)
Lizard in Shakuna sashtra
: ಮನೆಯಲ್ಲಿ ಜಿರಳೆ, ಜೀರುಂಡೆ, ಕಣಜ ಮತ್ತು ಹಲ್ಲಿಗಳು ಇರುವುದು ತುಂಬಾ ಸಾಮಾನ್ಯ. ಕೆಲವರಿಗೆ ಮನೆಯಲ್ಲಿ ಹಲ್ಲಿಗಳು ಇರುವುದು ಇಷ್ಟವಾಗುವುದಿಲ್ಲ. ಅಂತಹ ಜನರು ಅವುಗಳನ್ನ ಓಡಿಸಲು ಇನ್ನಿಲ್ಲದ ಹರಸಾಹಸ ಪಡುತ್ತಾರೆ. ಇನ್ನು ಕೆಲವರು ಹಲ್ಲಿಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ ಮನೆಯಲ್ಲಿ ಕೀಟಗಳಿಗೆ ಏನೂ ಮಾಡದೆ ಹಾಗೆಯೇ ಬಿಡುತ್ತಾರೆ. ಕೆಲವರು ಹಲ್ಲಿಯನ್ನು ನೋಡುವುದು ಶುಭವೆಂದು ಪರಿಗಣಿಸುತ್ತಾರೆ. ಇನ್ನು ಕೆಲವರು ಅದನ್ನ ಅಶುಭವೆಂದು ಹೇಳುತ್ತಾರೆ. ಜ್ಯೋತಿಷ್ಯದ ಪ್ರಕಾರ, ಹಣದ ವಿಷಯಗಳಲ್ಲಿ ಹಲ್ಲಿಗಳನ್ನ ಶುಭವೆಂದು ಪರಿಗಣಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ..? ಇದರ ಬಗ್ಗೆ ವಾಸ್ತು ತಜ್ಞರು ಏನು ಹೇಳುತ್ತಾರೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಮನೆಗೆ ಹಲ್ಲಿಯ ಆಗಮನ, ಕೆಲವು ಸ್ಥಳಗಳಲ್ಲಿ ಅದು ಆಗಾಗ ಕಾಣಿಸಿಕೊಳ್ಳುವುದು ಮತ್ತು ಹಲ್ಲಿ ಮೈಮೇಲೆ ಬೀಳುವುದು ಕೆಲವು ವಿಶೇಷ ಸೂಚನೆಗಳನ್ನ ಒದಗಿಸುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯದ ಜೊತೆಗೆ ವಾಸ್ತು ಶಾಸ್ತ್ರವು ಹಲ್ಲಿಯನ್ನ ನೋಡುವುದರಿಂದ ಉಂಟಾಗುವ ಶುಭ ಮತ್ತು ಅಶುಭ ಚಿಹ್ನೆಗಳನ್ನ ವಿವರಿಸುತ್ತದೆ. ಹೊಸ ಮನೆಗೆ ವಾಸ್ತು ಪೂಜೆಯನ್ನ ಬೆಳ್ಳಿ ಹಲ್ಲಿಯ ವಿಗ್ರಹಗಳನ್ನ ಬಳಸಿ ಮಾಡಲಾಗುತ್ತದೆ. ಹಲ್ಲಿಗಳು ಮನೆಯಲ್ಲಿ ಸಂತೋಷ ಮತ್ತು ಸಂಪತ್ತನ್ನ ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಹಲ್ಲಿಗಳನ್ನ ನೋಡಿದರೆ ಅದನ್ನ ಬಹಳ ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ನೀವು ಹೆಚ್ಚಿನ ಹಣವ ಪಡೆಯಲಿದ್ದೀರಿ ಎಂಬುದನ್ನ ಸೂಚಿಸುತ್ತದೆ.
ದೀಪಾವಳಿಯಂದು ನಿಮ್ಮ ಮನೆಯಲ್ಲಿ ಹಲ್ಲಿ ಇದ್ದರೆ, ವರ್ಷಪೂರ್ತಿ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಎರಡು ಹಲ್ಲಿಗಳು ಒಟ್ಟಿಗೆ ಕಾಣಿಸಿಕೊಂಡರೆ ಹೆಚ್ಚು ಚಿಂತಿಸಬೇಕಾಗಿಲ್ಲ ಎಂದು ತಜ್ಞರು ಹೇಳುತ್ತಾರೆ. ಶುಭ ಮತ್ತು ಅಶುಭದ ನಡುವೆ ಯಾವುದೇ ಸಂಬಂಧವಿಲ್ಲವೆಂದು ಅವರು ಹೇಳುತ್ತಾರೆ. ಆದರೆ ಎರಡು ಹಲ್ಲಿಗಳು ಪರಸ್ಪರ ಜಗಳವಾಡುವುದನ್ನ ನೋಡಿದರೆ, ಅದು ಅಶುಭ ಚಿಹ್ನೆ ಎಂದು ಹೇಳಲಾಗುತ್ತದೆ. ಇದು ಕುಟುಂಬದಲ್ಲಿ ಅನಾರೋಗ್ಯ ಮತ್ತು ಜಗಳಗಳನ್ನು ಸೂಚಿಸುತ್ತದೆ ಅಂತಾ ಅವರು ಹೇಳುತ್ತಾರೆ. ನೆಲದ ಮೇಲೆ ಹಲ್ಲಿ ತೆವಳುವ ದೃಶ್ಯವನ್ನ ನೋಡುವುದನ್ನ ಶುಭ ಸಂಕೇತವೆಂದು ಪರಿಗಣಿಸಬೇಕು ಎಂದು ಸಹ ಹೇಳಲಾಗುತ್ತದೆ. ಆದರೆ ಅವುಗಳಿಗೆ ಹಾನಿ ಮಾಡದಂತೆ ಅವರು ಸಲಹೆ ನೀಡುತ್ತಾರೆ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)