ಗುರು-ಚಂದ್ರರಿಂದ ಅಪರೂಪದ ಗಜಕೇಸರಿ ಯೋಗ: ಮೇಷದಿಂದ ಮೀನದವರೆಗೆ ನಿಮ್ಮ ರಾಶಿಗೆ ಏನು ಫಲ

Guru Chandra Yuti: ವರ್ಷಾಂತ್ಯದೊಳಗೆ ದೇವಗುರು ಗುರು ಹಾಗೂ ಮನಸ್ಸಿನ ಅಂಶನಾಗಿರುವ ಚಂದ್ರನಿಂದ ತುಂಬಾ ವಿಶೇಷವಾದ ಗಜಕೇಸರಿ ಯೋಗ ರಚನೆಯಾಗಲಿದೆ. ಇದರಿಂದ ಕೆಲವು ರಾಶಿಯವರಿಗೆ ಭಾರೀ ಅದೃಷ್ಟ ಎನ್ನಲಾಗುತ್ತಿದೆ. ಗಜಕೇಸರಿ ಯೋಗ ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ಬೀರಲಿದೆ ತಿಳಿಯೋಣ... 

Written by - Yashaswini V | Last Updated : Oct 16, 2025, 07:17 AM IST
  • ವರ್ಷಾಂತ್ಯದಲ್ಲಿ ಗುರು ಚಂದ್ರರ ಅಪರೂಪದ ಸಂಯೋಗ
  • ಮಿಥುನ ರಾಶಿಯಲ್ಲಿ ವಕ್ರೀ ಗುರು, ಚಂದ್ರರ ಸಂಯೋಗದಿಂದ ಗಜಕೇಸರಿ ಯೋಗ
  • ಗಜಕೇಸರಿ ಯೋಗದಿಂದ ಕೆಲವರಿಗೆ ಅದೃಷ್ಟ, ಇನ್ನೂ ಕೆಲವರಿಗೆ ಹೆಗಲೇರಲಿದೆ ದುರಾದೃಷ್ಟ
ಗುರು-ಚಂದ್ರರಿಂದ ಅಪರೂಪದ ಗಜಕೇಸರಿ ಯೋಗ: ಮೇಷದಿಂದ ಮೀನದವರೆಗೆ ನಿಮ್ಮ ರಾಶಿಗೆ ಏನು ಫಲ

Gajakesari Yoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಪ್ರತಿಯೊಂದು ಗ್ರಹವೂ ಕೂಡ ತನ್ನದೇ ಆದ ನಿಗದಿತ ಕಾಲದಲ್ಲಿ ತನ್ನ ಸಂಚಾರವನ್ನು ಬದಲಾಯಿಸುತ್ತವೆ. ಇಂತಹ ಸಂದರ್ಭದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಸಂಯೋಗಗೊಂಡಾಗ ಅಪರೂಪದ ಯೋಗಗಳು ರೂಪುಗೊಳ್ಳುತ್ತವೆ. ಇದೇ ರೀತಿಯಲ್ಲಿ ಡಿಸೆಂಬರ್‌ನಲ್ಲಿ ಗುರು-ಚಂದ್ರರ ಸಂಯೋಗ ಏರ್ಪಡಲಿದೆ. 

Add Zee News as a Preferred Source

2025ರ ಡಿಸೆಂಬರ್ 06ರಂದು ಅದೃಷ್ಟ ಮತ್ತು ಉತ್ತಮ ಜೀವನವನ್ನು ದಯಪಾಲಿಸುವ ಗುರು ಹಿಮ್ಮುಖನಾಗಲಿದ್ದು ಕಟಕದಿಂದ ಮಿಥುನ ರಾಶಿಗೆ ಸಾಗಲಿದ್ದಾನೆ. ಅದೇ ದಿನ ಚಂದ್ರ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ವಕ್ರೀ ಗುರು ಚಂದ್ರರ ಸಂಯೋಗದಿಂದ ಅಪರೂಪದ ಗಜಕೇಸರಿ ಯೋಗ ರಚನೆಯಾಗಲಿದೆ. 

ವರ್ಷಾಂತ್ಯದಲ್ಲಿ ರಚನೆಯಾಗಲಿರುವ ಅಪರೂಪದ ಗಜಕೇಸರಿ ಯೋಗವು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ತರಲಿದ್ದರೆ, ಇನ್ನೂ ಕೆಲವು ರಾಶಿಯವರ ಬದುಕಿನಲ್ಲಿ ಸಂಕಷ್ಟದ ಸರಮಾಲೆಯನ್ನೇ ಸೃಷ್ಟಿಸಲಿದೆ ಎನ್ನಲಾಗುತ್ತಿದೆ. ಹಾಗಿದ್ದರೆ, ಡಿಸೆಂಬರ್‌ನಲ್ಲಿ ರೂಪುಗೊಳ್ಳಲಿರುವ ಗಜಕೇಸರಿ ಯೋಗ ಎಲ್ಲಾ 12 ರಾಶಿಗಳ ಮೇಲೆ ಏನು ಪ್ರಭಾವ ಬೀರಲಿದೆ ತಿಳಿಯೋಣ... 

ದ್ವಾದಶ ರಾಶಿಗಳ ಮೇಲೆ ಗಜಕೇಸರಿ ಯೋಗದ ಫಲಾಫಲ ಏನಿದೆ? 
ಮೇಷ ರಾಶಿ: 

ಡಿಸೆಂಬರ್‌ನಲ್ಲಿ ಸೃಷ್ಟಿಯಾಗಲಿರುವ ಗಜಕೇಸರಿ ರಾಜಯೋಗವು ಈ ರಾಶಿಯವರಿಗೆ ಅಷ್ಟು ಫಲಪ್ರದವಾಗಿಲ್ಲ.ಈ ವೇಳೆ ತುಂಬಾ ತಾಳ್ಮೆಯಿಂದ ಉಳಿದಿರುವುದು ಅಗತ್ಯವಾಗಿದೆ. ಇಲ್ಲವೇ, ಭಾರೀ ಆರ್ಥಿಕ ಸಂಕಷ್ಟದಲ್ಲಿ ಸಿಲುಕಬಹುದು. ವ್ಯಾಪಾರದಲ್ಲಿ ಸವಾಲುಗಳು ಹೆಚ್ಚಾಗಬಹುದು. 

ವೃಷಭ ರಾಶಿ: 
ಧನುರ್ಮಾಸದಲ್ಲಿ ಗುರು-ಚಂದ್ರರ ಸಂಯೋಗವು ಈ ರಾಶಿಯವರಿಗೆ ಅಶುಭ ಫಲಗಳನ್ನು ತರಲಿದೆ. ಆರೋಗ್ಯದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಭವಿಷ್ಯದಲ್ಲಿ ನಿಮ್ಮ ತೊಂದರೆಗಳನ್ನು ಹೆಚ್ಚಿಸಬಹುದು. ಅನಿರೀಕ್ಷಿತ ಖರ್ಚುಗಳು ನಿಮ್ಮ ಬಜೆಟ್ ಹಾಳುಮಾಡಬಹುದು. 

ಇದನ್ನೂ ಓದಿ- ಪ್ರಬಲ ಲಕ್ಷ್ಮಿ ನಾರಾಯಣ ಯೋಗದಿಂದ ಮೂರು ರಾಶಿಯವರಿಗೆ ಸಂಪತ್ತಿನ ಸುಧೆಯನ್ನೇ ಹರಿಸಲಿದ್ದಾಳೆ ಸಾಕ್ಷಾತ್ ಲಕ್ಷ್ಮಿ

ಮಿಥುನ ರಾಶಿ: 
ವರ್ಷಾಂತ್ಯದಲ್ಲಿ ನಿರ್ಮಾಣವಾಗಲಿರುವ ಗಜಕೇಸರಿ ಯೋಗವು ಈ ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ಬಂಪರ್ ಹಣಕಾಸಿನ ಲಾಭವಾಗಲಿದ್ದು ಸಾಲಬಾಧೆಯಿಂದ ಹೊರಬರುವಿರಿ. ಇನ್ನೂ ಮದುವೆಯಾಗದವರಿಗೆ ಶೀಘ್ರದಲ್ಲೇ ಕಂಕಣಭಾಗ್ಯ ಕೂಡಿ ಬರಲಿದೆ. ವ್ಯವಹಾರದಲ್ಲಿ ಅಧಿಕ ಲಾಭವನ್ನು ಕಾಣುವಿರಿ. 

ಕಟಕ ರಾಶಿ: 
ವರ್ಷಾಂತ್ಯದಲ್ಲಿ ಗುರು ಚಂದ್ರರ ಯುತಿ ಈ ರಾಶಿಯವರಿಗೆ ಅಷ್ಟು ಉತ್ತಮವಾಗಿರುವುದಿಲ್ಲ. ಈ ವೇಳೆ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ತುಂಬಾ ಅಗತ್ಯವಾಗಿದೆ. ಉದ್ಯೋಗ ರಂಗದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹೆಚ್ಚಿನ ಶ್ರಮವಹಿಸುವ ಅಗತ್ಯವಿದೆ. ಕುಟುಂಬದಲ್ಲಿ ಸಣ್ಣ ಮಾತು ಕೂಡ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಬಹುದು. 

ಸಿಂಹ ರಾಶಿ: 
ಗಜಕೇಸರಿ ಯೋಗವು ಈ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಈ ವೇಳೆ ಆದಾಯದಲ್ಲಿ ಬಂಪರ್ ಏರಿಕೆಯನ್ನು ಕಾಣುವಿರಿ. ಹೊಸ ವ್ಯವಹಾರ ಆರಂಭಿಸಲು ಯೋಚಿಸುತ್ತಿರುವವರಿಗೆ ಉತ್ತಮ ಸಮಯ. ಮದುವೆಯಾಗದವರಿಗೆ ವಿವಾಹ ಪ್ರಸ್ತಾಪಗಳನ್ನು ನಿಮ್ಮ ಮನೆಯನ್ನೇ ಹುಡುಕಿ ಬರಲಿವೆ. 

ಕನ್ಯಾ ರಾಶಿ: 
ಗುರು ಚಂದ್ರ ಸಂಯೋಗದಿಂದ ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಎಂತಲೇ ಹೇಳಲಾಗುತ್ತಿದೆ. ನಿರುದ್ಯೋಗಿಗಳಿಗೆ ಕನಸಿನ ಉದ್ಯೋಗ ದೊರೆಯಲಿದೆ. ಸ್ವಂತ ಉದ್ಯಮದಲ್ಲಿ ಹೊಂದಿರುವವರಿಗೆ ಭಾರೀ ಅದೃಷ್ಟದ ಸಮಯ. ಪಾಲುದಾರಿಕೆ ವ್ಯವಹಾರಗಳಲ್ಲಿ ಆದಾಯ ಹೆಚ್ಚಾಗಿ ಖಜಾನೆ ತುಂಬಲಿದೆ. 

ತುಲಾ ರಾಶಿ: 
ವರ್ಷಾಂತ್ಯದಲ್ಲಿ ವಕ್ರೀ ಗುರು ಪ್ರಭಾವದಿಂದ ಈ ರಾಶಿಯ ಜನರಿಗೆ ಪ್ರತಿ ಕ್ಷೇತ್ರಗಳಲ್ಲೂ ಉತ್ತಮ ಫಲ ದೊರೆಯಲಿದೆ. ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದದಿಂದ ವೃತ್ತಿ-ವ್ಯವಹಾರದಲ್ಲಿ ಭಾರೀ ಧನಾಗಮನವಗಲಿದೆ. ಜೀವನದಲ್ಲಿ ಇಷ್ಟು ದಿನಗಳು ತಲೆದೂರಿದ್ದ ಸಮಸ್ಯೆಗಳು ಬಗೆಹರಿಯಲಿವೆ. 

ಇದನ್ನೂ ಓದಿ-  ದೀಪಾವಳಿಯಂದು ಬುಧ-ಮಂಗಳರಿಂದ ಯುತಿ ದೃಷ್ಟಿ ಯೋಗ: 4 ರಾಶಿಯವರಿಗೆ ಭಾಗ್ಯೋದಯ, ಸೋಲೆಂಬುದೇ ಇಲ್ಲ

ವೃಶ್ಚಿಕ ರಾಶಿ: 
ವರ್ಷದ ಕೊನೆಯಲ್ಲಿ ಗುರು-ಚಂದ್ರರ ಸಂಯೋಗ ಗಜಕೇಸರಿ ಯೋಗವು ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹೆಚ್ಚಿನ ಶ್ರಮವಹಿಸಿದರೂ ಉದ್ಯೋಗದಲ್ಲಿ, ವ್ಯವಹಾರದಲ್ಲಿ ನಿರೀಕ್ಷಿತ ಫಲ ದೊರೆಯದೆ ಇರಬಹುದು. ಕೌಟುಂಬಿಕ ಕಲಹಗಳು ಉಂಟಾಗುವ ಸಂಭವವೂ ಇದೆ. ಹಾಗಾಗಿ, ಈ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು. 

ಧನು ರಾಶಿ: 
ಈ ರಾಶಿಯವರಿಗೆ ವರ್ಷಾಂತ್ಯದ ಗಜಕೇಸರಿ ಯೋಗ ಅತ್ಯಂತ ಮಂಗಳಕರವಾದ ಸಮಯವಾಗಿದೆ. ಈ ವೇಳೆ, ಗುರು-ಚಂದ್ರರು ಈ ರಾಶಿಯವರಿಗೆ ಸಕಲ ಸನ್ಮಂಗಳವನ್ನು ಉಂಟು ಮಾಡಲಿದ್ದಾರೆ. ಹಣಕಾಸಿನ ಜೀವನದಲ್ಲಿ ಉತ್ತಮ ಲಾಭಾಂಶಗಳಿಂದ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. 

ಮಕರ ರಾಶಿ: 
ಗಜಕೇಸರಿ ಯೋಗವು ಈ ರಾಶಿಯವರಿಗೆ ಮಿಶ್ರ ಫಲಗಳನ್ನು ತರಲಿದೆ. ಹಣಕಾಸಿನ ವಿಚಾರದಲ್ಲಿ ತುಂಬಾ ಜಾಗರೂಕರಾಗಿರಬೇಕಾದ ಸಮಯ ಇದಾಗಿದ್ದು, ಹೂಡಿಕೆ ವ್ಯವಹಾರಗಳಿಂದ ಸ್ವಲ್ಪ ದೂರವಿದ್ದರೆ ಒಳ್ಳೆಯದು. ವ್ಯವಹಾರ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲು ಸೂಕ್ತ ಸಮಯವಲ್ಲ. 

ಕುಂಭ ರಾಶಿ: 
ವರ್ಷದ ಕೊನೆಯಲ್ಲಿ ರೂಪುಗೊಳ್ಳಲಿರುವ ಗಜಕೇಸರಿ ಯೋಗವು ಈ ರಾಶಿಯವರಿಗೆ ಬಂಗಾರದ ಸಮಿ ಎಂತಲೇ ಹೇಳಬಹುದು. ಇಷ್ಟು ದಿನಗಳ ನಿಮ್ಮ ಕಷ್ಟಕ್ಕೆ ಪರಿಹಾರ ದೊರೆಯುವ ಕಾಲ ಇದಾಗಿರಲಿದೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿರುವ ಹಣ ಕೈ ಸೇರುವ ಸಕಾಲ. ಮಕ್ಕಳ ಮದುವೆ ವಿಚಾರವಾಗಿ ಶುಭ ಸುದ್ದಿ ಕೇಳುವಿರಿ. 

ಮೀನ ರಾಶಿ: 
ಗಜಕೇಸರಿ ಯೋಗದ ಫಲವಾಗಿ ಈ ರಾಶಿಯವರಿಗೆ ಅದೃಷ್ಟ ದೇವತೆಯೇ ಒಲಿಯಲಿದ್ದಾಳೆ. ಸಾಕ್ಷಾತ್ ಲಕ್ಷ್ಮಿ ದಯೆಯಿಂದ ಇವರ ಬಾಳಿನಲ್ಲಿ ಸಂಪತ್ತಿನ ಸುಧೆಯೇ ಹರಿಯಲಿದೆ. ವಿದೇಶದಲ್ಲಿ ಉದ್ಯೋಗ ಹೊಂದುವ ಕನಸು ನನಸಾಗುವ ಪರ್ವಕಾಲ ಇದಾಗಿದೆ. ಮನೆಯಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News