27 ವರ್ಷಗಳ ನಂತರ ಗುರುವಿನ ಮನೆಗೆ ಶನಿ ದೇವರ ಪ್ರವೇಶ : ಈ ರಾಶಿಯವರಿಗೆ ಉನ್ನತ ಸ್ಥಾನಕ್ಕೆ ಏರುವ ಪರ್ವಕಾಲ, ಕಷ್ಟಗಳಿಗೆ ಬೀಳುವುದು ತೆರೆ

12 ರಾಶಿಗಳ ಚಕ್ರವನ್ನು  ಪೂರ್ಣಗೊಳಿಸಲು ಶನಿದೇವರು 30 ವರ್ಷಗಳ ದೀರ್ಘ ಸಮಯವನ್ನು  ತೆಗೆದುಕೊಳ್ಳುತ್ತಾರೆ. ಶನಿ ಸಂಚಾರ ಮಾಡಿದಾಗ, ಅದು ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 

Written by - Ranjitha R K | Last Updated : Sep 30, 2025, 01:24 PM IST
  • ಒಂದು ನಿರ್ದಿಷ್ಟ ಸಮಯದ ನಂತರ ನಕ್ಷತ್ರವನ್ನು ಬದಲಾಯಿಸುತ್ತದೆ.
  • ಅಕ್ಟೋಬರ್ 3 ರಂದು ರಾತ್ರಿ 9:49 ಕ್ಕೆ ಶನಿ ಗ್ರಹ ದ ನಕ್ಷತ್ರ ಬದಲಾವಣೆ
  • ಜನ ಜೀವನದ ಮೇಲೆ ಶನಿ ಸಂಚಾರದ ಪ್ರಭಾವ
27 ವರ್ಷಗಳ ನಂತರ ಗುರುವಿನ ಮನೆಗೆ ಶನಿ ದೇವರ  ಪ್ರವೇಶ : ಈ ರಾಶಿಯವರಿಗೆ ಉನ್ನತ ಸ್ಥಾನಕ್ಕೆ  ಏರುವ ಪರ್ವಕಾಲ, ಕಷ್ಟಗಳಿಗೆ ಬೀಳುವುದು ತೆರೆ

ನ್ಯಾಯದ ದೇವರು ಶನಿದೇವನು ತನ್ನ ನಿಧಾನಗತಿಯ ಚಲನೆಯಿಂದಾಗಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಶನಿ ಗ್ರಹ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಎರಡೂವರೆ ವರ್ಷಗಳ ಕಾಲ ಶನಿದೇವ ಒಂದೇ ರಾಶಿಯಲ್ಲಿ ಇರುತ್ತಾನೆ. ಇದರಿಂದಾಗಿ, 12 ರಾಶಿಗಳ ಚಕ್ರವನ್ನು ಪೂರ್ಣಗೊಳಿಸಲು 30 ವರ್ಷಗಳ ದೀರ್ಘ ಸಮಯವನ್ನು  ತೆಗೆದುಕೊಳ್ಳುತ್ತದೆ. ಶನಿ ಸಂಚಾರ ಮಾಡಿದಾಗ, ಅದು ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. 

Add Zee News as a Preferred Source

ಒಂದು ನಿರ್ದಿಷ್ಟ ಸಮಯದ ನಂತರ ನಕ್ಷತ್ರವನ್ನು ಬದಲಾಯಿಸುತ್ತದೆ.  ಈ ಬದಲಾವಣೆಯು ಉದ್ಯೋಗ, ವೃತ್ತಿ, ಆರೋಗ್ಯ, ಸಂಬಂಧಗಳು ಮತ್ತು ಸಂಪತ್ತು ಸೇರಿದಂತೆ ಜೀವನದ ಪ್ರತಿಯೊಂದು ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷ, ಅಕ್ಟೋಬರ್ ಆರಂಭದಲ್ಲಿ, ಶನಿದೇವನು ಗುರುವಿನ  ಪೂರ್ವಾಭಾದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತಾನೆ. 

ಇದನ್ನೂ ಓದಿ : 100ವರ್ಷಗಳ ಬಳಿಕ ಹಂಸರಾಜಯೋಗದಲ್ಲಿ ದೀಪಾವಳಿ ಹಬ್ಬ: ಈ ರಾಶಿಯವರ ಬದುಕೇ ಬಂಗಾರ, ಸಂಪತ್ತಿನ ಸುಧೆ

ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 3 ರಂದು ರಾತ್ರಿ 9:49 ಕ್ಕೆ ಶನಿ ಗ್ರಹ ಪೂರ್ವಾಭಾದ್ರಪದ ನಕ್ಷತ್ರವನ್ನು ಪ್ರವೇಶಿಸುತ್ತಾನೆ.  ಜನವರಿ 20 ರವರೆಗೆ ಈ ನಕ್ಷತ್ರದಲ್ಲಿಯೇ ಇದ್ದು, ನಂತರ ಉತ್ತರಾಭಾದ್ರ ನಕ್ಷತ್ರವನ್ನು ಪ್ರವೇಶಿಸುತ್ತದೆ.   

ಕಟಕ ರಾಶಿ : ಪೂರ್ವಾಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರವು ಈ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ರಾಶಿಯವರು ದೀರ್ಘಕಾಲದಿಂದ ಅಪೂರ್ಣಗೊಂಡ ಕೆಲಸಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಸಂಪತ್ತು ಮತ್ತು ಆದಾಯದಲ್ಲಿ ಹೆಚ್ಚಳವಾಗುವುದು. ಕೆಲಸದಲ್ಲಿ ಕಠಿಣ ಪರಿಶ್ರಮವನ್ನು ಪ್ರಶಂಸಿಸಲಾಗುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.  

ಇದನ್ನೂ ಓದಿ : ವಿಶೇಷ ದಿಗ್ಬಲ ಯೋಗ: ಈ ರಾಶಿಯ ಜನರಿಗೆ ರಾಜಯೋಗ & ಧನಯೋಗ ಬರಲಿದೆ..!

ಮಕರ ರಾಶಿ : ಈ ಸಮಯದಲ್ಲಿ, ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಬಹುದು. ಕುಟುಂಬದೊಂದಿಗೆ ಸಮಯ ಕಳೆಯಲು ಉತ್ತಮ ಅವಕಾಶ ಸಿಗುತ್ತದೆ. ನ್ಯಾಯಾಲಯ ಮತ್ತು ಕಚೇರಿ ವಿಷಯಗಳಲ್ಲಿ ಯಶಸ್ಸಿನ ಸಾಧ್ಯತೆ ಇದೆ. ದೀರ್ಘಕಾಲದ ಸಮಸ್ಯೆಗಳು ಮತ್ತು ಸವಾಲುಗಳು ಈಗ ಕೊನೆಗೊಳ್ಳಬಹುದು. ಉದ್ಯೋಗದಲ್ಲಿರುವವರಿಗೆ ಈ ಸಮಯದಲ್ಲಿ ಪ್ರಯೋಜನ ಸಿಗುವುದು. ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ದೊಡ್ಡ ಜವಾಬ್ದಾರಿ ಹೆಗಲೇರುವುದು.  

ಧನು ರಾಶಿ : ಶನಿ ಗ್ರಹ ಮತ್ತು ಗುರುವಿನ ವಿಶೇಷ ಅನುಗ್ರಹ ದೊರೆಯುತ್ತದೆ. ಭೌತಿಕ ಸೌಕರ್ಯ ಸಿಗುತ್ತದೆ. ಹೊಸ ವರ್ಷವು ಉದ್ಯೋಗಿಗಳಿಗೆ ಸಂತೋಷವನ್ನು ತರಬಹುದು. ನಿರುದ್ಯೋಗಿಗಳಿಗೆ ಉದ್ಯೋಗಗಳು ಸಿಗುವ ಸಾಧ್ಯತೆಯಿದೆ. ಇದರೊಂದಿಗೆ, ಬಡ್ತಿ ಮತ್ತು ವೇತನ ಹೆಚ್ಚಳದ ಸಾಧ್ಯತೆಯಿದೆ. ಕಠಿಣ ಪರಿಶ್ರಮವನ್ನು ಪ್ರಶಂಸಿಸಲಾಗುತ್ತದೆ. 

( ಸೂಚನೆ :  ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ. ) 

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News