ಅಕ್ಟೋಬರ್ 9 ರಂದು, ಶುಕ್ರನು ಬುಧನ ಆಳ್ವಿಕೆಯ ಕನ್ಯಾರಾಶಿಗೆ ಪ್ರವೇಶಿಸುತ್ತಾನೆ, ಅಲ್ಲಿ ಶುಕ್ರನು ಕನ್ಯಾರಾಶಿಯಲ್ಲಿ ಅತ್ಯಂತ ಕೆಳ ಸ್ಥಾನದಲ್ಲಿರುತ್ತಾನೆ. ಈ ಸಮಯದಲ್ಲಿ ಸೂರ್ಯನು ಕೂಡಾ ಕನ್ಯಾರಾಶಿಯಲ್ಲಿಯೇ ಇದ್ದು, ನೀಚಭಂಗ ರಾಜಯೋಗವನ್ನು ಸೃಷ್ಟಿಯಾಗುತ್ತದೆ.
ಅದೃಷ್ಟ ರಾಶಿಗಳು :
ನೀಚಭಂಗ ರಾಜಯೋಗ ಹೆಚ್ಚಾಗಿ ಅಶುಭವಾಗಿದ್ದರೂ, ಈ ಬಾರಿ, ಮೂರು ರಾಶಿಯವರ ಮೇಲೆ ಇದು ಶುಭ ಮತ್ತು ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತವೆ.
ಇದನ್ನೂ ಓದಿ : ಮನೆ ಬಾಗಿಲಿನ ಈ ಬದಿಯಲ್ಲಿ ಚಪ್ಪಲಿ ಬಿಡಲೇಬಾರದು! ದರಿದ್ರ ಅಂಟಿಕೊಂಡು ಕುಬೇರನ ಖಜಾನೆಯೂ ಖಾಲಿಯಾಗಿ ಬಿಡುವುದು
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ನೀಚಭಂಗ ಯೋಗವು ವಿಶೇಷ ಪ್ರಯೋಜನಗಳನ್ನು ತರಬಹುದು. ಕೆಲಸದ ಸ್ಥಳದಲ್ಲಿ ಯಶಸ್ಸಿನ ಹಾದಿಗಳು ತೆರೆದುಕೊಳ್ಳುತ್ತವೆ. ಉದ್ಯೋಗದಲ್ಲಿರುವವರು ತಮ್ಮ ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಏರುವರು. ಆರ್ಥಿಕ ಲಾಭವಾಗುವುದು. ನಿರುದ್ಯೋಗಿಗಳು ಉದ್ಯೋಗ ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ.
ತುಲಾ ರಾಶಿ : ಹಿಂದಿನ ವ್ಯವಹಾರ ನಿರ್ಧಾರಗಳು ಗಮನಾರ್ಹ ಲಾಭವನ್ನು ತರಬಹುದು. ಜೀವನದಲ್ಲಿ ನಡೆಯುತ್ತಿರುವ ಸಂಘರ್ಷಗಳು ಕೊನೆಗೊಳ್ಳುತ್ತವೆ. ಅವಿವಾಹಿತರಿಗೆ ವಿವಾಹ ಯೋಗ ಕುಡಿ ಬರುವುದು. . ಕುಟುಂಬದ ಗೌರವ ಹೆಚ್ಚಾಗುತ್ತದೆ. ಹೊಸ ಮೂಲಗಳಿಂದ ಬರುವ ಆದಾಯವು ಆರ್ಥಿಕ ಸಂಕಷ್ಟವನ್ನು ನಿವಾರಿಸುತ್ತದೆ.
ಇದನ್ನೂ ಓದಿ : 500 ವರ್ಷ ನಂತರ ಒಂದೇ ಬಾರಿ 3 ರಾಜಯೋಗ.. ಈ ರಾಶಿಗಳ ಬದುಕಿನ ದಿಕ್ಕೇ ಬದಲು.. ಅದೃಷ್ಟದ ಆಟ ಶುರು... ವೃತ್ತಿ ವ್ಯವಹಾರದಲ್ಲಿ ಅಪಾರ ಪ್ರಗತಿ!
ವೃಶ್ಚಿಕ ರಾಶಿ : ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಭೌತಿಕ ಸೌಕರ್ಯಗಳು ಹೆಚ್ಚಾಗುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಸಂಪತ್ತು, ಸಮೃದ್ಧಿ ಹೆಚ್ಚಾಗುವುದು.
(ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)









