)
Guru Gochar Phala: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧನುರ್ ಮಾಸದಲ್ಲಿ ದೇವಾನುದೇವತೆಗಳ ಗುರು ಎನ್ನಲಾಗುವ ಗುರು ಹಿಮ್ಮುಖವಾಗಿ ಚಲಿಸುವ ಮೂಲಕ ಕರ್ಕಾಟಕ ರಾಶಿಯಿಂದ ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಡಿಸೆಂಬರ್ 04, 2025ರಂದು ಮಿಥುನ ರಾಶಿಗೆ ಹಿಮ್ಮುಖವಾಗಿ ಮರಳಲಿರುವ ಗುರು 12 ವರ್ಷಗಳ ಬಳಿಕ ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟವನ್ನು ತರಲಿದ್ದಾನೆ ಎನ್ನಲಾಗುತ್ತಿದೆ. ವಕ್ರೀ ಗುರು ಪ್ರಭಾವ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಏನು ಫಲ ನೀಡಲಿದೆ ತಿಳಿಯಲು ಮುಂದೆ ಓದಿ...
ಮೇಷ ರಾಶಿ:
ಗುರು ವಕ್ರಿ ಪ್ರಭಾವದಿಂದ ಈ ರಾಶಿಯವರಿಗೆ ಕೌಟುಂಬಿಕ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ. ವೃತ್ತಿ ಬದುಕಿನಲ್ಲಿ ನಿಮ್ಮ ಸೋಮಾರಿತನಕ್ಕೆ ಭಾರೀ ಬೆಲೆ ತೆತ್ತಬೇಕಾಗಬಹುದು. ಈ ವೇಳೆ ಆಧ್ಯಾತ್ಮಿಕ ಪ್ರವಾಸಗಳನ್ನು ಕೈಗೊಳ್ಳುವ ಸಂಭವವೂ ಇದೆ. ಹಣದ ವಿಚಾರದಲ್ಲಿ ಯಾರನ್ನೂ ನಂಬಬೇಡಿ.
ವೃಷಭ ರಾಶಿ:
ಗುರು ಹಿಮ್ಮುಖ ಚಲನೆಯು ಈ ರಾಶಿಯವರಿಗೆ ಮಾತಿನಲ್ಲಿ ಎಚ್ಚರಿಕೆಯಿಂದ ಇರಬೇಕಾದ ಸಮಯ. ಈ ವೇಳೆ ಸ್ವಲ್ಪ ಅಜಾಗರೂಕತೆಯೂ ನಿಮ್ಮನ್ನು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಸಬಹುದು. ಆದಾಗ್ಯೂ, ಈ ರಾಶಿಯ ವಿವಾಹಿತ ಹೆಣ್ಣು ಮಕ್ಕಳಿಗೆ ಪತಿಯಿಂದ ಭಾರೀ ಪ್ರಯೋಜನವಾಗಲಿದೆ. ಕುಟುಂಬದಲ್ಲಿ ಸುಖ-ಸಂತೋಷ ತುಂಬಿ ತುಳುಕಲಿದೆ.
ಮಿಥುನ ರಾಶಿ:
ಧನುರ್ ಮಾಸದಲ್ಲಿ ಮಿಥುನ ರಾಶಿಗೆ ಹಿಮ್ಮುಖವಾಗಿ ವಾಪಸ್ ಆಗಲಿರುವ ಗುರು ಈ ರಾಶಿಯವರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲಲಿದ್ದಾನೆ. ಈ ವೇಳೆ ದೃಢ ನಿಶ್ಚಯದಿಂದ ಯಾವುದೇ ಕೆಲಸ ಮಾಡಿದರೂ ಯಶಸ್ಸು ದೊರೆಯಲಿದೆ. ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಅನುಭವಿಸುವಿರಿ. ಆದರೆ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಕಟಕ ರಾಶಿ:
ಗುರು ಹಿಮ್ಮುಖ ಸಂಚಾರವು ಈ ರಾಶಿಯವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಮನೆಯವರಿಗೆ ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಮಂಗಳ ಕಾರ್ಯಗಳಲ್ಲಿ ಅಡೆತಡೆಗಳು ಉದ್ಭವಿಸಬಹುದು. ಏನೇ ಆದರೂ ಧೈರ್ಯವಾಗಿ ಮುನ್ನುಗುವುದರಿಂದ ನಿಮ್ಮ ಪ್ರಗತಿಯ ಹಾದಿಯನ್ನು ಕಂಡು ಕೊಳ್ಳಬಹುದು.
ಸಿಂಹ ರಾಶಿ:
ಧನುರ್ ಮಾಸದಲ್ಲಿ ಗುರು ಹಿಮ್ಮುಖ ಚಲನೆಯಿಂದ ಈ ರಾಶಿಯ ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿ ಬರಲಿದೆ. ಪೂರ್ವಜರ ಆಸ್ತಿಯಿಂದ ಲಾಭಾಗಲಿದೆ. ವೃತ್ತಿ-ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವಿರಿ. ಬಹುಕಾಲದ ನಿಮ್ಮ ಕನಸೊಂದು ನನಸಾಗುವ ಪರ್ವಕಾಲ ಇದಾಗಿದೆ.
ಕನ್ಯಾ ರಾಶಿ:
ಗುರು ವಕ್ರೀ ಪ್ರಭಾವದಿಂದಾಗಿ ಈ ರಾಶಿಯವರ ಹಣಕಾಸಿನ ಬದುಕಿನಲ್ಲಿ ಸಾಕಷ್ಟು ಏರಿಳಿತ ಕಂಡು ಬರಲಿದೆ. ಉದ್ಯೋಗ ರಂಗದಲ್ಲೂ ಬದಲಾವಣೆಗಳು ಸಂಭವಿಸಬಹುದು. ವ್ಯವಹಾರದಲ್ಲಿ ಭಾರೀ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು.
ತುಲಾ ರಾಶಿ:
ಹಿಮ್ಮುಖ ಗುರು ಈ ರಾಶಿಯವರ ಜಾತಕದಲ್ಲಿ ಬಲಶಾಲಿ ಆಗಲಿದ್ದಾನೆ. ಈ ಸಮಯವು ತುಲಾ ರಾಶಿಯವರಿಗೆ ಭಾರೀ ಅದೃಷ್ಟದ ಸಮಯವಾಗಿದ್ದು ಮನೆಯಲ್ಲಿ ಮಕ್ಕಳ ಮದುವೆ ಇತ್ಯಾದಿ ಶುಭ ಸಮಾರಂಭಗಳಿಗೆ ಯೋಚಿಸುತ್ತಿದ್ದರೆ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲಿವೆ.
ವೃಶ್ಚಿಕ ರಾಶಿ:
ಗುರು ಹಿಮ್ಮುಖ ಚಲನೆ ಈ ರಾಶಿಯವರಿಗೆ ಅತ್ಯುತ್ತಮ ಸಮಯ. ಹಠಾತ್ ಧನಲಾಭವು ನಿಮ್ಮನ್ನು ಸಾಲಭಾದೆಯಿಂದ ಹೊರ ತರಲಿದೆ. ವ್ಯವಹಾರದಲ್ಲಿ ಭರ್ಜರಿ ಆದಾಯವನ್ನು ಕಾಣಬಹುದು. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದ್ದು ಹೊಸ ಆಸ್ತಿ ಖರೀದಿ ಬಗ್ಗೆ ಯೋಚಿಸಬಹುದು. ಮನೆಯಲ್ಲಿ ಸುಖ-ಸಂಪತ್ತು ವೃದ್ಧಿಯಾಗಲಿದೆ.
ಧನು ರಾಶಿ:
ವಕ್ರೀ ಗುರು ಈ ರಾಶಿಯ ವಿವಾಹಿತ ದಂಪತಿಗಳ ಬಾಳಲ್ಲಿ ಸಂತೋಷವನ್ನು ಇಮ್ಮಡಿಗೊಳಿಸಲಿದ್ದಾನೆ. ಮಕ್ಕಳ ಭಾಗ್ಯ ದೊರೆಯಲಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದ್ದು ಪ್ರೀತಿ-ವಾತ್ಸಲ್ಯ ಗಟ್ಟಿಯಾಗಲಿದೆ. ಆದಾಗ್ಯೂ, ಈ ರಾಶಿಯ ವ್ಯಾಪಾರಸ್ಥರು ದುಡ್ಡಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು.
ಮಕರ ರಾಶಿ:
ಈ ವರ್ಷಾಂತ್ಯದಲ್ಲಿ ಗುರು ಹಿಮ್ಮುಖ ಚಲನೆಯು ಈ ರಾಶಿಯವರಿಗೆ ಸವಾಲಿನ ಸಂದರ್ಭಗಳನ್ನು ನೀಡಲಿದೆ. ಈ ವೇಳೆ ನಿಮ್ಮ ವಿರೋಧಿಗಳ ಬಗ್ಗೆ, ಶತ್ರುಗಳ ಬಗ್ಗೆ ತುಂಬಾ ಜಾಗರೂಕರಾಗಿ ಇರಬೇಕು. ವ್ಯವಹಾರದಲ್ಲಿ ಅದರಲ್ಲೂ ಪಾಲುದಾರಿಕೆ ವ್ಯವಹಾರದಲ್ಲಿ ಯಾರನ್ನೂ ನಂಬಬೇಡಿ. ನಿಮ್ಮ ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಟ್ಟು ಮುನ್ನಡೆದರೆ ಜಯ.
ಕುಂಭ ರಾಶಿ:
ಗುರು ಹಿಮ್ಮುಖ ಸಂಚಾರ ಈ ರಾಶಿಯವರಿಗೆ ದುಪ್ಪಟ್ಟು ಆರ್ಥಿಕ ಲಾಭವನ್ನು ನೀಡಲಿದೆ. ಈ ವೇಳೆ ಸ್ವಂತ ಮನೆ ಕಟ್ಟುವ ನಿಮ್ಮ ಕನಸು ಸಾಕಾರಗೊಳ್ಳಲಿದೆ. ಮನೆಯಲ್ಲಿ ಮಕ್ಕಳ ಉನ್ನತ ಶಿಕ್ಷಣ, ಮದುವೆಯಂತಕ ಶುಭ ಕಾರ್ಯಗಳು ವೇಗವನ್ನು ಪಡೆಯಲಿವೆ. ಪ್ರೀತಿ-ಪ್ರೇಮದಲ್ಲಿರುವವರಿಗೆ ಕುಟುಂಬದವರ ಬೆಂಬಲ ದೊರೆಯಲಿದೆ.
ಮೀನ ರಾಶಿ:
ಗುರು ವಕ್ರೀ ಪ್ರಭಾವದಿಂದ ಈ ರಾಶಿಯವರಿಗೆ ಮಿಶ್ರ ಫಲವನ್ನು ನೀಡಲಿದೆ. ಉದ್ಯೋಗ-ವ್ಯವಹಾರದಲ್ಲಿ ಸ್ವಲ್ಪ ಜಾಗರೂಕರಾಗಿದ್ದಲ್ಲಿ ಭಾರೀ ಯಶಸ್ಸು ನಿಮ್ಮ ಕೈ ಹಿಡಿಯಲಿದೆ. ಕುಟುಂಬದಲ್ಲಿ ವೈಮನಸ್ಯ ಮೂಡಬಹುದು. ಆದರೆ, ನಿಮ್ಮ ಸರಳ ಮಾತು, ನಡವಳಿಕೆಯು ಎಲ್ಲವನ್ನೂ ಬಗೆಹರಿಸಲಿದೆ. ಈ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.