)
Diwali RajaYogas: ಈ ವರ್ಷ ದೀಪಾವಳಿಯು ತುಂಬಾ ವಿಶೇಷವಾಗಿದೆ. ಈ ದೀಪಾವಳಿಯು ಹಂಸ ಮಹಾಪುರುಷ ರಾಜಯೋಗದ ಜೊತೆಗೆ ಶುಕ್ರಾದಿತ್ಯ ರಾಜಯೋಗ, ನೀಚಭಂಗ್ ರಾಜಯೋಗ, ನವಪಂಚಮ ರಾಜಯೋಗ ಹಾಗೂ ಕಲಾಥಕ ರಾಜಯೋಗಗಳು ನಿರ್ಮಾಣವಾಗಿವೆ.
800ವರ್ಷಗಳ ಬಳಿಕ ರಾಜಯೋಗಗಳ ರಚನೆ:
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸುಮಾರು 800ವರ್ಷಗಳ ಬಳಿಕ ದೀಪಾವಳಿಯಲ್ಲಿ ಹಂಸ ಮಹಾಪುರುಷ ರಾಜಯೋಗ, ಶುಕ್ರಾದಿತ್ಯ, ನೀಚಭಂಗ್, ನವಪಂಚಮ, ಕಲಾಥಕ ರಾಜಯೋಗಗಳು ರೂಪುಗೊಳ್ಳುತ್ತಿವೆ. ಇದರ ಪರಿಣಾಮವಾಗಿ, ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಖುಲಾಯಿಸಲಿದ್ದು, ಅವರ ಬಾಳು ಸೂರ್ಯನಂತೆ ಕಂಗೊಳಿಸಲಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮಿಥುನ ರಾಶಿ:
ದೀಪಾವಳಿಯಲ್ಲಿ ನಿರ್ಮಾಣವಾಗಲಿರುವ ಐದು ಮಹಾ ರಾಜಯೋಗಗಳು ಈ ರಾಶಿಯವರ ಜೀವನದಲ್ಲಿ ಧನಾತ್ಮಕ ಫಲಗಳನ್ನು ಹೆಚ್ಚಿಸಲಿದೆ. ಈ ವೇಳೆ ಹಠಾತ್ ಧನಲಾಭದಿಂದ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ದೊರೆಯಲಿದೆ. ಭೂಮಿ, ಮನೆ ಖರೀದಿ ಯೋಗವೂ ಇದೆ.
ಕಟಕ ರಾಶಿ:
ದೀಪಾವಳಿಯಲ್ಲಿ ಪಂಚ ರಾಜಯೋಗಗಳ ನಿರ್ಮಾಣದಿಂದ ಈ ರಾಶಿಯ ಅವಿವಾಹಿತರಿಗೆ ವಿವಾಹ ಯೋಗವಿದೆ. ಅಪಾರ ಧನ ಸಂಪತ್ತು ಕೈ ಸೇರಲಿದ್ದು ಸಮಾಜದಲ್ಲಿ ಕೀರ್ತಿ ಗೌರವ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಜೀವನದಲ್ಲಿ ಪ್ರಗತಿಯ ಹಾದಿ ತೆರೆಯಲಿದೆ.
ತುಲಾ ರಾಶಿ:
800ವರ್ಷಗಳ ಬಳಿಕ ದೀಪಾವಳಿಯಲ್ಲಿ ರೂಪುಗೊಳ್ಳಲಿರುವ ಐದು ಮಹಾ ರಾಜಯೋಗಗಳು ಈ ರಾಶಿಯವರ ಬದುಕಿನಲ್ಲಿ ಕಷ್ಟಗಳಿಗೆ ಕೊನೆಹಾಡಿ ಹೊಸ ಚೈತನ್ಯ, ಬೆಳಕನ್ನು ತರಲಿದೆ. ಈ ವೇಳೆ ವೃತ್ತಿಪರರಿಗೆ ತುಂಬಾ ಚೆನ್ನಾಗಿದ್ದು ನಿಮ್ಮ ಕನಸು ನನಸಾಗುವ ಕಾಲ. ವ್ಯವಹಾರದಲ್ಲಿ ಭರ್ಜರಿ ಆರ್ಥಿಕ ಲಾಭವನ್ನು ಪಡೆಯುವಿರಿ.
ಮಕರ ರಾಶಿ:
ದೀಪಾವಳಿಯಲ್ಲಿ ರೂಪುಗೊಳ್ಳಲಿರುವ ಶುಕ್ರಾದಿತ್ಯ, ಹಂಸ ಮಹಾಪುರುಷ, ನೀಚಭಂಗ್ ರಾಜಯೋಗಗಳು, ನವಪಂಚಮ ರಾಜಯೋಗಗಳು ಮತ್ತು ಕಲಾಥಕ ರಾಜಯೋಗಗಳು ಈ ರಾಶಿಯವರ ಜೀವನದಲ್ಲಿ ಭಾರೀ ಪ್ರಗತಿಯನ್ನು ತರಲಿದೆ. ವೈವಾಹಿಕ ಜೀವನದಲ್ಲಿ ಹೊಸ ಬೆಳಕೊಂದು ಮೂಡಲಿದೆ. ಹಣಕಾಸಿನ ವಿಷಯದಲ್ಲೂ ಇದು ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.