿ ಲಕ್ಷ್ಮೀ ದೇವಿಯ ಕೃಪಾ ದೃಷ್ಟಿ ಇರಬೇಕಾದರೆ ಏನೆಲ್ಲಾ ಮಾಡಬೇಕು ಎನ್ನುವುದನ್ನು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. 

Add Zee News as a Preferred Source

ಧರ್ಮ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಪರಿಹಾರಗಳಲ್ಲಿ ಏಲಕ್ಕಿಗೆ ಸಂಬಂಧಿಸಿದ ಕೆಲವು ವಿಶೇಷ ಪರಿಹಾರಗಳು ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ, ಅದೃಷ್ಟದ ಬಾಗಿಲು ತೆರೆದು ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುವುದು ಎಂದು ಹೇಳಲಾಗಿದೆ. 

ಇದನ್ನೂ ಓದಿ : ಈ ದಿನಾಂಕದಲ್ಲಿ ಜನಿಸಿದವರು ಶಿವನ ಕೃಪೆಯುಳ್ಳವರು... ಜೀವನದಲ್ಲಿ ಎಂದಿಗೂ ಬರೋದೇ ಇಲ್ಲ ದುಡ್ಡಿನ ಕೊರತೆ! ಸದಾ ಇವರ ಜೊತೆ ನಿಂತು ಕಷ್ಟ ಕಳೆದು ಸುಖ ಕೊಡುವ ಪರಮೇಶ್ವರ

ಸಂಪತ್ತನ್ನು ಹೆಚ್ಚಿಸಲು  :
ನೀವು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದಾರೆ ಅಥವಾ ಎಷ್ಟೇ ಹಣ ಸಂಪಾದಿಸಿದರೂ ಕೈಯ್ಯಲ್ಲಿ ಹಣ ಉಳಿಯುವುದಿಲ್ಲ ಎಂದಾದರೆ ಶುಕ್ರವಾರ ಈ ಸರಳ ಪರಿಹಾರವನ್ನು ಮಾಡಬಹುದು. ಶುಕ್ರವಾರ ಬೆಳಿಗ್ಗೆ ಸ್ನಾನ ಮಾಡಿ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಲಕ್ಷ್ಮೀ ದೇವಿಯ ಮುಂದೆ ದೀಪ ಹಚ್ಚಿ ಕ್ರಮಬದ್ಧವಾಗಿ ಪೂಜಿಸಿ. ಏಲಕ್ಕಿಯ ಮೇಲೆ ಅರಿಶಿನ ಮತ್ತು ಕುಂಕುಮ ಹಚ್ಚಿ  ಲಕ್ಷ್ಮೀಯ ಪಾದಗಳಿಗೆ ಅರ್ಪಿಸಿ. ಸಂಜೆ ಪೂಜೆಯ ನಂತರ, ಆ ಏಲಕ್ಕಿಗಳನ್ನು ಸ್ವಚ್ಛವಾದ ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ತಿಜೋರಿಯಲ್ಲಿ ಅಥವಾ ಹಣವನ್ನು ಇಡುವ ಸ್ಥಳದಲ್ಲಿ ಇರಿಸಿ. ಇಷ್ಟು ಮಾಡಿದರೆ ನಿಮ್ಮ ಜೀವನದಲ್ಲಿ ಸಂಪತ್ತು ವೃದ್ದಿಯಾಗುವುದಕ್ಕೆ ಆರಂಭವಾಗುವುದು.

ಇದನ್ನೂ ಓದಿ : ಆಷಾಢ ಮಾಸ ಈ ರಾಶಿಯವರ ಬಾಳಲ್ಲಿ ತರುವುದು ಗುರುಬಲ! ಅಷ್ಟೈಶ್ವರ್ಯದ ಜೀವನ ಇಲ್ಲಿಂದಲೇ ಆರಂಭ! ಬೃಹಸ್ಪತಿಯೇ ಕರುಣಿಸುವ ಹಣ, ಕೀರ್ತಿ, ಯಶಸ್ಸು, ನೆಮ್ಮದಿ

ಸಾಲದಿಂದ ಮುಕ್ತಿ ಪಡೆಯಲು :
ದೀರ್ಘಕಾಲದವರೆಗೆ ಸಾಲದ ಹೊರೆಯಿಂದ ತೊಂದರೆಗೊಳಗಾಗಿದ್ದರೆ, ಶುಕ್ರವಾರ ಲಕ್ಷ್ಮೀ ದೇವಿಯನ್ನು ಕ್ರಮಬದ್ಧವಾಗಿ ಪೂಜಿಸಿ  5 ಏಲಕ್ಕಿಗಳನ್ನು ಅರ್ಪಿಸಿ. ಸಂಜೆ ಪೂಜೆಯ ನಂತರ, ಏಲಕ್ಕಿಯನ್ನು ತೆಗೆದುಕೊಂಡು ನಿಮ್ಮ ಜೇಬಿನಲ್ಲಿ ಅಥವಾ ಪರ್ಸ್‌ನಲ್ಲಿ ಇರಿಸಿ. ಈ ಪರಿಹಾರ ಕಾರ್ಯ ಮಾಡುವುದರಿದ ಸಾಲದ ಮೊತ್ತ ಎಷ್ಟೇ ದೊಡ್ಡದಾಗಿದ್ದರೂ ತೀರಿ ಹೋಗುವುದು. 

ಅದೃಷ್ಟವನ್ನು ಬೆಳಗಿಸಲು  :
ನಿಮ್ಮ ಜೀವನದಲ್ಲಿ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೆ ಶುಕ್ರವಾರ  5 ಅಥವಾ 7 ಹಸಿರು ಏಲಕ್ಕಿಗಳನ್ನು ದಿಂಬಿನ ಕೆಳಗೆ ಇಟ್ಟು ಸಂಜೆ ಮಲಗಿ. ಮರುದಿನ ಬೆಳಿಗ್ಗೆ, ಆ ಏಲಕ್ಕಿಗಳನ್ನು ಹರಿಯುವ ನೀರಿನಲ್ಲಿ ಬಿಡಿ. ಸತತ 7 ಶುಕ್ರವಾರಗಳ ಕಾಲ ಹೀಗೆ ಮಾಡುತ್ತಾ ಬಂದರೆ ಅರ್ಧಕ್ಕೆ ನಿಂತಿರುವ ಕೆಲಸ ಪೂರ್ಣವಾಗುವುದು.

ಇದನ್ನೂ ಓದಿ : ದೇಹದ ಈ ವಿಶೇಷ ಭಾಗಕ್ಕೆ ಹಲ್ಲಿ ಬಿದ್ದರೆ ಅದರಷ್ಟು ಅದೃಷ್ಟ ಜಗತ್ತಲ್ಲಿ ಬೇರೇನೂ ಇರಲ್ಲ... ಬದುಕಲ್ಲಿ ರಾಜಮನೆತನದ ಸುಖ ಅನುಭವಿಸುವ ಶುಭಶಕುನವದು

ಯಶಸ್ಸನ್ನು ಪಡೆಯಲು :
ಜೀವನದಲ್ಲಿ ಯಶಸ್ಸು ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧಿಸಲು, ಶುಕ್ರವಾರ ಸ್ನಾನ ಮಾಡಿ ಮತ್ತು ಶುದ್ಧವಾದ ಬಟ್ಟೆಗಳನ್ನು ಧರಿಸಿ, ವಿಶೇಷವಾಗಿ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭ. ಲಕ್ಷ್ಮಿ ದೇವಿಗೆ 7 ಏಲಕ್ಕಿಗಳನ್ನು ಅರ್ಪಿಸಿ ಮತ್ತು 'ಓಂ ಶ್ರೀಮ್ ಹ್ರೀಮ್ ಶ್ರೀಮ್ ಮಹಾಲಕ್ಷ್ಮಿಯೈ ನಮಃ' ಎಂಬ ಮಂತ್ರವನ್ನು 108 ಬಾರಿ ಪಠಿಸಿ. ಪೂಜೆಯ ನಂತರ, ಈ ಏಲಕ್ಕಿಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಕೊಳ್ಳಿ ಮತ್ತು ನಿಮ್ಮ ಕೆಲಸದ ಸ್ಥಳದಲ್ಲಿ ಅಥವಾ ಕಚೇರಿಯಲ್ಲಿ ಇರಿಸಿ. ಈ ಪರಿಹಾರವು ಯಶಸ್ಸು ಮತ್ತು ಪ್ರಗತಿಗೆ ದಾರಿ ಮಾಡಿಕೊಡುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News