ವಾಸ್ತುಶಾಸ್ತ್ರದ ಪ್ರಕಾರ ಮನೆಯ ದಿಕ್ಕುಗಳು ಸಕಾರಾತ್ಮಕ ಶಕ್ತಿಯ ಹರಿವನ್ನು ನಿರ್ಧರಿಸುತ್ತವೆ. ವಿಶೇಷವಾಗಿ ಉತ್ತರ ದಿಕ್ಕು ಸಂಪತ್ತಿನ ಅಧಿಪತಿ ಭಗವಾನ್ ಕುಬೇರನಿಗೆ ಸಂಬಂಧಿಸಿದ್ದು, ಇಲ್ಲಿ ಸರಿಯಾದ ವಸ್ತುಗಳನ್ನು ಇರಿಸುವುದರಿಂದ ಆರ್ಥಿಕ ಸ್ಥಿರತೆ, ಸಂತೋಷ ಮತ್ತು ಧನಾತ್ಮಕ ಶಕ್ತಿ ದೊರೆಯುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ.ಈ ಕೆಳಗಿನ ನಾಲ್ಕು ಶುಭ ವಸ್ತುಗಳನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇರಿಸಿ, ಕುಬೇರನ ಆಶೀರ್ವಾದ ಪಡೆಯಿರಿ:
1. ತಿಜೋರಿ (ಬೀರುವಾ)
ಹಣ, ಆಭರಣ, ಮುಖ್ಯ ದಾಖಲೆಗಳನ್ನು ಇಡುವ ತಿಜೋರಿಯನ್ನು ಉತ್ತರ ದಿಕ್ಕಿನಲ್ಲಿ ಇರಿಸಿ.
ತಿಜೋರಿ ತೆರೆಯುವ ಬಾಗಿಲು ಉತ್ತರ ದಿಕ್ಕಿನ ಕಡೆಗೆ ತೆರೆಯಬೇಕು.
ಪ್ರಯೋಜನ: ಹಣದ ಹರಿವು ಸ್ಥಿರವಾಗುತ್ತದೆ, ಆರ್ಥಿಕ ನಷ್ಟ ತಪ್ಪುತ್ತದೆ.
3. ಕುಬೇರ ವಿಗ್ರಹ ಅಥವಾ ಯಂತ್ರ
ಕುಬೇರನ ಮೂರ್ತಿ ಅಥವಾ ಯಂತ್ರವನ್ನು ಉತ್ತರ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ.
ನಿಯಮಿತ ಪೂಜೆ ಮಾಡಿ.
ಪ್ರಯೋಜನ: ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ, ನಕಾರಾತ್ಮಕತೆ ದೂರವಾಗುತ್ತದೆ, ಹಣದ ಕೊರತೆ ಎಂದಿಗೂ ಬರುವುದಿಲ್ಲ.
3. ನೀರಿನ ಕಾರಂಜಿ ಅಥವಾ ನೀರಿನ ಪಾತ್ರೆ
ಸಣ್ಣ ನೀರಿನ ಕಾರಂಜಿ ಅಥವಾ ಶುದ್ಧ ನೀರಿನ ಪಾತ್ರೆಯನ್ನು ಉತ್ತರ ದಿಕ್ಕಿನಲ್ಲಿ ಇರಿಸಿ.
ಕಾರಂಜಿ ಇಲ್ಲದಿದ್ದರೆ, ನೀರಿನ ಶುದ್ಧೀಕರಣ ಯಂತ್ರ ಅಥವಾ ಯಾವುದೇ ನೀರಿನ ಪಾತ್ರೆ ಸಾಕು.
ಪ್ರಯೋಜನ: ಹರಿಯುವ ನೀರು ಸಂಪತ್ತಿನ ಹರಿವನ್ನು ಸೂಚಿಸುತ್ತದೆ, ಆರೋಗ್ಯ ಮತ್ತು ಸಮೃದ್ಧಿ ದೊರೆಯುತ್ತದೆ.
4. ಅಕ್ವೇರಿಯಂ
ಉತ್ತರ ದಿಕ್ಕಿನಲ್ಲಿ ಅಕ್ವೇರಿಯಂ ಇರಿಸಿ.
ಒಂಬತ್ತು ಮೀನುಗಳು (೮ ಗೋಲ್ಡ್ ಫಿಷ್ + ೧ ಬ್ಲ್ಯಾಕ್ ಫಿಷ್) ಇದ್ದರೆ ಉತ್ತಮ.
ನೀರನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.
ಪ್ರಯೋಜನ: ಉದ್ಯೋಗದಲ್ಲಿ ಉನ್ನತಿ, ವ್ಯಾಪಾರದಲ್ಲಿ ಲಾಭ, ಆರ್ಥಿಕ ಬಲವರ್ಧನೆ.
ಸೂಚನೆ: ಈ ವಾಸ್ತು ಸಲಹೆಗಳು ಶಾಸ್ತ್ರೀಯ ನಿಯಮಗಳು ಮತ್ತು ನಂಬಿಕೆಗಳ ಮೇಲೆ ಆಧಾರಿತ. ಇದನ್ನು ಅನುಸರಿಸುವುದು ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟಿದ್ದು, ಯಾವುದೇ ಗ್ಯಾರಂಟಿ ಇರುವುದಿಲ್ಲ.ಜೀ ಕನ್ನಡ ನ್ಯೂಸ್ ಇದನ್ನು ಧೃಡಿಕರಿಸುವುದಿಲ್ಲ.









