)
Chanakya Niti: ಆಚಾರ್ಯ ಚಾಣಕ್ಯರು ನೀತಿ ಶಾಸ್ತ್ರದಲ್ಲಿ ಜೀವನವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಅನೇಕ ಬೋಧನೆಗಳನ್ನು ನೀಡಿದ್ದಾರೆ. ಇದರೊಂದಿಗೆ ಯಾವ ಕೆಟ್ಟ ಅಭ್ಯಾಸಗಳು ವ್ಯಕ್ತಿಗೆ ಹಾನಿ ಉಂಟುಮಾಡಬಹುದು ಎಂಬುದನ್ನು ಸಹ ಅವರು ಹೇಳಿದ್ದಾರೆ. ಈ ಅಭ್ಯಾಸಗಳು ನಿಮ್ಮ ಪ್ರಗತಿಯ ಶತ್ರುಗಳು. ಇವುಗಳ ಬಗ್ಗೆ ತಿಳಿದುಕೊಳ್ಳಿರಿ.
ಆಚಾರ್ಯ ಚಾಣಕ್ಯರ ಪ್ರಕಾರ, ಯಾರೂ ಕೇಳದೆ ಯಾರಿಗೂ ಸಲಹೆ ನೀಡಬಾರದು. ನಿಮಗೂ ಈ ಅಭ್ಯಾಸವಿದ್ದರೆ ಜನರು ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದರೂ, ಅವರು ಯಾವಾಗಲೂ ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಕೇಳದೆ ಸಲಹೆ ನೀಡುವವರಲ್ಲಿ ಒಂದು ರೀತಿಯ ಅಸಹನೆಯೂ ಕಂಡುಬರುತ್ತದೆ. ಇದು ಅವರನ್ನ ಸಮಾಜ ಮತ್ತು ವೃತ್ತಿ ಕ್ಷೇತ್ರದಲ್ಲಿ ಕೆಳಗೆ ತಳ್ಳುತ್ತದೆ. ಆದ್ದರಿಂದ ನೀವು ಈ ಅಭ್ಯಾಸಗಳನ್ನ ಬದಲಾಯಿಸಿಕೊಳ್ಳಬೇಕು.
ನೀವು ನಿಮ್ಮನ್ನು ಹೊಗಳಿಕೊಳ್ಳುತ್ತಲೇ ಇದ್ದರೆ ಮತ್ತು ಬೇರೆಯವರನ್ನು ನಿಮಗಿಂತ ದೊಡ್ಡವರು ಎಂದು ಪರಿಗಣಿಸದಿದ್ದರೆ, ಆಚಾರ್ಯ ಚಾಣಕ್ಯರ ಪ್ರಕಾರ, ಇದು ನಿಮ್ಮ ಬುದ್ಧಿವಂತಿಕೆಯಲ್ಲ, ಮೂರ್ಖತನ. ಯಾವಾಗಲೂ ತಮ್ಮನ್ನು ತಾವು ಹೊಗಳಿಕೊಳ್ಳುವ ಜನರ ಹತ್ತಿರ ಯಾರೂ ಹೋಗುವುದಿಲ್ಲ. ಇತರರು ಅಂತಹ ಜನರನ್ನು ನಂಬುವುದಿಲ್ಲ ಮತ್ತು ಜನರು ಅವರಿಗೆ ಸಹಾಯ ಮಾಡಲು ಮುಂದೆ ಬರುವುದಿಲ್ಲ. ಈ ಕಾರಣದಿಂದ ಅವರು ಪ್ರಗತಿಯನ್ನು ಸಾಧಿಸುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ತಮ್ಮನ್ನು ತಾವು ಬಹಳ ಜ್ಞಾನಿಗಳೆಂದು ಭಾವಿಸುವ ಮತ್ತು ಇತರರನ್ನು ಕಡಿಮೆ ಅಂದಾಜು ಮಾಡುವ ಜನರು ಸುಲಭವಾಗಿ ಪ್ರಗತಿ ಹೊಂದುವುದಿಲ್ಲ. ಇಂತಹ ಜನರು ವಿಭಿನ್ನ ಲೋಕವನ್ನು ಹೊಂದಿರುತ್ತಾರೆ. ಇದರಲ್ಲಿ ಅವರು ತಮ್ಮನ್ನು ಜ್ಞಾನಿಗಳೆಂದು ಪರಿಗಣಿಸುವ ಜನರಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡುತ್ತಾರೆ. ಆಚಾರ್ಯ ಚಾಣಕ್ಯರು ತಮ್ಮ ಜ್ಞಾನದ ಬಗ್ಗೆ ಹೆಮ್ಮೆಪಡುವ ಅಭ್ಯಾಸ ತಪ್ಪು ಎಂದು ಪರಿಗಣಿಸುತ್ತಾರೆ.
ಇತರರನ್ನು ಅವಮಾನಿಸುವ ಅಥವಾ ಟೀಕಿಸುವ ಅಭ್ಯಾಸವೂ ಒಳ್ಳೆಯದಲ್ಲವೆಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಇತರರನ್ನು ಅವಮಾನಿಸುವ ಗುಣವು ನಿಮ್ಮನ್ನು ಪ್ರಪಂಚದ ದೃಷ್ಟಿಯಲ್ಲಿ ವ್ಯಕ್ತಿತ್ವಕ್ಕೆ ಧಕ್ಕಯನ್ನುಂಟು ಮಾಡುತ್ತದೆ. ಈ ದುಷ್ಟತನವು ನಿಮ್ಮ ಪ್ರಗತಿಗೆ ದೊಡ್ಡ ಅಡಚಣೆಯಾಗಬಹುದು.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)