)
ವಾಸ್ತು ಶಾಸ್ತ್ರದಲ್ಲಿ ತುಳಸಿ ಸಸ್ಯಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಇವುಗಳಲ್ಲಿ ಇದು ಮೊದಲನೆಯದು. ಹಿಂದೂ ಧರ್ಮದಲ್ಲಿ, ತುಳಸಿ ಸಸ್ಯವನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಮನೆಗಳಲ್ಲಿ ತುಳಸಿಯನ್ನು ಪೂಜಿಸಲಾಗುತ್ತದೆ. ಬೆಳಿಗ್ಗೆ ತುಳಸಿ ಸಸ್ಯಕ್ಕೆ ನೀರು ಅರ್ಪಿಸಿ ಪೂಜಿಸಿದ ನಂತರ, ಸಂಜೆ ತುಪ್ಪದ ದೀಪವನ್ನು ಬೆಳಗಿಸಲಾಗುತ್ತದೆ. ತುಳಸಿ ಸಸ್ಯದ ಪಕ್ಕದಲ್ಲಿ ಇದೊಂದು ಗಿಡವನ್ನು ನೆಡುವುದರಿಂದ ಹಲವು ಪಟ್ಟು ಹೆಚ್ಚಿನ ಪ್ರಯೋಜನಗಳಾಗುತ್ತವೆ ಎಂದು ಹೇಳಲಾಗುತ್ತದೆ.
ಹೌದು, ತುಳಸಿ ಸಸ್ಯದೊಂದಿಗೆ ಮನಿ ಪ್ಲಾಂಟ್ ನೆಡುವುದರಿಂದ ಎರಡೂ ಸಸ್ಯಗಳ ಪ್ರಯೋಜನಗಳು ಹಲವು ಪಟ್ಟು ಹೆಚ್ಚಾಗುತ್ತವೆ. ಇದಲ್ಲದೆ, ಮನೆಯಲ್ಲಿ ಎಂದಿಗೂ ಸಂಪತ್ತಿನ ಕೊರತೆ ಉಂಟಾಗುವುದೇ ಇಲ್ಲ. ಸಂಪತ್ತಿನ ಅಧಿದೇವತೆ ಮಹಾ ಲಕ್ಷ್ಮೀಯ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ.
- ತುಳಸಿ ಸಸ್ಯ ಮತ್ತು ಮನಿ ಪ್ಲಾಂಟ್ ಅನ್ನು ಒಟ್ಟಿಗೆ ನೆಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ದಿನದಿಂದ ದಿನಕ್ಕೆ ಆ ಮನೆ ಪ್ರಗತಿ ಹೊಂದುತ್ತದೆ.
- ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ ಸದಾ ಅನ್ಯೋನ್ಯತೆಯಿಂದ ಬದುಕು ಸಾಗಿಸುತ್ತಾರೆ.
- ಮನೆಯಲ್ಲಿ ಸಕಾರಾತ್ಮಕತೆ ಮೇಲುಗೈ ಸಾಧಿಸುತ್ತದೆ. ಇದರಿಂದಾಗಿ ಕುಟುಂಬ ಸದಸ್ಯರು ಸಕಾರಾತ್ಮಕ ಮನಸ್ಸಿನಿಂದಲೇ ಕೂಡಿರುತ್ತಾರೆ.
- ಇದ್ದ ಸಾಲವೆಲ್ಲಾ ತೀರುವುದು. ಒಂದು ಪೈಸೆಯೂ ಸಾಲ ಇರುವುದಿಲ್ಲ. ಈ ಎರಡು ಸಸ್ಯಗಳನ್ನು ಒಟ್ಟಿಗೆ ಇಡುವುದರಿಂದ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ.
- ಈ ಎರಡೂ ಸಸ್ಯಗಳು ಮನೆಗೆ ತಾಜಾತನ ಮತ್ತು ಶುದ್ಧ ಗಾಳಿಯನ್ನು ತರುತ್ತವೆ. ಮನಿ ಪ್ಲಾಂಟ್ ಗಾಳಿಯಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುತ್ತದೆ, ಆದರೆ ತುಳಸಿ ಎಲೆಗಳು ಪರಿಸರದಿಂದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಶುದ್ಧತೆಯನ್ನು ತರುತ್ತದೆ.
(ಸೂಚನೆ : ಈ ಲೇಖನ್ವನ್ನುಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.)