Sharad Purnima: ಸೋಮವಾರ ಅಂದರೆ ಇಂದು (ಅಕ್ಟೋಬರ್ 6) ಶರದ್ ಪೂರ್ಣಿಮೆಯ ಶುಭ ಸಂದರ್ಭವಾಗಿದೆ. ಈ ಹುಣ್ಣಿಮೆಯನ್ನ ವರ್ಷದ ಎಲ್ಲಾ ಹುಣ್ಣಿಮೆಗಳಲ್ಲಿ ಅತ್ಯಂತ ಮಹತ್ವದ್ದೆಂದು ಪರಿಗಣಿಸಲಾಗಿದೆ. ಈ ಹುಣ್ಣಿಮೆಯ ದಿನದಂದು ಕೈಗೊಳ್ಳಬೇಕಾದ ಅಗತ್ಯ ಕೆಲಸಗಳೇನು ಅನ್ನೋದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಶರದ್ ಪೂರ್ಣಿಮೆಯಂದು ಕೆಲವು ಕೆಲಸಗಳನ್ನ ಮಾಡಿದ್ರೆ ನೀವು ವರ್ಷವಿಡೀ ಶ್ರೀಮಂತರಾಗಿರುತ್ತೀರಿ. ತಾಯಿ ಲಕ್ಷ್ಮಿದೇವಿ ನಿಮಗೆ ಆಶೀರ್ವಾದ ನೀಡಲಿದ್ದು, ಎಂದಿಗೂ ಕೈಬಿಡುವುದಿಲ್ಲ...
ಲಕ್ಷ್ಮಿದೇವಿ ಪೂಜಿಸಿ: ಸಂಜೆ ಲಕ್ಷ್ಮಿದೇವಿಯನ್ನು ಸರಿಯಾದ ಆಚರಣೆಗಳೊಂದಿಗೆ ಪೂಜಿಸಿ. ಭಕ್ತಿಯಿಂದ ತಾಯಿಗೆ ಆರತಿಯನ್ನ ಮಾಡಿ. "ಓಂ ಶ್ರೀಂ ಹ್ರೀಂ ಕ್ಲೀಂ ಮಹಾಲಕ್ಷ್ಮಿಯೈ ನಮಃ" ಎಂಬ ಮಂತ್ರವನ್ನ ಪಠಿಸಿರಿ. ದೇವಿಗೆ ಖೀರ್ (ಅಕ್ಕಿ ಕಡುಬು) ಅರ್ಪಿಸಿ. ನಂತರ, ಈ ಖೀರ್ ಅನ್ನ ಚಂದ್ರನ ಬೆಳಕಿನಲ್ಲಿ ಇರಿಸಿ.
ಇದನ್ನೂ ಓದಿ: ತುಲಾ ರಾಶಿಯಲ್ಲಿ ಬುಧನ ಸಂಚಾರ: ಈ ನಾಲ್ಕು ರಾಶಿಯವರಿಗೆ ಹೊಡೆಯಲಿದೆ ಜಾಕ್‌ಪಾಟ್, ಅದೃಷ್ಟವೋ ಅದೃಷ್ಟ
ಖೀರ್ ತಯಾರಿಸಿ: ಇದು ಶರದ್ ಪೂರ್ಣಿಮೆಯ ಪ್ರಮುಖ ಆಚರಣೆಯಾಗಿದೆ. ಈ ದಿನದಂದು ಜನರು ರಾತ್ರಿಯಲ್ಲಿ ಖೀರ್ ತಯಾರಿಸಿ ಚಂದ್ರನ ಬೆಳಕಿನಲ್ಲಿ ಇಡುತ್ತಾರೆ. ನಂತರ ಈ ಖೀರ್ ಅನ್ನ ಬೆಳಗ್ಗೆ ತಿನ್ನಲಾಗುತ್ತದೆ. ಈ ರಾತ್ರಿ ಚಂದ್ರನು ಅಮೃತ ಸುರಿಸುತ್ತಾನೆ ಮತ್ತು ಚಂದ್ರನ ಬೆಳಕಿನಲ್ಲಿ ಇಟ್ಟ ಖೀರ್ ಅಮೃತದಂತೆ ಆಗುತ್ತದೆ ಎಂದು ನಂಬಲಾಗಿದೆ. ಇದನ್ನ ಸೇವಿಸುವುದರಿಂದ ದೇಹಕ್ಕೆ ಅನೇಕ ಅದ್ಭುತ ಪ್ರಯೋಜನಗಳು ದೊರೆಯುತ್ತವೆ.
ಉಪವಾಸ ಮತ್ತು ಧ್ಯಾನ: ಶರದ್ ಪೂರ್ಣಿಮೆಯಂದು ಉಪವಾಸ ಮಾಡುವುದು ವಿಶೇಷ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗಿದೆ. ಈ ಹುಣ್ಣಿಮೆಯಂದು ಉಪವಾಸ ಆಚರಿಸುವ ಮತ್ತು ತಾಯಿ ಲಕ್ಷ್ಮಿದೇವಿಯನ್ನ ಧ್ಯಾನಿಸುವ ಭಕ್ತರು ತಮ್ಮ ಜೀವನದಲ್ಲಿ ಎಂದಿಗೂ ಸಂತೋಷ ಮತ್ತು ಸಮೃದ್ಧಿಯ ಕೊರತೆಯನ್ನ ಅನುಭವಿಸುವುದಿಲ್ಲವೆಂದು ಹೇಳಲಾಗುತ್ತದೆ.
ಇದನ್ನೂ ಓದಿ: ಗುರು ವಕ್ರಿ: ನವೆಂಬರ್‌ನಲ್ಲಿ ಈ ರಾಶಿಯವರಿಗೆ ಬೃಹಸ್ಪತಿ ವಿಶೇಷ ಆಶೀರ್ವಾದ, ಮಣ್ಣೂ ಹೊನ್ನಾಗುವ ಪರ್ವಕಾಲ
ಚಂದ್ರ ದರ್ಶನ ಮತ್ತು ಧ್ಯಾನ: ಶರದ್ ಪೂರ್ಣಿಮೆಯ ರಾತ್ರಿ ಖಂಡಿತ ಸ್ವಲ್ಪ ಹೊತ್ತು ಚಂದ್ರನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು. ಈ ದಿನ ಮಾನಸಿಕ ಸ್ಥಿರತೆ ಮತ್ತು ಆಧ್ಯಾತ್ಮಿಕ ಅಭ್ಯಾಸಕ್ಕೂ ಸೂಕ್ತವಾಗಿದೆ. ಅಲ್ಲದೇ ಶರದ್ ಪೂರ್ಣಿಮೆಯಂದು ನಿರ್ಗತಿಕರಿಗೆ ಆಹಾರ, ಬಟ್ಟೆ ಅಥವಾ ಹಣವನ್ನ ದಾನ ಮಾಡಿ. ಇದು ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದವನ್ನ ತರುತ್ತದೆ.
ಮನೆಯಲ್ಲಿ ದೀಪ ಬೆಳಗಿಸಿ: ಶರದ್ ಪೂರ್ಣಿಮೆಯಂದು ನಿಮ್ಮ ಮನೆಯ ಮುಖ್ಯ ದ್ವಾರ ಸೇರಿದಂತೆ ಪ್ರತಿಯೊಂದು ಮೂಲೆಯಲ್ಲಿ ಮತ್ತು ತುಳಸಿ ಗಿಡದ ಬಳಿ ದೀಪಗಳನ್ನ ಬೆಳಗಿಸಿ. ಇದು ಲಕ್ಷ್ಮಿದೇವಿಯನ್ನು ಮೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)









