Puttur Mahatobhara Sri Mahalingeshwara Kshetra: ಕಾಶಿಯ ಬಳಿಕ ದೇವಸ್ಥಾನದ ಪೂರ್ವಾಭಿಮುಖವಾಗಿ ಸ್ಮಶಾನ ಇರುವುದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.
)
Shiva temple with a cemetery in front of the temple: ವಾರಣಾಸಿಯಲ್ಲಿರುವ ಘಾಟ್ಗಳು ಗಂಗಾ ನದಿಯ ದಡಕ್ಕೆ ಕರೆದೊಯ್ಯುವ ನದಿಮುಖದ ಮೆಟ್ಟಿಲುಗಳಾಗಿವೆ. ಈ ನಗರದಲ್ಲಿ ಸುಮಾರು 88 ಘಾಟ್ಗಳಿದ್ದು, ಹೆಚ್ಚಿನ ಘಾಟ್ಗಳು ಸ್ನಾನ ಮತ್ತು ಪೂಜಾ ಘಾಟ್ಗಳಾಗಿದ್ದರೆ, ಎರಡು ಘಾಟ್ಗಳನ್ನು ದಹನ ಸ್ಥಳಗಳಾಗಿ ಮಾತ್ರ ಬಳಸಲಾಗುತ್ತದೆ.
ವಾರಣಾಸಿಯಲ್ಲಿರುವ ಗಂಗಾ ನದಿಯ ಹಳೆಯ ಪಟ್ಟಣದ ಉದ್ದಕ್ಕೂ ಮುನ್ಶಿ ಘಾಟ್ ಅತ್ಯಂತ ಫೋಟೊಜೆನಿಕ್ ಘಾಟ್ಗಳಲ್ಲಿ ಒಂದಾಗಿದೆ. ಈ ಘಾಟ್ 1900 ರ ದಶಕದ ಆರಂಭದಲ್ಲಿ ಬಿಹಾರದ ರಾಜಮನೆತನದಿಂದ ನಿರ್ಮಿಸಲ್ಪಟ್ಟ ಭವ್ಯವಾದ ಅರಮನೆಯಿಂದ ಸುತ್ತುವರೆದಿದೆ. 1812 ರಲ್ಲಿ ಅರಮನೆಯ ಕಟ್ಟಡದ ಒಂದು ಭಾಗದ ಪಕ್ಕದಲ್ಲಿ ನಿರ್ಮಿಸಲಾದ ಮುನ್ಶಿ ಘಾಟ್ಗೆ ನಾಗ್ಪುರದ ಭೋನ್ಸಾಲೆಸ್ ಆಸ್ಥಾನದಲ್ಲಿ ಹಣಕಾಸು ಮಂತ್ರಿಯಾಗಿದ್ದ ಶ್ರೀಧರ ನಾರಾಯಣ ಮುನ್ಶಿ ಅವರ ಹೆಸರನ್ನು ಇಡಲಾಗಿದೆ. 1915 ರಲ್ಲಿ ದರ್ಭಂಗಾದ ಬ್ರಾಹ್ಮಣ ರಾಜ ಕಾಮೇಶ್ವರ ಸಿಂಗ್ ಗೌತಮ್ ಬಹದ್ದೂರ್ ಈ ಘಾಟ್ ಅನ್ನು ಖರೀದಿಸಿ ಅದನ್ನು ವಿಸ್ತರಿಸಿದರು. ವಿಸ್ತರಣೆಯು ನಂತರ ದರ್ಭಂಗಾ ಘಾಟ್ ಎಂದು ಹೆಸರಾಯಿತು.
ಇನ್ನೊಂದು ದಶಾಶ್ವಮೇಧ ಘಾಟ್. ಇದು ವಾರಣಾಸಿಯಲ್ಲಿರುವ ಮುಖ್ಯ ಘಾಟ್. ಇದು ವಿಶ್ವನಾಥ ದೇವಾಲಯದ ಹತ್ತಿರದಲ್ಲಿದ್ದು ಅತ್ಯಂತ ಅದ್ಭುತವಾಗಿದೆ. ಎರಡು ಹಿಂದೂ ಪುರಾಣಗಳು ಈ ಘಾಟ್ಗೆ ಸಂಬಂಧ ಹೊಂದಿವೆ. ಒಂದು ಕಥೆಯ ಪ್ರಕಾರ, ಶಿವನನ್ನು ಸ್ವಾಗತಿಸಲು ಬ್ರಹ್ಮ ದೇವರು ಈ ಪ್ರದೇಶವನ್ನು ಸೃಷ್ಟಿಸಿದರು. ಇನ್ನೊಂದರ ಪ್ರಕಾರ, ಇಲ್ಲಿ ನಡೆದ ದಶ-ಅಶ್ವಮೇಧ ಯಜ್ಞದ ಸಮಯದಲ್ಲಿ ಬ್ರಹ್ಮ ದೇವರು ಹತ್ತು ಕುದುರೆಗಳನ್ನು ಆಹುತಿ ನೀಡಿದ್ದರು ಎನ್ನಲಾಗುತ್ತದೆ
ಇನ್ನು ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಈ ಘಾಟ್ನ ನಿಜವಾದ ಆಕರ್ಷಣೆ. ಈ ಘಾಟ್ ವರ್ಷಗಳಿಂದ ಭಕ್ತರು, ಯಾತ್ರಿಕರು ಮತ್ತು ಪ್ರವಾಸಿಗರಿಗೆ ಧಾರ್ಮಿಕ ಸ್ಥಳವಾಗಿದೆ. ಐತಿಹಾಸಿಕವಾಗಿ, ಇದನ್ನು ಹಿಂದೂ ಭಕ್ತರಲ್ಲಿ ಅತ್ಯಂತ ನೆಚ್ಚಿನ ಮತ್ತು ಮುಖ್ಯ ಘಾಟ್ ಎಂದು ಪರಿಗಣಿಸಲಾಗಿದೆ. ದಶಾಶ್ವಮೇಧ ಘಾಟ್ನ ಬಳಿ, ವಿವಿಧ ಧಾರ್ಮಿಕ ದೇವಾಲಯಗಳು ಮತ್ತು ಪ್ರವಾಸಿಗರ ತಾಣಗಳಿವೆ. ಇನ್ನು ಈ ವಿಶ್ವಪ್ರಸಿದ್ಧ ಕಾಶಿಯನ್ನು ಬಿಟ್ಟರೆ ದೇವಸ್ಥಾನದ ಮುಂದೆಯೇ ಸ್ಮಶಾನ ಇರುವ ಶಿವನ ದೇಗುಲ ಇರುವುದು ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರವೊಂದರಲ್ಲಿ.
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂರ್ವಾಭಿಮುಖವಾಗಿ ಸ್ಮಶಾನವೊಂದಿದೆ. ಕಾಶಿಯ ಬಳಿಕ ಹೀಗೆ ಶಿವನ ದೇವಾಲಯದ ಮುಂದೆಯೇ ಸ್ಮಶಾನ ಇರುವುದು ಈ ಕ್ಷೇತ್ರದಲ್ಲಿ ಮಾತ್ರ.
ಈ ಕ್ಷೇತ್ರದ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ದೇಗುಲದ ಇತಿಹಾಸ ಏನೆಂಬುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.
"ಬಹು ಪ್ರಾಚೀನ ಕಾಲದಲ್ಲಿ ವೇದ ವೇದಾಂತ ಪಾರಂಗತರಾದ ಶೈವ ಸಂಪ್ರದಾಯ ವಿಪ್ರರೊಬ್ಬರು ಕಾಶೀ ಕ್ಷೇತ್ರದಿಂದ ಶಿವಲಿಂಗವೊಂದನ್ನು ಪಡೆದುಕೊಂಡು ಅದನ್ನು ಅರ್ಚಿಸುತ್ತಾ ದಕ್ಷಿಣಾ ಪಥದಲ್ಲಿ ಸಂಚರಿಸುತ್ತಿದ್ದರು. ಶಿವಾರ್ಚನೆಯಲ್ಲೇ ಜೀವನವನ್ನು ಧನ್ಯವನ್ನಾಗಿ ಮಾಡಿಕೊಡಿದ್ದ ಈ ವಿಪ್ರೋತ್ತಮರು ಒಂದು ದಿನ ಗಯಾಪದ ಕ್ಷೇತ್ರವೆಂದು ಪಸಿದ್ಧವಾಗಿದ್ದ ಈಗಿನ ಉಪ್ಪಿನಂಗಡಿಗೆ ಬಂದಿದ್ದರು. ಆಗ ಈ ವೃದ್ಧ ವಿಪ್ರರನ್ನು ಭೇಟಿಯಾಗಿ ಅವರ ವ್ಯಕ್ತಿತ್ವದಿಂದ ಆಕರ್ಷಿತರಾದ ವಿಪ್ರರೊಬ್ಬರು ಅವರಲ್ಲಿ ಕುಶಲ ಪ್ರಶ್ನೆಗಳನ್ನು ಹಾಕಿದರು. ಕಾಶಿಯಿಂದ ಬಂದಿದ್ದ ವೃದ್ಧ ಬ್ರಾಹ್ಮಣರು ಪುತ್ತೂರಿಗೆ ಬರುವರೆಂದು ತಿಳಿದು ಬಂದುದರಿಂದ ಇಬ್ಬರಲ್ಲೂ ಆತ್ಮೀಯತೆ ಬೆಳೆಯಿತು".
"ತನ್ನ ಮಧ್ಯಾಹ್ನದ ಭೋಜಕ್ಕಿಂತ ಮೊದಲು ಶಿವಲಿಂಗಾರ್ಚನೆಯನ್ನು ಸಂಪ್ರದಾಯವನ್ನಾಗಿಟ್ಟುಕೊಂಡಿದ್ದ ಆ ವೃದ್ಧ ವಿಪ್ರರು ತನ್ನ ಸಂಪುಟದಿಂದ, ಸೂರ್ಯಪ್ರಭೆಯಿಂದ ಕಂಗೊಳಿಸುವ ಸುಂದರಾಕೃತಿಯ ಶಿವಲಿಂಗವೊಂದನ್ನುತೆಗೆದು ಗೋವಿಂದ ಭಟ್ಟರ ಕೈಗಿತ್ತು ಇದನ್ನು ಕೈಯಲ್ಲಿಟ್ಟುಕೋಂಡೇ ಪೂಜಿಸಬೇಕೆಂದು ತಿಳಿಸಿ, ತಾವು ಕುಮಾರಧಾರಾ ನದಿಗೆ ಸ್ನಾನಕ್ಕೆಂದು ಹೋದರು. ಎಷ್ಟು ಸಮಯ ಕಳೆದರೂ, ಅವರು ಹಿಂದಿರುಗದಿದ್ದುದನ್ನು ನೋಡಿ, ಬಲವಾಗಿ ಕರೆದರೂ, ಮರುತ್ತರ ಬಾರದಿರುವುದನ್ನು ಕಂಡು ಈ ಶಿವಲಿಂಗವನ್ನು ತೆಗೆದುಕೊಂಡು, ಸೂರ್ಯಸ್ತಮಾನಕ್ಕಿಂತ ಮೊದಲು ಪುತ್ತೂರನ್ನು ತಲುಪಿದರು. ಇಲ್ಲಿ ವಿಶ್ರಾಂತಿಯನ್ನು ತೆಗೆದುಕೊಂಡರು".
"ಮರುದಿನ, ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಪುತ್ತೂರಿನಲ್ಲಿ ಅರುಣೋದಯಕ್ಕೆ ಜಾಗೃತರಾದ ಈ ದ್ವಿಜರು ಶೌಚಾದಿಗಳನ್ನು ಮುಗಿಸಿ ಶಿವನ ಸೋಮವಾರದ ವಿಶೇಷ ಪೂಜೆಗೆ ಬೇಕಾದ ಸಾಹಿತ್ಯಗಳನ್ನು ಸಂಗ್ರಹಿಸುವುದಕ್ಕಾಗಿ ಬಂಗರ ಆರಮನೆಗೆ ಹೋದರು. ಜೈನ ಧರ್ಮದಲ್ಲಿ ಅತೀ ನಿಷ್ಠೆಯನ್ನು ಹೊಂದಿದ್ದ ಬಂಗರಾಯನು ಈ ವಿಪ್ರೋತ್ತಮರ ಬರವನ್ನು ಮನಸಃ ಗಮನಿಸಿಕೊಳ್ಳಲಿಲ್ಲ. ತನ್ನ ಸಹೋದರಿಯು ಪ್ರಸವ ವೇದನೆಯಿಂದ ನರಳುತ್ತಿದ್ದುದರಿಂದ ಬಂಗರಾಯನು ದುಃಖಾಕ್ರಾಂತನಾಗಿದ್ದನು".
"ಬಂಗರಸನ ಪ್ರಧಾನಿಯು ಆ ಬ್ರಾಹ್ಮಣನ ನಡವಳಿಕೆಯನ್ನೂ, ಮುಖತೇಜಸ್ಸನ್ನೂ ಕಂಡು ನಿರಾಸೆಯಲ್ಲಿದ್ದರೂ, ಏನಾದರೂ ಆಧಾರ ಸಿಗಬಹುದೋ, ಎಂಬ ಆಸೆಯಿಂದ ಆತನಲ್ಲಿ ತಮ್ಮ ಕಷ್ಟವನ್ನು ನಿವೇದಿಸಿಕೊಂಡಾಗ, ದಿವ್ಯ ಜ್ನಾನಿಯಂತಿದ್ದ, ಆ ಬ್ರಾಹ್ಮಣನು ತನ್ನಲ್ಲಿದ್ದ ಶಿವಲಿಂಗಕ್ಕೆ ನಮಸ್ಕರಿಸಿ, "ನಿನ್ನಿಚ್ಚೆಯಂತೆ ಆಗಲಿ, ಮಹೇಶ್ವರಾ" ಎಂದು ಪ್ರಾರ್ಥಿಸಿಕೊಂಡು ಬಂಗರಾಜನ ಸಹೋದರಿಗೆ ಪುತ್ರವತಿಯಾಗೆಂದು ಹರಸಿದನು. ಆವ್ಯಾಜ ಕರುಣಾಮೂರ್ತಿಯಾದ ಶಿವನ ದಯೆಯೋ, ಸತ್ಯನಿಷ್ಠ ಬ್ರಾಹ್ಮಣನ ಪ್ರಾರ್ಥನೆಯ ಬಲವೋ ಎಂಬಂತೆ ಬಂಗರಸನ ಸಹೋದರಿಯು ಗಂಡು ಮಗುವನ್ನು ಪ್ರಸವಿಸಿದಳು. ಬಂಗರಸನೂ, ಪ್ರಧಾನಿಯೂ, ಊರಿನ ಜನರೂ ಬ್ರಾಹ್ಮಣನ ತಪಶ್ಯಕ್ತಿಗೆ ಬೆರಗಾಗಿ ಅವನಿಗೆ ಶಿರಸಾ ವಂದಿಸಿದರು. ಶಿವಾರ್ಚನೆಗೆ ಬೇಕಾದ ಸರ್ವ ವಿಧದ ಸಾಮಾಗ್ರಿಗಳನ್ನೂ ಕೊಟ್ಟರು".
"ಶಿವಾರ್ಚನೆಯೇ ಉಸಿರಾಗಿರುವ ಆ ಬ್ರಾಹ್ಮಣೋತ್ತಮನು ಮುಖ ಕ್ಷೌರವನ್ನು ಮಾಡಿಕೊಂಡು ಇಲ್ಲಿನ ಕೆರೆಯಲ್ಲಿ ಮಿಂದು ಮರೆತೋ, ತಿಳಿಯದೆಯೋ ಶಿವಲಿಂಗವನ್ನು ಭೂಮಿಯಿಂದ ಮೇಲೆತ್ತಿ ತನ್ನ ಪೆಟ್ಟಿಗೆಗೆ ಹಾಕಿಕೊಳ್ಳಲು ಪ್ರಯತ್ನಿಸಿದನು. ಶಿವಲಿಂಗವು ಮೇಲೆ ಬರಲಿಲ್ಲ. ಇನ್ನಷ್ಟು ಶಕ್ತಿಯಿಂದ ಮೇಲೆತ್ತಲು ಪ್ರಯತ್ನಿಸಿದರೂ, ಲಿಂಗವನ್ನು ಕದಲಿಸುವುದಕ್ಕಾಗಲಿಲ್ಲ. ಕೋಪದಂದ ತನ್ನ ಪೂರ್ಣ ಶಕ್ತಿಯನ್ನು ಉಪಯೋಗಿಸಿದರೂ, ಶಿವಲಿಂಗವು ಗಟ್ಟಿಯಾಗಿಯೇ ನೆಲವನ್ನು ಹಿಡಿದುಕೊಂಡಿತ್ತು".
"ಶಿವಾಪರಾಧವಾಯಿತೆಂದು ಬ್ರಾಹ್ಮಣೋತ್ತಮನು ಕಕ್ಕಾಬಿಕ್ಕಿಯಾದನು. ದುಃಖಿತನಾದನು. ಅಶ್ರುಧಾರೆಯೂ ಹರಿಯಿತು. ಗದ್ಗದ ಕಂಠದಿಂದ ಶಿವನನ್ನು ಸ್ತುತಿಸಿದನು. ಆದರೆ ದೈವನಿರ್ಣಯವನ್ನು ಬಲ್ಲವರಾರು? ಲಿಂಗರೂಪಿ ಮಹಾದೇವನು ಪುತ್ತೂರಿನ ಪುಣ್ಯಭೂಮಿಯಲ್ಲೇ ನೆಲೆಸಲು ಸಂಕಲ್ಪ ಮಾಡಿದ್ದನು. ಹತ್ತಾರು ಜನ ಸೇರಿ, ಶಿವಲಿಂಗವನ್ನು ಎತ್ತಲು ಪ್ರಯತ್ನಿಸಿದರು. ಪುತ್ತೂರಿನ ಜನರ ನಿರ್ಮಳಾಂತಃಕರಣದಲ್ಲಿ ಆಗಲೇ ನೆಲೆಯಾಗಿದ್ದ ಮಹಾದೇವನು, ಬಾಹ್ಯ ಪ್ರಯತ್ನಗಳಿಗೆ ಒಳಗಾಗಿ ನೆಲೆಬಿಟ್ಟು ಮೇಲೇಳಲಿಲ್ಲ. ಲಿಂಗರೂಪಿಯಾದ ಮಹಾದೇವನು ಪುತ್ತೂರಿನಲ್ಲೇ ಪ್ರಸನ್ನನಾಗಿ ನೆಲೆ ನಿಲ್ಲುವ ಭವ್ಯ ಭವಿಷ್ಯದ ಕಲ್ಪನೆಯೇ ಇಲ್ಲದ ಜನರು ಬಂಗರಸನ ಸಿಪಾಯಿಗಳನ್ನು ಕರೆದು ಲಿಂಗವನ್ನು ಎತ್ತಲು ಮತ್ತೊಮ್ಮೆ ಪ್ರಯತ್ನಿಸಿದರು. ಆಳುಕಾಳು ಪರಿಜನರು ಪುರ ಜನರು, ಪಟ್ಟ ಎಲ್ಲಾ ಪ್ರಯತ್ನಗಳೂ ನಿಷ್ಪ್ರಯೋಜಕವಾದವು".
ಬಂಗರಸನ ಭೀಮಬಲದ ಗಜರಾಜನನ್ನು ಕರೆತಂದು ಸರಪಳಿಯಿಂದ ಶಿವಲಿಂಗವನ್ನು ಬಿಗಿದು, ಆನೆಯಿಂದ ಲಿಂಗವನ್ನು ಎಳೆಸಲಾಯಿತು. ಆಗ ಕಿರಿದಾದ ಶಿವಲಿಂಗವು ಭೂಮರೂಪವನ್ನು ತಾಳಿ ಮಹಾಲಿಂಗೇಶ್ವರನಾಗಿ ಕಂಗೊಳಿಸಿದನು. ಇದಾವುದನ್ನು ಗಮನಿಸದ ಆನೆಯು ಇನ್ನೂ ಶಿವಲಿಂಗವನ್ನು ಎಳೆಯುತ್ತಿದ್ದುದರಿಂದ ನೋವಿನಿಂದ ಭಯಂಕರವಾಗಿ ಘೀಳಿಡುತ್ತಾ ಮಂದರಗಿರಿಯೇ ಧರೆಗುರುಳುವಂತೆ ಧೊಪ್ಪನೆ ಬಿದ್ದಿತು. ಆಗ, ಆನೆಯ ಆಂಗಾಗಳು ಛಿದ್ರಗೊಂಡು ದೂರದೂರುಗಳಿಗೆ ಎಸೆಯಲ್ಪಟ್ಟವು. ಆನೆಯ ಕೊಂಬು ಬಿದ್ದ ಸ್ಥಳವು ಮುಂದೆ ಕೊಂಬೆಟ್ಟು ಎಂದು ಕರೆಯಲ್ಪಟ್ಟಿತು. ಅದರಂತೆ ಕರಿ ಬಿದ್ದಲ್ಲಿ ಕರಿಯಾಲ, ಕಾಲು ಬಿದ್ದಲ್ಲಿ ಕಾರ್ಜಾಲ, ಕೈ ಬಿದ್ದಲ್ಲಿ ಕೈಪಳ, ಬಾಲ ಬಿದ್ದಲ್ಲಿ ಬೀದಿಮಜಲು ತಲೆ ಬಿದ್ದಲ್ಲಿ ತಾಲೆಪ್ಪಾಡಿ, ಬೆನ್ನು ಬಿದ್ದಲ್ಲಿ ಬೆರಿಪದವು ಎಂಬ ಹೆಸರುಗಳಾದವು. ಆನೆ ಬಿದ್ದ ಹೊಂಡವೇ ಕೆರೆಯಾಗಿ ಆ ಕೆರೆಯ ನೀರು ಗಜ ಸಂತತಿಗೆ ವಿಷಪ್ರಾಯವಾಗಿ, ಇಂದಿಗೂ ಆ ನೀರನ್ನು ಆನೆಗಳಿಗೆ ಕುಡಿಸುವಂತಿಲ್ಲ".
"ಸರ್ವ ಕಾರ್ಯಗಳಿಗೂ ಕಾರಣನಾದ ಶ್ರೀ ಮಹಾಲಿಂಗೇಶ್ವರನನ್ನು ಆಗ ಭಕ್ತಿಭಾವದಂದ ಮಹಾದೇವನೆಂದು ಸ್ತುತಿಸಲಾಯಿತು. ಆಗಮೋಕ್ತ ಪದ್ಧತಿಯಲ್ಲಿ ಅರ್ಚಿಸಲಾಯಿತು. ಮಂತ್ರ ಜಲಾಭಿಷೇಕವನ್ನು ಗೈದು ತುಂಬೆ, ಕರವೀರಾದಿ ಪುಷ್ಪಗಳಿಂದಲೂ, ನಾರಿಕೇಳ ರಂಭಾದಿ ಫಲಗಳಿಂದಲೂ, ಬಿಲ್ವಪತ್ರಾದಿ ಪತ್ರಗಳಿಂದಲೂ, ಕರ್ಪೂರ, ಅಗರು, ಚಂದನಾದಿ ಸುಗಂಧ ದ್ರವ್ಯಗಳಿಂದಲೂ ಪೂಜಿಸಲಾಯಿತು. ಸುಪ್ರಸನ್ನನಾದ ಶಿವನು ಮಂಗಳಕರನಾಗಿ ಮಹಾಲಿಂಗೇಶ್ವರನಾಗಿ ಪುತ್ತೂರಿನ ಪುಣ್ಯಭೂಮಿಯಲ್ಲಿ ನೆಲೆಸಿದನು".
ಇದು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇಗುಲದ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಮಾಹಿತಿಯಾಗಿದ್ದು, ಅದನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಇದೇ ವರದಿಯಲ್ಲಿ, "ಪುತ್ತೂರು ಮಹಾಲಿಂಗೇಶ್ವರ ಕೇವಲ ಪುತ್ತೂರಿಗೆ ಮಾತ್ರವಲ್ಲ ಹತ್ತೂರಿಗೂ ಒಡೆಯ, ಕಾಶಿಯನ್ನು ಬಿಟ್ಟರೆ ದೇವಾಲಯದ ಎದುರು ಸ್ಮಶಾನ ಇರುವ ಮತ್ತೊಂದು ದೇವಲಾಯವೆಂದರೆ ಅದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ" ಎಂದು ಉಲ್ಲೇಖ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.