)
ಜ್ಯೋತಿಷ್ಯದಂತೆ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿಯೂ ಶನಿಗ್ರಹವು ಬಹಳ ಮುಖ್ಯ. ಇದರ ಪ್ರಕಾರ ನಮ್ಮ ಅಂಗೈಯಲ್ಲಿ ಶನಿಗ್ರಹ ಮತ್ತು ಶನಿ ರೇಖೆ ಎರಡೂ ಇವೆ. ಇವೆರಡೂ ಬಹಳ ಮುಖ್ಯವಾದ ಸ್ಥಾನಗಳನ್ನು ಹೊಂದಿವೆ. ಅಂಗೈಯಲ್ಲಿ ಶುಭ ಶನಿ ಸ್ಥಾನ ಹೊಂದಿರುವವರ ಜೊತೆಗೆ ಅದೃಷ್ಟ ಇರುತ್ತದೆ. ಇವರು ಸಾಮಾನ್ಯವಾಗಿ 35 ಅಥವಾ 40 ವರ್ಷ ವಯಸ್ಸಿನ ನಂತರ ಅದ್ಭುತ ಯಶಸ್ಸನ್ನು ಅನುಭವಿಸುತ್ತಾರೆ. ಅಂಗೈಯಲ್ಲಿ ಶನಿಗ್ರಹ ಮತ್ತು ಶನಿ ರೇಖೆ ಎಲ್ಲಿದೆ ಮತ್ತು ಯಾವ ಪರಿಸ್ಥಿತಿಗಳಲ್ಲಿ ಶುಭ ಫಲಿತಾಂಶಗಳನ್ನು ನೀಡುತ್ತವೆ ಎನ್ನುವ ಮಾಹಿತಿ ಇಲ್ಲಿದೆ.
ಶನಿ ಪರ್ವತ ಮತ್ತು ಕೈಯಲ್ಲಿ ಶನಿ ರೇಖೆ :
ಶನಿ ಪರ್ವತವು ಅಂಗೈಯ ಮಧ್ಯದ ಬೆರಳಿನ ಕೆಳಗೆ ಇದೆ. ಇದು ಹೆಚ್ಚು ಎದ್ದು ಕಾಣುತ್ತಿದ್ದರೆ, ಉತ್ತಮ. ಈ ಪರ್ವತ ಅಥವಾ ಮಧ್ಯ ರೇಖೆಯಿಂದ ಕೆಳಕ್ಕೆ ಚಲಿಸುವ ರೇಖೆಯನ್ನು ಶನಿ ರೇಖೆ ಎಂದು ಕರೆಯಲಾಗುತ್ತದೆ. ಕೆಲವು ಜನರಲ್ಲಿ, ಈ ರೇಖೆಯು ಕೈಯ ಮಧ್ಯದಿಂದ ಪ್ರಾರಂಭವಾಗಿ ಮಣಿಕಟ್ಟಿನ ರೇಖೆಯವರೆಗೆ ವಿಸ್ತರಿಸುತ್ತದೆ. ಇದನ್ನು ಶನಿ ರೇಖೆ ಅಥವಾ ಅದೃಷ್ಟ ರೇಖೆ ಎಂದೂ ಕರೆಯಲಾಗುತ್ತದೆ.
ಇವರು ಕೋಟ್ಯಾಧಿಪತಿಗಳಾಗುವುದು ಖಂಡಿತಾ :
ಆಳವಾದ, ಸ್ಪಷ್ಟವಾದ ಮತ್ತು ಮುರಿಯದ ಶನಿ ರೇಖೆ ಅಥವಾ ಅದೃಷ್ಟ ರೇಖೆಯನ್ನು ಹೊಂದಿರುವ ಜನರು ತುಂಬಾ ಅದೃಷ್ಟವಂತರು. ಅಂಥಹ ರೇಖೆಯನ್ನು ಹೊಂದಿರುವವರುಜೀವನದಲ್ಲಿ ದೊಡ್ಡ ಯಶಸ್ಸನ್ನು ಸಾಧಿಸುತ್ತಾರೆ. ಇವರು ಬಹಳಷ್ಟು ಸಂಪತ್ತನ್ನು ಅನುವಂಶಿಕವಾಗಿ ಪಡೆಯುತ್ತಾರೆ. ಅವರು 40 ವರ್ಷಗಳ ನಂತರ ಖಂಡಿತವಾಗಿಯೂ ಶ್ರೀಮಂತರಾಗುವರು. ಅದೃಷ್ಟ ಸದಾ ಇವರ ಬೆನ್ನ ಹಿಂದೆ ಇದ್ದು ಕಾಪಾಡುತ್ತದೆ. ಇವರು ಜೀವನದಲ್ಲಿ ಸಂತೋಷ ಮತ್ತು ಗೌರವವನ್ನು ಅನುಭವಿಸುತ್ತಾರೆ. ಹಿರಿಯ ಅಧಿಕಾರಿ, ರಾಜಕಾರಣಿ ಅಥವಾ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಾರೆ. ಇವರು ಪ್ರಯತ್ನಿಸಿದರೆ, ಸರ್ಕಾರಿ ಉದ್ಯೋಗವನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು.
ಶನಿ ದೇವರ ಆಶೀರ್ವಾದ :
ಶನಿ ದೇವರು ಇಂಥವರ ಮೇಲೆ ವಿಶೇಷವಾಗಿ ದಯೆ ತೋರುತ್ತಾರೆ. ಅವರು ಕೆಲವೊಮ್ಮೆ ಕಷ್ಟಪಡಬೇಕಾಗಬಹುದು, ಆದರೆ ಅಂತಿಮವಾಗಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ.
(ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೊದಿಸುವುದಿಲ್ಲ.)