ಹೋಳಿ ದಿನದಂದು ಈ 5 ತಪ್ಪುಗಳನ್ನ ಮಾಡಿದ್ರೆ ಭಾರೀ ನಷ್ಟವಾಗುತ್ತೆ; ನೀವು ಗ್ರಹ ದೋಷಗಳಿಗೆ ಬಲಿಯಾಗುತ್ತೀರಿ!

Holi Festival 2025: ಬಣ್ಣಗಳ ಹಬ್ಬದ ಹೋಳಿ ದಿನದಂದು ಕೆಲವು ತಪ್ಪುಗಳನ್ನು ಮಾಡುವುದು ನಿಮಗೆ ದುಬಾರಿಯಾಗಬಹುದು. ಈ ದಿನ ನೀವು ಯಾವ ಕೆಲಸಗಳನ್ನು ಮಾಡಬಾರದು ಎಂಬುದರ ಬಗ್ಗೆ ತಿಳಿಯಿರಿ...

Written by - Puttaraj K Alur | Last Updated : Mar 14, 2025, 01:22 PM IST
  • ಹೋಳಿ ದಿನದಂದು ಮಹಿಳೆಯರು ಮತ್ತು ಹಿರಿಯರನ್ನು ಅಗೌರವಿಸುವುದು ಅಶುಭ
  • ಹೋಳಿ ಹಬ್ಬದಂದು ಮಾದಕ ದ್ರವ್ಯ ಮತ್ತು ತಾಮಸಿಕ ಆಹಾರ ಸೇವಿಸಬಾರದು
  • ಸಂತೋಷದ ಹಬ್ಬ ಹೋಳಿಯಂದು ನಾವು ಯಾರನ್ನೂ ಅವಮಾನಿಸಬಾರದು
ಹೋಳಿ ದಿನದಂದು ಈ 5 ತಪ್ಪುಗಳನ್ನ ಮಾಡಿದ್ರೆ ಭಾರೀ ನಷ್ಟವಾಗುತ್ತೆ; ನೀವು ಗ್ರಹ ದೋಷಗಳಿಗೆ ಬಲಿಯಾಗುತ್ತೀರಿ!
ಹೋಳಿ ಹಬ್ಬ 2025

Holi Festival 2025: ಹೋಳಿ ಹಬ್ಬವು ಬಣ್ಣಗಳ ಹಬ್ಬವಾಗಿದ್ದು, ದೇಶದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಂಕೇತಿಸುತ್ತದೆ. ಈ ದಿನದಂದು ಜನರು ಪರಸ್ಪರ ಬಣ್ಣಗಳನ್ನು ಲೇಪಿಸಿಕೊಳ್ಳುತ್ತಾರೆ, ನೃತ್ಯ ಮಾಡುತ್ತಾರೆ, ಹಾಡುತ್ತಾರೆ ಮತ್ತು ರುಚಿಕರ ಭಕ್ಷ್ಯಗಳನ್ನು ಸವಿಯುತ್ತಾರೆ. ಶತ್ರುಗಳು ಸಹ ತಮ್ಮ ದ್ವೇಷವನ್ನು ಮರೆತು ಸ್ನೇಹಿತರಾಗುವ ದಿನ ಇದು. ಈ ವಿಶೇಷ ದಿನ ಬಣ್ಣಗಳ ಹಬ್ಬ ಆಚರಿಸುವಾಗ ನೀವು ಅಪ್ಪಿತಪ್ಪಿಯೂ ಕೆಲವು ತಪ್ಪುಗಳನ್ನು ಮಾಡಬಾರದು. ಈ ತಪ್ಪುಗಳನ್ನು ಮಾಡುವುದರಿಂದ ದೇವ-ದೇವತೆಗಳು ಕೋಪಗೊಳ್ಳುತ್ತಾರೆ. ಇದಲ್ಲದೆ ನಿಮ್ಮ ಜಾತಕದಲ್ಲಿ ಗ್ರಹ ದೋಷಗಳು ಸಹ ಉದ್ಭವಿಸಬಹುದು. 

Add Zee News as a Preferred Source

ಹೋಳಿ ಹಬ್ಬವು ಶ್ರೀಕೃಷ್ಣನಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಮಥುರಾ-ವೃಂದಾವನದಲ್ಲಿ ಹೋಳಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಭಗವಾನ್ ಕೃಷ್ಣ ಮತ್ತು ರಾಧಾ ರಾಣಿ ಶ್ರೀ ವೃಂದಾವನ ಧಾಮದಲ್ಲಿ ಗೋಪಿಯರು ಮತ್ತು ಅವರ ಸ್ನೇಹಿತರೊಂದಿಗೆ ಹೋಳಿಯನ್ನು ಆನಂದಿಸುತ್ತಿದ್ದರು. ಹೋಳಿಯನ್ನು ಪ್ರೀತಿ ಮತ್ತು ಸಂತೋಷದ ಸಂಕೇತವೆಂದು ಹೇಳಲಾಗುತ್ತದೆ. ಆದ್ದರಿಂದ ಈ ದಿನದಂದು ಪ್ರತಿಯೊಬ್ಬರೂ ಸಮಾಜದಲ್ಲಿ ಪ್ರೀತಿ ಮತ್ತು ಸಾಮರಸ್ಯವನ್ನು ಹರಡಬೇಕು. ಅಲ್ಲದೆ ಹೋಳಿ ಹಬ್ಬದ ದಿನದಂದು ಕೆಲವು ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು. 

ಇದನ್ನೂ ಓದಿ: ಹೋಳಿ ದಿನವೇ ಚಂದ್ರಗ್ರಹಣ: ಮೂರು ವಿಶೇಷ ರಾಜಯೋಗಗಳ ನಿರ್ಮಾಣದಿಂದ ಈ ರಾಶಿಯವರಿಗೆ ತುಂಬಲಿದೆ ಖಜಾನೆ, ಅಷ್ಟೈಶ್ವರ್ಯ ಪ್ರಾಪ್ತಿ 

ಅಶುದ್ಧ ಬಟ್ಟೆಗಳನ್ನು ಧರಿಸಬಾರದು  

ಶ್ರೀ ಕೃಷ್ಣ ಕಿಂಕರಜೀ ಮಹಾರಾಜರ ಪ್ರಕಾರ, ಹೋಳಿ ಒಂದು ಪವಿತ್ರ ಹಬ್ಬ. ಈ ಶುದ್ಧತೆಯನ್ನು ಕಾಪಾಡಿಕೊಳ್ಳಲು ಹೋಳಿ ಹಬ್ಬದ ದಿನದಂದು ನಾವು ಅಶುದ್ಧ ಮತ್ತು ಹರಿದ ಬಟ್ಟೆಗಳನ್ನು ಧರಿಸಬಾರದು. ಇದರಿಂದ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳೆ. ಇದರಿಂದ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಆದ್ದರಿಂದ ಹೋಳಿ ಹಬ್ಬದ ದಿನದಂದು ಸ್ವಚ್ಛ ಮತ್ತು ಒಳ್ಳೆಯ ಬಟ್ಟೆಗಳನ್ನು ಧರಿಸಿ.

ಮಹಿಳೆಯರು ಮತ್ತು ಹಿರಿಯರನ್ನು ಅಗೌರವಿಸುವುದು ಅಶುಭ

ಪ್ರತಿಯೊಬ್ಬ ಮಹಿಳೆಯೂ ತಾಯಿಗೆ ಸಮಾನಳು, ಅವಳು ದೇವತೆಯಂತೆ. ಮಹಿಳೆಯರನ್ನು ಗೌರವಿಸುವುದು ನಮ್ಮ ಭಾರತೀಯ ಸಂಸ್ಕೃತಿ. ನಮ್ಮ ಸಂಸ್ಕೃತಿಯನ್ನು ನಾವು ಮರೆಯಬಾರದು. ನಾವು ಮಹಿಳೆಯರು ಮತ್ತು ಹಿರಿಯರನ್ನು ಗೌರವಿಸಬೇಕು. ವಿಶೇಷವಾಗಿ ಹೋಳಿ ಹಬ್ಬದ ದಿನದಂದು ನಾವು ಯಾವುದೇ ಮಹಿಳೆ ಅಥವಾ ವೃದ್ಧ ವ್ಯಕ್ತಿಯನ್ನು ಅವಮಾನಿಸಿದರೆ, ದೇವ-ದೇವತೆಗಳು ಕೋಪಗೊಳ್ಳುತ್ತಾರೆ. ಇದರಿಂದ ನಾವು ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಮಾದಕ ದ್ರವ್ಯ ಮತ್ತು ತಾಮಸಿಕ ಆಹಾರ ಸೇವಿಸಬಾರದು

ಹೋಳಿ ಹಬ್ಬದಂದು ವಿಷ್ಣುವನ್ನು ಪೂಜಿಸಲಾಗುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಈ ದಿನವು ಪವಿತ್ರ ದಿನವಾಗಿದೆ, ಆದ್ದರಿಂದ ಈ ದಿನದಂದು ಮದ್ಯ, ಮಾಂಸ ಮತ್ತು ಇತರ ಮಾಂಸಾಹಾರಿ ವಸ್ತುಗಳನ್ನು ಸೇವಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ತಾಮಸಿಕ ಪದಾರ್ಥಗಳನ್ನು ಸೇವಿಸುವುದರಿಂದ ಗ್ರಹ ದೋಷಗಳು ಉಂಟಾಗುತ್ತವೆ. ಇದರಿಂದ ನೀವು ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳು ಎದುರಾಗಬಹುದು.

ಯಾರನ್ನೂ ಅವಮಾನಿಸಬೇಡಿ

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೋಳಿ ಹಬ್ಬವು ಏಕತೆಯ ಸಂಕೇತವಾಗಿದೆ. ಈ ದಿನದಂದು ಎಲ್ಲಾ ಜನರು ಸಮಾನ ಭಾವನೆಗಳೊಂದಿಗೆ ಒಟ್ಟುಗೂಡಿ ಈ ಹಬ್ಬವನ್ನು ಆಚರಿಸುತ್ತಾರೆ. ಹೋಳಿ ಬಣ್ಣಗಳ ಹಬ್ಬ, ಸಂತೋಷದ ಹಬ್ಬ, ಆದ್ದರಿಂದ ಈ ದಿನದಂದು ನಾವು ಯಾರನ್ನೂ ಅವಮಾನಿಸಬಾರದು, ಹೀಗೆ ಮಾಡುವುದರಿಂದ ನೀವು ದೇವ-ದೇವತೆಗಳ ಕ್ರೌರ್ಯಕ್ಕೆ ಬಲಿಯಾಗಬಹುದು.

ಇದನ್ನೂ ಓದಿ: ದಿನಭವಿಷ್ಯ 14-03-2025: ಹೋಳಿ ಹಬ್ಬದ ದಿನ ಈ ರಾಶಿಯವರಿಗೆ ಲಕ್ಷ್ಮಿ ಕೃಪೆ, ಬಂಪರ್ ಧನಲಾಭ

ಪರಿಸರಕ್ಕೆ ಹಾನಿ ಮಾಡಬೇಡಿ

ನಮ್ಮ ಜೀವನವು ಪ್ರಕೃತಿಯೊಂದಿಗೆ ಸಂಪರ್ಕ ಹೊಂದಿದೆ, ಪ್ರಕೃತಿಯಿಲ್ಲದೆ ನಮ್ಮ ಅಸ್ತಿತ್ವ ಶೂನ್ಯ. ಈ ಸತ್ಯವನ್ನು ತಿಳಿದುಕೊಂಡು ನಾವು ಹೋಳಿ ದಿನದಂದು ನೀರನ್ನು ವ್ಯರ್ಥ ಮಾಡಬಾರದು, ಪ್ರಾಣಿಗಳಿಗೆ ಬಣ್ಣ ಹಚ್ಚಬಾರದು, ಅಸ್ವಾಭಾವಿಕ ಬಣ್ಣಗಳನ್ನು ಬಳಸಬಾರದು ಅಥವಾ ಯಾವುದೇ ರೀತಿಯಲ್ಲಿ ಪರಿಸರಕ್ಕೆ ಹಾನಿ ಮಾಡಬಾರದು. ನಾವು ಪರಿಸರದ ಬಗ್ಗೆ ಸಂವೇದನಾಶೀಲರಾಗಿರಬೇಕು ಮತ್ತು ಹೋಳಿಯನ್ನು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಬೇಕು.

(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News